ಬೆಂಗಳೂರು : 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ, ವಿಜಯ ರಾಘವೇಂದ್ರ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರೆ, ಮಾಲಾಶ್ರೀ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಸಚಿವ ರೋಶನ್ ಬೇಗ್ ಪ್ರಶಸ್ತಿಯ ವಿವರ ಪ್ರಕಟಿಸಿದರು.
ದ್ವಿತೀಯ ಅತ್ಯುತ್ತಮ ಚಿತ್ರ ಮಾರಿಕೊಂಡವರು. ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಮೈತ್ರಿ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಕೃಷ್ಣಲೀಲಾ ಹಾಗೂ ಮನೆ ಮೊದಲ ಪಾಠ ಶಾಲೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿ ವಿವರ ಈ ಕೆಳಗಿನಂತಿದೆ
1. ಅತ್ಯುತ್ತಮ ಚಿತ್ರ – ತಿಥಿ
2. ದ್ವಿತೀಯ ಅತ್ಯುತ್ತಮ ಚಿತ್ರ – ಮಾರಿಕೊಂಡವರು
3. ತೃತೀಯ ಅತ್ಯುತ್ತಮ ಚಿತ್ರ – ಮೈತ್ರಿ
4. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ – ಶಿವಯೋಗಿ ಶ್ರೀ ಪುಟ್ಟಯ್ಯಜ್ಜ
5. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಕೃಷ್ಣ ಲೀಲಾ
6. ಅತ್ಯುತ್ತಮ ಮಕ್ಕಳ ಚಿತ್ರ – ಮನೆ ಮೊದಲ ಪಾಠಶಾಲೆ
7. ನಿದೇರ್ಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ – ರಂಗಿ ತರಂಗ
8. ಅತ್ಯುತ್ತಮ ಕರ್ನಾಟಕ ಪ್ರಾದೇಶಿ ಭಾಷಾ ಚಿತ್ರ – ತಳಂಗ ನೀರ್ -ಕೊಡವ ಭಾಷೆ
9. ಅತ್ಯುತ್ತಮ ನಟ – ವಿಜಯ ರಾಘವೇಂದ್ರ - ಚಿತ್ರ- ಶಿವಯೋಗಿ ಶ್ರೀ ಪಟ್ಟಯ್ಯಜ್ಜ
10. ಅತ್ಯುತ್ತಮ ನಟಿ – ಮಾಲಾಶ್ರೀ - ಚಿತ್ರ - ಗಂಗಾ
11. ಅತ್ಯುತ್ತಮ ಪೋಷಕ ನಟ – ರಮೇಶ್ ಭಟ್ - ಚಿತ್ರ - ಮನ ಮಂಥನ
12. ಅತ್ಯುತ್ತಮ ಪೋಷಕ ನಟಿ – ಪೂಜಾ ಎಸ್.ಎಂ - ಚಿತ್ರ: ತಿಥಿ
13. ಅತ್ಯುತ್ತಮ ಕತೆ – ಸರಜೂ ಕಾಟ್ಕರ್ - ಚಿತ್ರ - ಜುಲೈ 22, 1947
14. ಅತ್ಯುತ್ತಮ ಚಿತ್ರಕತೆ – ಶಶಾಂಕ್, ರಘುಕೋವಿ - ಚಿತ್ರ - ಕೃಷ್ಣ ಲೀಲಾ
15. ಅತ್ಯುತ್ತಮ ಸಂಭಾಷಣೆ – ಈರೇಗೌಡ - ಚಿತ್ರ ತಿಥಿ
16. ಅತ್ಯುತ್ತಮ ಛಾಯಾಗ್ರಹಣ – ಶ್ರೀ ಅನಂತ ಅರಸು ಚಿತ್ರ - ಲಾಸ್ಟ್ ಬಸ್
17. ಅತ್ಯುತ್ತಮ ಸಂಗೀತ ನಿರ್ದೇಶನ – ಶ್ರೀಧರ್ ವಿ ಸಂಭ್ರಮ್ - ಚಿತ್ರ - ಕೃಷ್ಣ ಲೀಲಾ
18. ಅತ್ಯುತ್ತಮ ಸಂಕಲನ – ಸೃಜಿತ್ ನಾಯಕ್ - ಚಿತ್ರ - ಚಂಡಿಕೋರಿ
19. ಅತ್ಯುತ್ತಮ ಬಾಲ ನಟ – ಮಾಸ್ಟರ್ ಲಿಖಿತ್ ಶರ್ಮ - ಚಿತ್ರ - ಅಷ್ಟಾವಕ್ರ
20.ಅತ್ಯುತ್ತಮ ಬಾಲ ನಟಿ – ಬೇಬಿ ಮೇವಿಷ್ - ಚಿತ್ರ - ಸವಿ ನಿಲಯ
21. ಅತ್ಯುತ್ತಮ ಗೀತ ರಚನೆ – ನಾಗೇಂದ್ರ ಪ್ರಸಾದ್ - ಚಿತ್ರ - ಮುದ್ದು ಮನಸೇ
22. ಅತ್ಯುತ್ತಮ ಕಲಾ ನಿರ್ದೇಶನ – ಅವಿನಾಶ್ ನರಸಿಂಹರಾಜ್ - ಚಿತ್ರ - ಲಾಸ್ಟ್ ಬಸ್
23. ಅತ್ಯುತ್ತಮ ಹಿನ್ನೆಲೆ ಗಾಯಕ – ಸಂತೋಷ್ ವೆಂಕಿ - ಚಿತ್ರ - ಪ್ರೀತಿಯಲ್ಲಿ ಸಹಜ
24. ಅತ್ಯುತ್ತಮ ಹಿನ್ನೆಲೆ ಗಾಯಕಿ – ಶಮಿತಾ ಮಲ್ನಾಡ್ - ಚಿತ್ರ - ಬೆಕ್ಕು
25. ತೀರ್ಪುಗಾರರ ವಿಶೇಷ ಪ್ರಶಸ್ತಿ – ಮೆ.ಜ್ಯೂಪಿಟರ್ ಅನಿಮೇಷನ್ - ಚಿತ್ರ - ಶಿವಲಿಂಗ