Untitled Document
Sign Up | Login    
Dynamic website and Portals
  
January 2, 2015

ಪಿಕೆ ಚಿತ್ರದ ನಟ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು

ಪಿಕೆ ಚಿತ್ರದ ನಟ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು

ಜೈಪುರ : ವಿವಾದಕ್ಕೆ ಗುರಿಯಾಗಿರುವ ಪಿಕೆ ಚಲನಚಿತ್ರ ನಿರ್ದೇಶಕ ಹಾಗೂ ನಟ ಅಮೀರ್ ಖಾನ್ ವಿರುದ್ಧ ಜೈಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆರೋಪದಡಿ ಐಪಿಸಿ ಸೆಕ್ಷನ್ 295ಎ ಹಾಗೂ ಸಮುದಾಯಗಳ ನಡುವೆ ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆ ನೀಡುವ ಆರೋಪದಡಿ 153ಎ ಪ್ರಕಾರ ಪಿಕೆ ಚಿತ್ರ ನಿರ್ದೇಶಕ, ನಿರ್ಮಾಪಕ, ನಟನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಎಫ್.ಐ.ಆರ್ ನಲ್ಲಿ ಪಿಕೆ ಚಿತ್ರದ ನಟ, ನಿರ್ದೇಶಕರ ಹೆಸರುಗಳನ್ನು ನಮೂದಿಸಿಲ್ಲ ಎಂದು ತಿಳಿದುಬಂದಿದೆ. ಬಸಂತ್ ಗೆಲ್ಹೋಟ್ ಎಂಬುವವರು ಈ ದೂರು ನೀಡಿದ್ದು, ತನಿಖೆ ಪ್ರಗತಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೀರ್ ಖಾನ್ ನಟನೆಯ ಈ ಚಲನಚಿತ್ರ ಹಿಂದೂ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ಎದುರಿಸಿತ್ತು ಅಲ್ಲದೆ ಕೂಡಲೆ ಸಿನೆಮಾವನ್ನು ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಡಿಸೆಂಬರ್ 19 ರಂದು ಬಿಡುಗಡೆಯಾದ ಈ ಸಿನೆಮಾದಲ್ಲಿ ಹಿಂದೂ ದೇವರು ಮತ್ತು ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ದೃಶ್ಯಗಳಿವೆ ಎಂದು ಈ ಸಂಘಟನೆಗಳು ವಿರೋಧಿಸಿದ್ದವು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited