Untitled Document
Sign Up | Login    
Dynamic website and Portals
  
February 2, 2015

ವಿವಾದಕ್ಕೆ ಕಾರಣವಾಗಿದೆ ಟಿ ಕಪ್ ಮೇಲೆರುವ ಮೋದಿ ಅಮಿತ್ ಶಾ ಭಾವಚಿತ್ರ!

ವಿವಾದಕ್ಕೆ ಕಾರಣವಾಗಿದೆ ಟಿ ಕಪ್ ಮೇಲೆರುವ ಮೋದಿ ಅಮಿತ್ ಶಾ ಭಾವಚಿತ್ರ!

ನವದೆಹಲಿ : 'ದೆಹಲಿ-ಅಮೃತಸರ' ಶತಾಬ್ದಿ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾವಚಿತ್ರವಿರುವ ಪ್ಲಾಸ್ಟಿಕ್ ಕಪ್ ಬಳಕೆಯಾಗುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಚುನಾವಣಾ ಕಣವಾಗಿರುವ ದೆಹಲಿಯಲ್ಲಿ ಈ ರೀತಿ ಬಿಜೆಪಿ ಪರವಾಗಿರುವ ಪ್ಲ್ಯಾಸ್ಟಿಕ್ ಟೀ ಕಪ್ ಗಳು ಬಳಕೆಯಾಗುತ್ತಿರುವುದರ ಬಗ್ಗೆ ರೈಲ್ವೇ ಇಲಾಖೆ ತನಿಖೆ ನಡೆಸಲು ಮುಂದಾಗಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಪ್ರಚಾರ ಮಾಡುತ್ತಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೇ ಇಲಾಖೆಸಾರ್ವಜನಿಕ ಸಂಪರ್ಕಾಧಿಕಾರಿ ನೀರಜ್ ಶರ್ಮಾ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ದೆಹಲಿ-ಅಮೃತಸರ ಶತಾಬ್ದಿ ರೈಲಿನಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭಾವಚಿತ್ರದೊಂದಿಗೆ ಬಿಜೆಪಿ ಸದಸ್ಯರಾಗಿ ಎಂಬ ಸಂದೇಶವುಳ್ಳ ಟೀ ಕಪ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ರೈಲಿನಲ್ಲಿ ಬಿಜೆಪಿ ನಾಯಕರ ಭಾವಚಿತ್ರವಿರುವ ಟಿ ಕಪ್ ಬಳಕೆ ಮಾಡುತ್ತಿರುವುದರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾವಚಿತ್ರಗಳ ಮೂಲಕ ಪ್ರಚಾರ ಹೆಚ್ಚಿಸಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ವಿರೇಂದ್ರ ಶರ್ಮಾ ಆರೋಪಿಸಿದ್ದಾರೆ. ಚುನಾವಣೆ ನಡೆಯುತ್ತಿರುವ ದೆಹಲಿಯಲ್ಲಿ ಶತಾಬ್ದಿ ರೈಲನ್ನೂ ಸಹ ಬಿಜೆಪಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited