Untitled Document
Sign Up | Login    
Dynamic website and Portals
  

Related News

ರೈತರ ಮೇಲಿನ ಲಾಠಿ ಪ್ರಹಾರ ಖಂಡಿಸಿ ಕೋಲಾರ, ಚಿಕ್ಕಬಳ್ಳಾಪುರ ಬಂದ್

ಗುರುವಾರ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿರುವುದನ್ನು ಖಂಡಿಸಿ, ಶುಕ್ರವಾರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಾದ್ಯಂತ ಬಂದ್‌ ಆಚರಿಸಲಾಗುತ್ತಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಬಂದ್ ಗೆ ಕರೆ ನೀಡಿದ್ದು ವಿವಿಧ...

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟ

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫೆ.13 ಮತ್ತು 20ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯಿತಿ ಅವಧಿ ಮುಕ್ತಾಯಗೊಳ್ಳದ ಕಾರಣ ಈ ಕ್ಷೇತ್ರಕ್ಕೆ ಚುನಾವಣೆ ನಡೆಯುವುದಿಲ್ಲ. ಬೀದರ್‌, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲಾ ಪಂಚಾಯಿತಿ...

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ವೆಚ್ಚ ನಿಗದಿ

ಫೆಬ್ರುವರಿ 2 ಅಥವಾ 3ನೇ ವಾರದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲಿದ್ದು, ಜನವರಿ 2ನೇ ವಾರದಲ್ಲಿ ಚುನಾವಣಾ ದಿನಾಂಕವನ್ನು ಘೋಷಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಪಿ ಎನ್ ಶ್ರೀನಿವಾಸಾಚಾರಿ ತಿಳಿಸಿದ್ದಾರೆ. 2 ಹಂತಗಳಲ್ಲಿ ಚುನಾವಣಾ ನಡೆಯಲಿದೆ. ಸೋಮವಾರ...

ಸೋನಿಯಾ ಗಾಂಧಿ ಬಂಗಲೆ ಪ್ರಧಾನಿ ಮೋದಿ ನಿವಾಸಕ್ಕಿಂತಲೂ ದೊಡ್ಡದು!

ಹೌದು, ವಿಚಿತ್ರವೆನಿಸಿದರೂ ಇದು ಸತ್ಯ!. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸ ಭಾರತದ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸಕ್ಕಿಂತಲೂ ದೊಡ್ಡದು. ಸೋನಿಯಾ ಗಾಂಧಿ ಮನೆ ದೇಶದ ರಾಜಕಾರಣಿಗಳಲ್ಲಿ ಅತ್ಯಂತ ದೊಡ್ಡ ನಿವಾಸಗಳಲ್ಲೊಂದು. ಈ ಮಾಹಿತಿ ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಮೂಲಕ...

ಬಿಬಿಎಂಪಿ ಚುನಾವಣೆಗೆ ಸಿದ್ಧತೆ

ಬಿಬಿಎಂಪಿ ಚುನಾವಣಾ ಮಹಾಸಮರಕ್ಕೆ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ ಎನ್‌ ಶ್ರೀನಿವಾಸಾಚಾರಿ ಹೇಳಿದ್ದಾರೆ. ಗುರುವಾರ ಬೆಂಗಳೂರು ಪ್ರೆಸ್‌...

ಕಪ್ಪು ಹಣ ಭಾರತಕ್ಕೆ ವಾಪಸ್ ತರುವುದು ಕಷ್ಟಕರವಲ್ಲ: ಸುಬ್ರಹ್ಮಣ್ಯನ್ ಸ್ವಾಮಿ

ವಿದೇಶಗಳಲ್ಲಿ ಕೂಡಿಟ್ಟ ಅಂದಾಜು 125 ಲಕ್ಷ ಕೋಟಿ ರೂ. ಕಪ್ಪುಹಣವನ್ನು ಮೋದಿ ಸರಕಾರ ಭಾರತಕ್ಕೆ ವಾಪಸ್ ತರುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ವಾಶಿಂಗ್ಟನ್ ಡಿ.ಸಿ. ಹತ್ತಿರದ ವರ್ಜೀನಿಯಾ ಪಟ್ಟಣದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ...

ಬಿಬಿಎಂಪಿ ಚುನಾವಣೆ: ಜುಲೈ 26ಕ್ಕೆ ಮತದಾನ, 29ರಂದು ಮತ ಎಣಿಕೆ ಸಾಧ್ಯತೆ

ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್‌ ಸೂಚನೆ ನೀಡುತ್ತಿದ್ದಂತೆಯೇ ಇತ್ತ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಲು ಅಂತಿಮ ಸಿದ್ಧತೆ ನಡೆಸಿದ್ದು, ಜುಲೈ 26ರಂದು ಮತದಾನ ಮತ್ತು 29ರಂದು ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಜುಲೈ ಅಂತ್ಯದೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕು ಎಂಬುದು ಆಯೋಗದ...

2022ರೊಳಗೆ ಎಲ್ಲರಿಗೂ ಮನೆ ಯೋಜನೆಗೆ ಕೇಂದ್ರ ಹಸಿರು ನಿಶಾನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌.ಡಿ.ಎ ಸರ್ಕಾರದ ಮಹತ್ವಾಕಾಂಕ್ಷಿ ’2022ರೊಳಗೆ ಎಲ್ಲರಿಗೂ ಮನೆ' ಯೋಜನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಈ ಯೋಜನೆ ಯಡಿ ನಗರ ಪ್ರದೇಶಗಳ ಬಡವರು ಮತ್ತು ಕೊಳಚೆ ಪ್ರದೇಶಗಳ ನಿವಾಸಿಗಳು ಗೃಹ ಸಾಲ ಪಡೆದಲ್ಲಿ, ಅದರ...

ನನ್ನಿಂದ ದೇಶಕ್ಕೆ ನಷ್ಟವಾಗದಂತೆ ಆಶೀರ್ವದಿಸಿ: ಪ್ರಧಾನಿ ಮೋದಿ

ನನ್ನಿಂದ ಯಾವುದೇ ತಪ್ಪಾಗದಂತೆ, ದೇಶಕ್ಕೆ ನಷ್ಟವಾಗದಂತೆ ನಿಮ್ಮ ಎರಡು ಕೈಗಳನ್ನು ಮೇಲಕ್ಕೆತ್ತಿ ನನಗೆ ಆಶೀರ್ವಾದ ಮಾಡಿ....ಇದು ಚೀನಾದ ಶಾಂಘೈನಲ್ಲಿ ಪ್ರಧಾನಿ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪರಿ. ಮೊದಲು ನೀವು ಭಾರತೀಯರು ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದೀರಿ. ಆದರೆ ಈಗ ನಾವು ಭಾರತೀಯರು...

ಗ್ರಾಮ ಪಂಚಾಯ್ತಿ ಚುನಾವಣಾ ದಿನಾಂಕ ಘೋಷಣೆ

'ಗ್ರಾಮ ಪಂಚಾಯ್ತಿ ಚುನಾವಣೆ'ಗೆ ದಿನಾಂಕ ನಿಗದಿಯಾಗಿದ್ದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ.5ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಚಾರಿ, ರಾಜ್ಯದ ಒಟ್ಟು 5844 ಗ್ರಾಮ ಪಂಚಾಯ್ತಿಗಳಿಗೆ ಮೇ 29 ಮತ್ತು ಜೂನ್ 2ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ...

ಅಕ್ರಮ-ಸಕ್ರಮ ಯೋಜನೆ ಎಲ್ಲರಿಗೂ ಅನ್ವಯ: ಶ್ರೀನಿವಾಸ್‌ ಪ್ರಸಾದ್

ಗ್ರಾಮೀಣ ಪ್ರದೇಶದ ಅಕ್ರಮ-ಸಕ್ರಮ ಯೋಜನೆಗೆ ಅರ್ಜಿಸಲ್ಲಿಸುವ ಅವಧಿಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ಜತೆಗೆ ಎಪಿಎಲ್ ಸೇರಿದಂತೆ ಎಲ್ಲಾ ಬಡವರಿಗೂ ಅಕ್ರಮ-ಸಕ್ರಮ ಯೋಜನೆ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಶ್ರೀನಿವಾಸ್‌ ಪ್ರಸಾದ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ...

ಯುನೈಟೆಡ್ ಎಎಪಿ: ಆಪ್ ಎನ್.ಆರ್.ಐ ಬೆಂಬಲಿಗರ ಆಂಧೋಲನ

ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಕಲಹ ಉಂಟಾಗಿರುವ ಬಗ್ಗೆ ಅನಿವಾಸಿ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟನ್ನು ಶೀಘ್ರವೇ ಬಗೆಹರಿಸಿಕೊಳ್ಳುವಂತೆ ಆಪ್ ಪಕ್ಷಕ್ಕೆ ಸಲಹೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವಂತೆ ಮನವಿ ಮಾಡಿರುವ ಅನಿವಾಸಿ ಭಾರತೀಯರು, ಯುನೈಟೆಡ್ ಎಎಪಿ(#UnitedAAP) ಎಂಬ...

ಜಗಮೋಹನ್‌ ದಾಲ್ಮಿಯಾಗೆ ಬಿಸಿಸಿಐ ಅಧ್ಯಕ್ಷ ಹುದ್ದೆ: ಅವಿರೋಧ ಆಯ್ಕೆ ಸಾಧ್ಯತೆ

ತೀರ್ವ ಕುತೂಹಲ ಕೆರಳಿಸಿರುವ ಬಿಸಿಸಿಐ ಚುನಾವಣೆ ಸೋಮವಾರ ನಡೆಯಲಿದ್ದು ಅಧ್ಯಕ್ಷರಾಗಿ ಜಗಮೋಹನ್‌ ದಾಲ್ಮಿಯಾ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹುದ್ದೆ ಮೇಲೆ ಕಣ್ಣಿಟ್ಟು ಕೋರ್ಟ್‌ನಿಂದಲೂ ಛೀಮಾರಿ ಹಾಕಿಸಿಕೊಂಡಿದ್ದ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್‌ ಕಣದಿಂದ ಹಿಂದೆ ಸರಿದು ದಾಲ್ಮಿಯಾರನ್ನು ಬೆಂಬಲಿಸಿದರು. ಹೀಗಾಗಿ...

ಬಿಸಿಸಿಐ ಅಧ್ಯಕ್ಷರಾಗಿ ಜಗಮೋಹನ್‌ ದಾಲ್ಮಿಯ ಅವಿರೋಧವಾಗಿ ಆಯ್ಕೆ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಿಸಿಸಿಐ ಚುನಾವಣೆಯಲ್ಲಿ ಜಗಮೋಹನ್‌ ದಾಲ್ಮಿಯ ಬಿಸಿಸಿಐನ ಪೂರ್ಣಕಾಲಿಕ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪದಚ್ಯುತ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಸ್ಪರ್ಧಿಸದೇ ಇದ್ದುದರಿಂದ ಅವರಪರ ದಾಲ್ಮಿಯ ನಾಮಪತ್ರ ಸಲ್ಲಿಸಿದ್ದರು. ದಾಲ್ಮೀಯ ಅವರಿಗೆ ಎದುರಾಳಿಯಾಗಿ...

ಏ.1ರಿಂದ ವಿದ್ಯುತ್ ದರ ಏರಿಕೆ

ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ ಜನತೆಗೆ ಕರೆಂಟ್ ಶಾಕ್ ನೀಡಿದ್ದು, ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಪ್ರತೀ ಯೂನಿಟ್ ವಿದ್ಯುತ್ ದರದಲ್ಲಿ 13ರಿಂದ 20 ಪೈಸೆ ಹೆಚ್ಚಳ ಮಾಡಲಾಗಿದ್ದು, ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳ ವ್ಯಾಪ್ತಿಯಲ್ಲಿ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್...

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮತ್ತೊಮ್ಮೆ ಅಧ್ಯಕ್ಷರಾಗಲು ಶರದ್ ಪವಾರ್ ಯತ್ನ

'ಬಿಸಿಸಿಐ' ಅಧ್ಯಕ್ಷ ಸ್ಥಾನಕ್ಕೆ ಲಾಭಿ ಪ್ರಾರಂಭವಾಗಿದೆ. ಅಧ್ಯಕ್ಷಗಾದಿಯನ್ನು ಮತ್ತೊಮ್ಮೆ ಅಲಂಕರಿಸಲು ಯತ್ನಿಸುತ್ತಿರುವ ಎನ್.ಸಿ.ಪಿ ನಾಯಕ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಬಿಸಿಸಿಐ ಚುನಾವಣೆ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದು, ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸುವ...

ಮಹಾಶಿವರಾತ್ರಿ ಆಚರಣೆಗೆ ಸಿದ್ಧಗೊಂಡ ಬೆಂಗಳೂರು

ಮಹಾಶಿವರಾತ್ರಿ ಆಚರಣೆಗೆ ರಾಜಧಾನಿ ಬೆಂಗಳೂರು ಸಿದ್ಧಗೊಂಡಿದೆ. ನಗರದ ಹಲವು ಭಾಗಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಹೋಮ-ಹವನಗಳನ್ನು ನಡೆಸಲಾಗುತ್ತದೆ. ಶಿವರಾತ್ರಿ ಅಂಗವಾಗಿ ಈ ವರ್ಷ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವನ ದೇವಾಯಲಯದಲ್ಲಿ ಮಹಾಯಜ್ನ...

ಸಂಸತ್ ಭವನ, ಪ್ರಧಾನಿ ನಿವಾಸದ ಮೇಲೆ ಆತ್ಮಾಹುತಿ ದಾಳಿ ಸಂಚು

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಮೇಲೆ ದಾಳಿ ನಡೆಸಲು ವಿಫ‌ಲರಾದ ಭಯೋತ್ಪಾದಕರು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ ಹಾಗೂ ಸಂಸತ್‌ ಭವನದ ಮೇಲೆ ಆತ್ಮಾಹುತಿ ಬಾಂಬ್‌ ದಾಳಿಗೆ ಸಜ್ಜಾಗಿದ್ದಾರೆ ಎಂದು...

ಆಪ್ ಅಭ್ಯರ್ಥಿ ನಿವಾಸದ ಮೇಲೆ ದಾಳಿ: 5,000 ಮದ್ಯದ ಬಾಟಲಿ ವಶ

ಚುನಾವಣಾ ಆಯೋಗದ ಅಧಿಕಾರಿಗಳು ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್‌ ಬಲ್ಯಾನ್‌ ಅವರ ದೆಹಲಿಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಸಾವಿರಾರು ಸಂಖ್ಯೆಯ ಮದ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ 5,000 ಲಿಕ್ಕರ್‌ ಬಾಟಲುಗಳನ್ನು ವಶಪಡಿಸಿಕೊಂಡಿರುವ ಚುನಾವಣಾ ಆಯೋಗದ ಅಧಿಕಾರಿಗಳು, ಚುನಾವಣಾ ನೀತಿ...

ನಾವು ಬೆಳೆಸಿದವರೇ ಪಕ್ಷಕ್ಕೆ ಮುಳುವಾಗಿದ್ದಾರೆ: ದೇವೇಗೌಡ

ನಾವು ಬೆಳೆದವರೇ ಜೆಡಿಎಸ್ ಗೆ ಮುಳುವಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜತೆ ಇದ್ದು ಬೆಳೆದು ಈಗ ಬೇರೆ ಮನೆಗೆ...

ಹೆಚ್ ಡಿಡಿ ಬಿಪಿಎಲ್ ಕಾರ್ಡ್ ದಾರರಂತೆ ವರ್ತಿಸುತ್ತಿದ್ದಾರೆ: ಶ್ರೀನಿವಾಸ್ ಪ್ರಸಾದ್

ಹೆಚ್ ಡಿ ದೇವೇಗೌಡ ಕುಟುಂಬದವರು ಬಿಪಿಎಲ್ ಕಾರ್ಡ್ ಹೊಂದಿರುವವರಂತೆ ಆಡುತ್ತಿದ್ದಾರೆ ಎಂದು ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಛೇರಿ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ...

ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿಃ ಹಲವರು ಸಿಲುಕಿರುವ ಶಂಕೆ

ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಹಲವರು ಕಟ್ಟಡದೊಳಗೆ ಸಿಲುಕಿರುವ ಘಟನೆ ತಡರಾತ್ರಿ ನಡೆದಿದೆ. ಮುಂಬೈನ್ ಮಲಾಡ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ 42 ಅಂತಸ್ತಿನ ಕಟ್ಟಡದ 37ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡ ಪೂರ್ಣ ರೀತಿಯಲ್ಲಿ ಶಿಥಿಲವಾಗಿದೆ ಎಂದು ತಿಳಿದುಬಂದಿದೆ. ಕಟ್ಟಡದೊಳಗೆ ಹಲವು ಕಾರ್ಮಿಕರು...

ಅನಿವಾಸಿ ಭಾರತೀಯರಿಗೆ ಇ-ಮತದಾನ ಸೌಲಭ್ಯ

ಅನಿವಾಸಿ ಭಾರತೀಯರಿಗೂ ಮತದಾನ ಮಾಡುವ ಹಕ್ಕು ದೊರೆತಿದೆ. ಎನ್.ಆರ್.ಐ ಗಳು ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಮತಚಲಾವಣೆ ಮಾಡುವುದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇ-ವೋಟಿಂಗ್ ಮೂಲಕ ಅನಿವಾಸಿ ಭಾರತೀಯರಿಗೆ ಮತದಾನ ಮಾಡುವ ಅವಕಾಶ ನೀಡಬೇಕು, ಈ ಸೌಲಭ್ಯವನ್ನು 8 ವಾರಗಳಲ್ಲಿ...

ಐಪಿಎಲ್ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ: ಶ್ರೀನಿವಾಸನ್

ಒಂದು ವೇಳೆ ತಾವು ಬಿಸಿಸಿಐ ಅಧ್ಯಕ್ಷನಾಗಿ ಆಯ್ಕೆಗೊಂಡಲ್ಲಿ ಎಲ್ಲಾ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಾವಳಿಗೆ ಸಂಬಂಧಿಸಿದ ವಿಚಾರಗಳಿಂದ ದೂರ ಇರುವುದಾಗಿ ಎನ್.ಶ್ರೀನಿವಾಸನ್ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಹೇಳಿಕೆ ನೀಡಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ನ ಅನುಮತಿ ಕೇಳಿದ ಶ್ರೀನಿವಾಸನ್‌...

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರದ್ದು ಮಾಡಲು ಸುಪ್ರೀಂ ಆದೇಶ

'ಐಪಿಎಲ್'6ನೇ ಆವೃತ್ತಿಯ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕ ಗುರುನಾಥ್ ಮೇಯಪ್ಪನ್ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ರದ್ದುಗೊಳಿಸುವಂತೆ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮುದ್ಗಲ್ ಸಮಿತಿಯ ವರದಿಯನ್ನು ಪಾಲಿಸುವಂತೆ ಬಿಸಿಸಿಐಗೆ ಸೂಚಿಸಿರುವ...

ನೀವು ಕ್ರಿಕೆಟ್ ನ್ನು ಕೊಲ್ಲುತ್ತಿದ್ದೀರಿ: ಬಿಸಿಸಿಐಗೆ ಸುಪ್ರೀಂ ಚಾಟಿ

'ಫಿಕ್ಸಿಂಗ್ ಹಗರಣ'ದ ಕಳಂಕ ಹೊತ್ತಿರುವ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಚಾಟಿ ಏಟು ನೀಡಿದ್ದು ನೀವು ಕ್ರಿಕೆಟನ್ನು ಕೊಲ್ಲುತ್ತಿದ್ದೀರಿ ಎಂದು ಛೀಮಾರಿ ಹಾಕಿದೆ. ಐಪಿಎಲ್ ಸೀಸನ್-6ರಲ್ಲಿ ನಡೆದ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಹಗರಣದ ತನಿಖೆ ನಡೆಸಿದ್ದ ಮುದ್ಗಲ್ ಸಮಿತಿ ವರದಿಯಲ್ಲಿ ತಮ್ಮ ಹೆಸರು...

ಕೃಷಿಕರಿಗೆ ಸಿಗುವ ಸ್ವಾತಂತ್ತ್ಯ ಬೇರೆಲ್ಲೂ ಇಲ್ಲ: ಶ್ರೀನಿವಾಸ ರಾವ್ ಪೈಲೂರು

ಪರಿಸರದಲ್ಲಿ ಪ್ರತಿಯೊಂದು ಗಿಡವೂ ಮುಖ್ಯವಾದುದು. ಪರಿಸರದ ಮಧ್ಯದಲ್ಲಿ ಸಿಗುವ ಸುಖ ಎಲ್ಲಿಯೂ ಸಿಗಲಾರದು. ಗಿಡಮರಗಳನ್ನು ಬೆಳೆಸುವಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಯಾವ ಉದ್ಯೋಗದಲ್ಲೂ ಸಿಗಲಾರದು. ಹಾಗಾಗಿ ನಾವೆಲ್ಲ ಗಿಡಗಳನ್ನು ಪ್ರೀತಿಸಿ, ಬೆಳೆಸಿ, ಪೋಷಿಸಬೇಕೆಂದು ಶ್ರೀನಿವಾಸ ರಾವ್ ಪೈಲೂರು ತಿಳಿಸಿದ್ದಾರೆ. ಸ್ನೇಹ ಶಿಕ್ಷಣ...

ಒಮರ್ ಅಬ್ದುಲ್ಲಾ ನಿವಾಸದ ಬಳಿ ಗುಂಡಿನ ದಾಳಿ

ಭಾರತದ ಗಡಿಯಲ್ಲಿ ಪಾಕಿಸ್ತಾನ ತನ್ನ ಪುಂಡಾಟಿಕೆ ಮುಂದುವರೆಸಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿವಾಸದ ಬಳಿ ಪಾಕ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 7.30ರ ಸುಮಾರಿನಲ್ಲಿ ಶ್ರೀನಗರದಲ್ಲಿರುವ ಒಮರ್ ಅಬ್ದುಲ್ಲಾ ಮನೆ ಬಳಿ ಯೋಧನೊಬ್ಬ ಗಾಳಿಯಲ್ಲಿ 15 ಸುತ್ತು ಗುಂಡು ಹಾರಿಸಿದ್ದಾನೆ...

ಸಿಡ್ನಿಯಲ್ಲಿ ಮರುಕಳಿಸಿದ ಮ್ಯಾಡಿಸನ್ ಸ್ಕ್ವೇರ್ ನ ಮೋದಿ ಮೋಡಿ

ನಿಮ್ಮ ಕನಸು ನನ್ನ ಕನಸಿನ ಭಾರತವೂ ಆಗಿದೆ. ನೀವು ನೋಡಬಯಸುತ್ತಿರುವ ಭಾರತವನ್ನೇ ನಾನೂ ನೋಡಬಯಸುತ್ತೇನೆ, ದೇವರು ನೀಡಿರುವ ಬುದ್ಧಿ, ಶಕ್ತಿ, ಸಮಯವನ್ನು ನಿಮ್ಮ ಕನಸಿನ ಭಾರತ ನಿರ್ಮಾಣಕ್ಕಾಗಿ ವಿನಿಯೋಗಿಸುತ್ತೇನೆ ಎಂದು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ...

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ: ಶ್ರೀನಿವಾಸ, ಮೇಯಪ್ಪನ್,ರಾಜ್ ಕುಂದ್ರಾ ಹೆಸರು ಬಹಿರಂಗ

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಹಗರಣ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ತನಿಖಾ ಸಮಿತಿಯಲ್ಲಿ ಉಲ್ಲೇಖಿಸಲಾಗಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಗೊಳಿಸಿದೆ. ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಸಮಿತಿ ನೀಡಿರುವ ವರದಿಯಲ್ಲಿ ಗುರುನಾಥ್ ಮೇಯಪ್ಪನ್,...

2012-13 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ

ಜಾನಪದ ಅಕಾಡೆಮಿಯು 2012 ಮತ್ತು 2013ರ ಸಾಲಿನ ಜಾನಪದ ಪ್ರಶಸ್ತಿ ಹಾಗೂ ತಜ್ಞ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಗೆ ಇಬ್ಬರಂತೆ ಒಟ್ಟು 30 ಜಿಲ್ಲೆಗಳಿಂದ 60 ಮಂದಿ ಕಲಾವಿದರನ್ನು ಹಾಗೂ 4 ಮಂದಿ ವಿದ್ವಾಂಸರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ...

ಸರ್ಕಾರ ನೀಡಿದ ಭೂಮಿ ಬಳಸಿಕೊಳ್ಳದಿದ್ದರೆ ವಾಪಸ್

ಕೈಗಾರಿಕೆಗಳು ಹಾಗೂ ಮಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರದಿಂದ ನೀಡಲಾಗಿರುವ ಭೂಮಿಯನ್ನು ನಿಗದಿತ ಸಮಯದಲ್ಲಿ ಬಳಸಿಕೊಳ್ಳದಿದ್ದರೆ ಅವುಗಳನ್ನು ವಾಪಸ್ ಪಡೆಯಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಜಮೀನನ್ನು ನಿರ್ದಿಷ್ಟ ಸಮಯದಲ್ಲಿ ಬಳಸಿಕೊಳ್ಳದಿದ್ದಲ್ಲಿ ಅಂತಹ ಭೂಮಿ ಹಿಂಪಡೆಯಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು...

ಮ್ಯಾಡಿಸನ್ ಸ್ಕ್ವೇರ್ ನಲ್ಲಿ ಮೋದಿ ಮೋಡಿ: ಜನ ಮನ ಗೆದ್ದ ಪ್ರಧಾನಿ

ನ್ಯೂಯಾರ್ಕ್ ನ ಮ್ಯಾಡಿಸನ್ ಗಾರ್ಡನ್ ನಲ್ಲಿ ನೆರೆದಿದ್ದ 18 ಸಾವಿರಕ್ಕೂ ಅನಿವಾಸಿ ಭಾರತೀಯರಿಗೆ ಭಾನುವಾರ ಅವಿಸ್ಮರಣೀಯ ದಿನ. ತಮ್ಮ ನೆಚ್ಚಿನ ನಾಯಕನ ಮಾತಿನ ಮೋಡಿಗೆ ಹುಚ್ಚೆದ್ದು ಕುಣಿದ ಅಭಿಮಾನಿಗಳು. ಬಹುಕಾಲದಿಂದ ನಿರೀಕ್ಷೆಯಿಂದ ಕಾದಿದ್ದ ಅನಿವಾಸಿ ಭಾರತೀಯರ ಪಾಲಿಗೆ ಮೋದಿಯವರನ್ನು ಕಣ್ಣಾರೆ ಕಂಡು...

ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ದೊರೆತಿದೆ. ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಬೆಳಿಗ್ಗೆ 8.37ರಿಂದ 9.05ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಸಾಹಿತಿ ಗಿರೀಶ್ ಕಾರ್ನಾಡ್ ಅಗ್ರಪೂಜೆ...

ರಾಜವಂಶ-ಸರ್ಕಾರ ನಡುವಿನ ಶೀತಲ ಸಮರ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಡ್ಡಿ

ರಾಜವಂಶಸ್ಥೆ ಪ್ರಮೋದಾದೇವಿ ಹಾಗೂ ಸರ್ಕಾರದ ನಡುವಿನ ಶೀತಲ ಸಮರ ದಸರಾ ಅಂಗವಾಗಿ ನಡೆಯಬೇಕಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿತ್ತು. ಆದರೆ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹ...

ನೆಚ್ಚಿನ ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲು ಅಮೆರಿಕದಲ್ಲಿ ಭರದ ಸಿದ್ಧತೆ

'ಪ್ರಧಾನಿ'ಯಾದ ಬಳಿಕ ಪ್ರಥಮ ಬಾರಿಗೆ ಅಮೆರಿಕಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಅಲ್ಲಿ ನೆಲೆಸಿರುವ ಭಾರತ ಸಂಜಾತ ಪ್ರಜೆಗಳು ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದು ಸಕಲ...

ಡಿ.ಕೆ.ಶಿ ಮನೆ ಒಡೆಯುವುದರಲ್ಲಿ ನಿಸ್ಸೀಮರು: ಈಶ್ವರಪ್ಪ

ವಿಧಾನಸಭೆ ಉಪಚುನಾವಣೆ ಭರಾಟೆ ದಿನದಿಂದ ದಿನಕ್ಕೆ ಅಬ್ಬರಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ನಿವಾಸಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ವಿಚಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಡಿ.ಕೆ.ಶಿವಕುಮಾರ್ ಮನೆ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited