ನವದೆಹಲಿ : ’10 ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್' ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಕಾಣಿಸಿಕೊಳ್ಳುತ್ತಿದ್ದ ಪ್ರಕರಣದಲ್ಲಿ ಅಂತರ್ಜಾಲ ದೈತ್ಯ ಗೂಗಲ್ ಪ್ರಧಾನಿ ಮೋದಿ ಕ್ಷಮೆಯಾಚಿಸಿದೆ.
’ಗೂಗಲ್ ಇಮೇಜಸ್' ನಲ್ಲಿ ’10 ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್' ಎಂದು ಟೈಪಿಸಿದರೆ, ಮೋದಿ ಭಾವಚಿತ್ರ ಕಾಣುತ್ತಿದ್ದುದು ತೀವ್ರ ವಿವಾದ ಸೃಷ್ಟಿಸಿತ್ತು. ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಗೂಗಲ್ ಈ ಬಗ್ಗೆ ಮೋದಿ ಅವರಲ್ಲಿ ಕ್ಷಮೆ ಯಾಚಿಸಿ ಸ್ಪಷ್ಟನೆ ನೀಡಿದ್ದು, ಹುಡುಕು ತಾಣದಲ್ಲಿ ಕಂಡ ಅಂಶ ನಮ್ಮ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ. ಅಲ್ಲದೇ ಮುಂದೆ ಹೀಗಾಗದಂತೆ, ಹುಡುಕು ತಾಣದಲ್ಲಿ ಅನಿರೀಕ್ಷಿತ ಉತ್ತರಗಳು ಬರದಂತೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ವಾಗ್ಧಾನ ಮಾಡಿದೆ.