ಮುಂಬೈ : ಸಂಜಯ್ ಬಾರು ಅವರ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಮೇಕಿಂಗ್ ಆಂಡ್ ಅನ್ವೆುಕಿಂಗ್ ಆಫ್ ಮನಮೋಹನ್ ಸಿಂಗ್’ ಎಂಬ ಕಾದಂಬರಿ ಆಧಾರಿತ ಚಿತ್ರ ನಿರ್ಮಿಸಲು ಬಾಲಿವುಡ್ ಮುಂದಾಗಿದೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ಅದಕ್ಕೆ ತಕ್ಕಂತೆ ಅವರು ಕಾಂಗ್ರೆಸ್ ಹೇಳಿದಂತೆ ಕೇಳಿಕೊಂಡು ಮೌನವಾಗಿದ್ದುಕೊಂಡು ಪ್ರಧಾನಿ ಹುದ್ದೆ ನಿಭಾಯಿಸಿದರು ಎಂಬ ಕುರಿತು ಈ ಕಾದಂಬರಿಯಲ್ಲಿ ವಿವರಿಸಲಾಗಿದೆ. ಈ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಬಾಲಿವುಡ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೇಲೆ ಚಿತ್ರ ನಿರ್ಮಿಸುತ್ತಿದೆ. ಮುಂದಿನ ವರ್ಷಕ್ಕೆ ಚಿತ್ರ ತೆರೆಕಾಣಲಿದೆ ಎಂಬ ನಿರೀಕ್ಷೆಯಿದೆ.
ಸುನಿಲ್ ಬೊಹ್ರಾ ಮತ್ತು ತಂಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಮನಮೋಹನ್ಸಿಂಗ್ ಹೇಗೆ ಕಾಂಗ್ರೆಸ್ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು ಎಂಬ ಅಂಶಗಳು ಚಿತ್ರಿತವಾಗಲಿವೆ. ಈ ಚಿತ್ರವು 10 ಕ್ಕೂ ಹೆಚ್ಚು ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಬೊಹ್ರಾ ತಿಳಿಸಿದ್ದಾರೆ.