Untitled Document
Sign Up | Login    
Dynamic website and Portals
  
April 22, 2015

ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೋರ್ಸಿಗೆ 20 ವರ್ಷ ಜೈಲುಶಿಕ್ಷೆ

ಮೊಹಮ್ಮದ್ ಮೋರ್ಸಿ ಮೊಹಮ್ಮದ್ ಮೋರ್ಸಿ

ಕೈರೋ : ಪ್ರತಿಭಟನಾಕಾರರ ಬಂಧನ ಹಾಗೂ ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿದ್ದ ಈಜಿಪ್ಟ್ ನ ಪದಚ್ಯುತ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋರ್ಸಿಗೆ ಈಜಿಪ್ಟ್ ಕೋರ್ಟ್ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಹಲವು ವಿಚಾರಣೆಗಳ ಬಳಿಕ ಪದಚ್ಯುತಗೊಂಡ ಈಜಿಪ್ಟ್ ಅಧ್ಯಕ್ಷ ಮೋರ್ಸಿ ಹಲವು ಆರೋಪಗಳ ಪೈಕಿ ಮೊದಲ ತೀರ್ಪನ್ನು ಸ್ವೀಕರಿಸಿದಂತಾಗಿದೆ. 2013ರಲ್ಲಿ ಮೋರ್ಸಿ ಆಡಳಿತದ ವಿರುದ್ಧ ಜನ ರೊಚ್ಚಿಗೆದ್ದು ಬೀದಿಗಳಲ್ಲಿ ಪ್ರತಿಭಟನೆ ನಡೆಸಿ, ಪದಚ್ಯುತಕ್ಕೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಮೋರ್ಸಿ ತನ್ನ ಸೇನಾಪಡೆಯನ್ನು ಉಪಯೋಗಿಸಿ ಪ್ರತಿಭಟನಾಕಾರರನ್ನು ಬಂಧಿಸಿ, ಚಿತ್ರಹಿಂಸೆ ಕೊಟ್ಟಿದ್ದ.

ಈ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಉದ್ಭವವಾಗಿರುವ ರಾಜಕೀಯ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಮೋರ್ಸಿ ಅವರಿಗೆ ಸೇನೆ 48 ಗಂಟೆಗಳ ಗಡುವು ನೀಡಿತ್ತು. ಆದರೆ, ಮೋರ್ಸಿ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಅವರನ್ನು 2013ರ ಜುಲೈನಲ್ಲಿ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿತ್ತು.

ಮೋರ್ಸಿ ಅವರಿಗೆ ನೀಡಿದ್ದ ಗಡುವು ಮುಕ್ತಾಯಗೊಳ್ಳುತ್ತಿದ್ದಂತೆ ಸೇನೆಯು ಈಜಿಪ್ಟ್ ನ ಪ್ರಮುಖ ಸ್ಥಳಗಳ ಮೇಲೆ ನಿಯಂತ್ರಣ ಸಾಧಿಸಿ, ಅಧ್ಯಕ್ಷ ಮೋರ್ಸಿ ಹಾಗೂ ಮುಸ್ಲಿಂ ಬ್ರದರ್ಹುಡ್ ಪಕ್ಷದ ಅನೇಕ ಮುಖಂಡರನ್ನು ವಶಕ್ಕೆ ತೆಗೆದುಕೊಂಡಿತು. ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ರವಾನಿಸಲಾಯಿತು.

ನಂತರ ಮೋರ್ಸಿ ಹಾಗೂ ಬೆಂಬಲಿಗರ ವಿರುದ್ಧ ಈಜಿಪ್ಟ್ ಸೇನೆಯಿಂದ ವಿಚಾರಣೆ ಆರಂಭವಾಗಿತ್ತು. ಮೋರ್ಸಿ ವಿರುದ್ಧ ಹಲವಾರು ಆರೋಪಗಳು ದಾಖಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited