Untitled Document
Sign Up | Login    
Dynamic website and Portals
  
August 21, 2015

ಬಿಬಿಎಂಪಿ ಚುನಾವಣೆಗೆ ಸಿದ್ಧತೆ

ಬಿಬಿಎಂಪಿ ಚುನಾವಣಾ ತಯಾರಿ ಬಿಬಿಎಂಪಿ ಚುನಾವಣಾ ತಯಾರಿ

BW News Bureau : ಬಿಬಿಎಂಪಿ ಚುನಾವಣಾ ಮಹಾಸಮರಕ್ಕೆ ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಪಿ ಎನ್‌ ಶ್ರೀನಿವಾಸಾಚಾರಿ ಹೇಳಿದ್ದಾರೆ. ಗುರುವಾರ ಬೆಂಗಳೂರು ಪ್ರೆಸ್‌ ಕ್ಲಬ್‌ ಏರ್ಪಡಿಸಿದ್ದ ಬಿಬಿಎಂಪಿ ಚುನಾವಣೆ ಕುರಿತ ಸಂವಾದದಲ್ಲಿ ಅವರು ಚುನಾವಣಾ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ ಒಂದರಲ್ಲಿ ಈಗಾಗಲೇ ಅವಿರೋಧ ಆಯ್ಕೆಯಾಗಿದ್ದು, 197 ವಾರ್ಡ್‌ಗಳಲ್ಲಿ ಶನಿವಾರ ಮತದಾನ ನಡೆಯಲಿದೆ. ಈ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಉಸ್ತುವಾರಿ ವಹಿಸಿಕೊಳ್ಳಲು ಆಯೋಗದಿಂದ 54 ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಅಲ್ಲದೇ, ವಿಶೇಷ ವೀಕ್ಷಕರನ್ನಾಗಿ 7 ಮಂದಿ ಐಎಎಸ್‌ ಹಂತದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರ ಜಿಲ್ಲಾ ಚುನಾವಣಾಧಿಕಾರಿಗಳು ಅಗತ್ಯ ಸಿದ್ದತೆ ಪೂರ್ಣಗೊಳಿಸಿದ್ದು, ನ್ಯಾಯಸಮ್ಮತವಾಗಿ ಮತದಾನ ನಡೆಯಲಿದೆ ಎಂದರು.

ಮತದಾನ ಆರಂಭವಾಗುವ 24 ಗಂಟೆಗಳ ಮುಂಚಿತವಾಗಿ ಹಾಗೂ ಮತದಾನದ ಪೂರ್ತಿ ದಿನ ಹಾಗೂ ಮತ ಎಣಿಕೆ ದಿನಗಳಂದು ಮಧ್ಯಾರಾತ್ರಿ ವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಮತದಾರರು- 73,88,256
ಮಹಿಳೆಯರು- 35,10,828
ಪುರುಷರು- 38,76,244
ಇತರೆ- 1,184

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : BBMP

ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ರಸ್ತೆ ಗುಂಡಿ ಮುಚ್ಚಲು 10 ದಿನಗಳ ಗಡುವು: ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಆದೇಶ
  • ನಗರದ ರಸ್ತೆ ಗುಂಡಿಗಳನ್ನು 10 ದಿನದೊಳಗೆ ಮುಚ್ಚುವಂತೆ ಸಿಎಂ ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
  • ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ
  • ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited