Untitled Document
Sign Up | Login    
Dynamic website and Portals
  
January 17, 2016

ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ವಿಧಿವಶ

ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ (ಫೈಲ್ ಚಿತ್ರ) ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ (ಫೈಲ್ ಚಿತ್ರ)

ಬೆಂಗಳೂರು : ಕನ್ನಡದ ಖ್ಯಾತ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ(84) ಆವರು ಭಾನುವಾರ ಸಂಜೆ ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕಳೆದ ಹಲವಾರು ದಿನಗಳಿಂದ ಆನಾರೋಗ್ಯದಿಂದ ಬಳಲುತಿದ್ದ ಗೀತಪ್ರಿಯ ಆವರನ್ನು ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ ವೇಳೆಗೆ ಆರೋಗ್ಯದಲ್ಲಿ ಏರುಪೇರಾಗಿ ನಿಧನ ಹೊಂದಿದರು.

1932 ಜೂನ್‌ 15ರಂದು ಜನಿಸಿದ್ದ ಗೀತಪ್ರಿಯ, 1954ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿ 40 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿ, 250ಕ್ಕೂ ಹೆಚ್ಚು ಗೀತೆರಚನೆ ಮಾಡಿದ್ದರು.

ಡಾ. ರಾಜಕುಮಾರ್, ಡಾ ವಿಷ್ಣುವರ್ಧನ್, ಶ್ರೀನಾಥ ಸೇರಿದಂತೆ ಅನೇಕ ಜನಪ್ರಿಯ ನಾಯಕರ ಚಿತ್ರಗಳನ್ನು ನಿರ್ದೇಸಿದ್ದರು.

ಪುಟಾಣಿ ಏಜೆಂಟ್‌ 123, ಮಣ್ಣಿನ ಮಗ, ಬೆಸುಗೆ, ಹೊಂಬಿಸಿಲು, ಶ್ರಾವಣ ಸಂಭ್ರಮ ಇವು ಗೀತಪ್ರಿಯ ನಿರ್ದೇಶಿಸಿದ್ದ ಪ್ರಮುಖ ಚಿತ್ರಗಳು.

ಮಣ್ಣಿನ ಮಗ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ, ರಾಜ್ಯ ಪ್ರಶಸ್ತಿ, ಪುಟ್ಟಣ್ಣ ಕಣಗಲ್‌ ಪಶಸ್ತಿ, ಸರೋಜಾ ದೇವಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಹಿರಿಯ ನಿರ್ದೇಶಕನ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ.

 

 

Share this page : 
 

Table 'bangalorewaves.bv_news_comments' doesn't exist