Untitled Document
Sign Up | Login    
Dynamic website and Portals
  
July 9, 2015

ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ: ಪುಟಿನ್

ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ (ಚಿತ್ರ ಕೃಪೆ:www.pmindia.gov.in) ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ (ಚಿತ್ರ ಕೃಪೆ:www.pmindia.gov.in)

ಉಫಾ : ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ ಸದಸ್ಯತ್ವ ಪಡೆಯುವ ಅಂಚಿನಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.

ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ರಷ್ಯಾದ ಉಫಾ ತಲುಪಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪುಟಿನ್, ಭಾರತವನ್ನು ಶಾಂಘೈ ಸಹಕಾರಿ ಸಂಘಟನೆಯಲ್ಲಿ ಸದಸ್ಯ ರಾಷ್ಟ್ರವನ್ನಾಗಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದರು.

ಪಾಕಿಸ್ತಾನ ಕೂಡ ಶಾಂಘೈ ಸಹಕಾರ ಸಂಘಟನೆಯಲ್ಲಿ ಸದಸ್ಯತ್ವ ಪಡೆಯುವ ನಿರೀಕ್ಷೆ ಇದೆ. ಈ ಮೊದಲು ಸದಸ್ಯತ್ವ ಪಡೆಯಲು ಬಯಸಿದ್ದ ಭಾರತದ ಪ್ರಯತ್ನಕ್ಕೆ ಚೀನಾ ಪ್ರತಿರೋಧ ಉಂಟು ಮಾಡಿತ್ತು. ಆದರೆ ಕಳೆದ ವರ್ಷ ಭಾರತಕ್ಕೆ ಆಗಮಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಬಳಿ ಪ್ರಧಾನಿ ಮೋದಿ ಈ ವಿಷಯವಾಗಿ ಮಾತನಾಡಿದ್ದರು. ಆದರೆ ಚೀನಾ, ಭಾರತದ ಜೊತೆ ಪಾಕಿಸ್ತಾನಕ್ಕೂ ಸದಸ್ಯತ್ವ ನೀಡುವುದನ್ನು ಖಾತರಿ ಮಾಡಿಕೊಂಡಿತ್ತು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ಶಾಂಘೈ ಸಹಕಾರ ಸಂಘಟನೆಯಲ್ಲಿ ಕೇವಲ ವೀಕ್ಷಕ ದೇಶವಾಗಿವೆ.

ಶಾಂಘೈ ಸಹಕಾರ ಸಂಘಟನೆಯಲ್ಲಿ ಸದಸ್ಯತ್ವ ಪಡೆಯಲು ಸಹಕರಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ನತೆ ತಿಳಿಸಿದರು.

ದ್ವಿಪಕ್ಷೀಯ ಮಾತುಕತೆಯಲ್ಲಿ ಎರಡು ದೇಶಗಳ ಮಧ್ಯೆ ವೀಸಾ ಉದಾರೀಕರಣ ಸಾಧ್ಯತೆ ಜೊತೆ ಇತರ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜಯಶಂಕರ್ ತಿಳಿಸಿದರು.

ಇದಲ್ಲದೇ, ನಾಗರಿಕ ಪರಮಾಣು ಸಹಕಾರ, ಸಂಪರ್ಕ ಸಮಸ್ಯೆ ಮತ್ತು ಉತ್ತರ-ದಕ್ಷಿಣ ಪ್ರಾದೇಶಿಕ ಸಾರಿಗೆ ಕಾರಿಡಾರ್ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಎಸ್.ಜಯಶಂಕರ್ ತಿಳಿಸಿದ್ದಾರೆ.

ಯುಎನ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಘೋಷಿಸಲು ಸಹಕಾರ ನೀಡಿದ ರಷ್ಯಾಗೆ ಪ್ರಧಾನಿ ಮೋದಿ ಕೃತಜ್ನತೆ ತಿಳಿಸಿದರು. ನನಗೆ ಯೋಗ ಮಾಡುವುದು ಕಷ್ಟ ಅನ್ನಿಸುತ್ತದೆ, ನಾನು ಪ್ರಯತ್ನ ಪಡದ ಕೆಲವು ವಿಷಯಗಳಲ್ಲಿ ಯೋಗ ಕೂಡಾ ಒಂದು ಎಂದು ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited