Sullia : ಬೆಂಗಳೂರಿನ ಅಮೃತ ನೇತ್ರ ತಂಡದ ಅಂಧ ಕಲಾವಿದರಿಂದ ಇತ್ತೀಚಿಗೆ ಸ್ನೇಹ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
10 ಜನರ ತಂಡವು ವಿಘ್ನೇಶ್ವರ ಸ್ತುತಿಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಹಲವು ಅರ್ಥಪೂರ್ಣ ಚಲನ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿ ಬಂದವು.
ಸಂಗೀತ ಕಾರ್ಯಕ್ರಮದ ಬಳಿಕ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು ಕಲಾವಿದರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.