Untitled Document
Sign Up | Login    
Dynamic website and Portals
  
March 24, 2015

ಬಾಲಿವುಡ್‌ ನಟ ಶಶಿ ಕಪೂರ್‌ ಗೆ ಫಾಲ್ಕೆ ಪ್ರಶಸ್ತಿ ಗೌರವ

ಶಶಿ ಕಪೂರ್ ಶಶಿ ಕಪೂರ್

ನವದೆಹಲಿ : ಖ್ಯಾತ ನಟ ಶಶಿ ಕಪೂರ್ ಅವರಿಗೆ 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಸ್ವರ್ಣ ಕಮಲ, 10 ಲಕ್ಷ ರೂ. ನಗದು ಹಾಗೂ ಶಾಲನ್ನು ಫಾಲ್ಕೆ ಪ್ರಶಸ್ತಿ ಹೊಂದಿದೆ.

ಭಾರತೀಯ ಚಿತ್ರರಂಗಅತ್ಯುನ್ನತ ಗೌರವ ಎಂದೇ ಬಿಂಬಿತವಾಗಿರುವ ಫಾಲ್ಕೆ ಪುರಸ್ಕಾರಕ್ಕೆ ಭಾಜನರಾದ 46ನೇ ಕಲಾವಿದ ಶಶಿ ಕಪೂರ್ ಅವರಾಗಿದ್ದಾರೆ. ಅಲ್ಲದೆ ಪದ್ಮ ಭೂಷಣ ಹಾಗೂ ಫಾಲ್ಕೆ ಪ್ರಶಸ್ತಿ ಪಡೆದ ಕಪೂರ್ ಕುಟುಂಬದ 3ನೇ ವ್ಯಕ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ. ಈ ಹಿಂದೆ ಶಶಿ ಅವರ ತಂದೆ ಪೃಥ್ವಿರಾಜ್‌ ಕಪೂರ್ ಹಾಗೂ ಸೋದರ ರಾಜ್‌ ಕಪೂರ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

ಸ್ವರ್ಣ ಕಮಲ, 10 ಲಕ್ಷ ರೂ. ನಗದು ಹಾಗೂ ಶಾಲನ್ನು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಹೊಂದಿದೆ. 77 ವರ್ಷದ ಶಶಿ ಕಪೂರ್‌ ಅವರಿಗೆ ಕೇಂದ್ರ ಸರ್ಕಾರ ಈ ಪ್ರಶಸ್ತಿಯನ್ನು ಘೋಷಿಸುತ್ತಿದ್ದಂತೆ ಅವರ ಬಂಧುವೂ ಆಗಿರುವ ಹೆಸರಾಂತ ನಟ ರಿಶಿ ಕಪೂರ್ ಅವರು ಟ್ವೀಟರ್‌ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅರುಣ್‌ ಜೇಟ್ಲಿ, ಸಹಾಯಕ ಸಚಿವ ರಾಜ್ಯವರ್ಧನ್ ರಾಠೊಡ್‌ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಬಾಲಿವುಡ್‌ ನ‌ಲ್ಲಿ ಹೆಸರುವಾಸಿಯಾಗಿರುವ ಕಪೂರ್ ಕುಟುಂಬಕ್ಕೆ ಸೇರಿದವರಾದ ಶಶಿ ಕಪೂರ್ ಅವರು 1938ರಲ್ಲಿ ಜನಿಸಿದರು. ಅವರ ತಂದೆ ಪೃಥ್ವಿರಾಜ್‌ ಕೂಡ ಪ್ರಖ್ಯಾತ ನಟರಾಗಿದ್ದರು. ಒಂದು ಕಾಲದಲ್ಲಿ ಬಾಲಿವುಡ್‌ ಆಳಿದ ದಿವಂಗತ ನಟರಾದ ರಾಜ್‌ ಕಪೂರ್ ಹಾಗೂ ಶಮ್ಮಿ ಕಪೂರ್ ಅವರ ಕಿರಿಯ ಸೋದರರಾಗಿರುವ ಶಶಿ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ಬಾಲನಟರಾಗಿ ಚಿತ್ರಂಗ ಪ್ರವೇಶಿಸಿದರು.

ತಮ್ಮ ಅಣ್ಣ ರಾಜ್‌ ಅವರ ಅಭಿನಯದ ಆಗ್‌' (1948), ಆವಾರಾ'(1951) ಸಿನಿಮಾಗಳಲ್ಲಿ ರಾಜ್‌ ಅವರ ಬಾಲ್ಯಾವಸ್ಥೆಯ ಪಾತ್ರವನ್ನು ನಿರ್ವಹಿಸಿದ್ದರು. 1961ರಲ್ಲಿ ಧರ್ಮಪುತ್ರ ಸಿನಿಮಾ ಮೂಲಕ ನಾಯಕನಟರಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.

ದೀವಾರ್‌, ಸತ್ಯಂ ಶಿವಂ ಸುಂದರಂ, ತ್ರಿಶೂಲ್‌, ಕಭೀ ಕಭೀ ಸಿನಿಮಾಗಳ ಮೂಲಕ ಚಿತ್ರರಸಿಕರ ಮನಸೂರೆಗೊಂಡರು. 1960, 1970ರ ದಶಕ ಹಾಗೂ 1980ರ ಮಧ್ಯಭಾಗದವರೆಗೂ ಶಶಿ ಕಪೂರ್‌ ಅವರು ಅತ್ಯಂತ ಜನಪ್ರಿಯ ಸಿನಿಮಾ ನಟರಾಗಿದ್ದರು.

ಅಂತಾರಾಷ್ಟ್ರೀಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ಬಾಲಿವುಡ್‌ನ‌ ಮೊದಲಿಗರಲ್ಲಿ ಶಶಿ ಕಪೂರ್‌ ಕೂಡ ಒಬ್ಬರು. ಬ್ರಿಟನ್‌ ಹಾಗೂ ಅಮೆರಿಕದ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. 1978ರಲ್ಲಿ ಫಿಲ್ಮ್ ವಾಲಾಸ್‌' ಎಂಬ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದರು. 2011ರಲ್ಲಿ ಪದ್ಮಭೂಷಣ ಸ್ವೀಕರಿಸಿದ್ದರು. ಮೂರು ರಾಷ್ಟ್ರೀಯ ಚಿತ್ರ ಪ್ರಶಸ್ತಿಗಳಿಗೂ ಭಾಜನರಾಗಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Entertainment

  • ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ
  • ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ.
  • ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ
  • 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited