ನ್ಯೂಯಾರ್ಕ್ : ಭಾರತದ ಸೆಕ್ಯುಲರ್ ವಾದಿಗಳು ಬೆಚ್ಚಿಬೀಳುವ ಸಂದರ್ಭವಿದು.. ಹೌದು, ಅಮೆರಿಕದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನಲ್ಲಿ ಹಿಂದೂ ದೇವಿ ಕಾಳಿ ಮಾತೆಯ ಚಿತ್ರದ ಅದ್ಭುತ ಪ್ರದರ್ಶನ ಮಾಡಲಾಗಿದೆ!.
ಕಲಾವಿದ ಆಂಡ್ರೂ ಜೋನ್ಸ್ ವಿನ್ಯಾಸಗೊಳಿಸಿದ ಕಾಳಿಮಾತೆಯ ರೌದ್ರಾವತಾರದ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಪರಿಸರ ಮಾಲಿನ್ಯ ಮತ್ತು ವಿನಾಶದಿಂದ ಬಚಾವಾಗಲು ಪ್ರಕೃತಿ ಮಾತೆ ರೌದ್ರಾವತಾರವನ್ನು ತಾಳಬೇಕಾದ ಅನಿವಾರ್ಯತೆ ಈಗ ಇದೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.
ಮೊದಲಿಗೆ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಹಾಗೂ ಇತ್ತೀಚೆಗೆ ಅಮೆರಿಕದ ದಂತವೈದ್ಯನೊಬ್ಬನಿಂದ ಕೊಲ್ಲಲ್ಪಟ್ಟ ಸೆಸಿಲ್ ಹೆಸರಿನ ಸಿಂಹದ ಚಿತ್ರಗಳನ್ನು ಸಹ ಈ ಕಟ್ಟಡದಲ್ಲಿ ಪ್ರದರ್ಶಿಸಲಾಯಿತು.