Untitled Document
Sign Up | Login    
Dynamic website and Portals
  
December 18, 2015

ಬೆಂಗಳೂರಲ್ಲಿ ಕಸ ವಿಂಗಡಣೆ ಕಡ್ಡಾಯಗೊಳಿಸಿ ಹೈಕೋರ್ಟ್ ಆದೇಶ; ಉಲ್ಲಂಘನೆಗೆ ಭಾರೀ ದಂಡ

ಏನು ಮಾಡಬೇಕು?
ಕಸವನ್ನು ಮೂರು ಭಾಗವಾಗಿ ವಿಂಗಡಿಸಬೇಕು
ಹಸಿರು ಡಬ್ಬಿಗೆ ಸಂಸ್ಕರಿಸಬಹುದಾದ ತರಕಾರಿ-ಹಣ್ಣು ತ್ಯಾಜ್ಯ
ಕೆಂಪು ಡಬ್ಬಿಗೆ ಡೈಪರ್,ಬ್ಲೇಡ್,ಔಷಧ,ಸಿರಿಂಜು,ಗಾಜು
ಸಂಸ್ಕರಿಸಲಾಗದ ಪ್ಲಾಸ್ಟಿಕ್,ಬಾಟಲಿ ಮತ್ತು ಇತರ ವಸ್ತುಗಳು ಬೇರೆ ಚೀಲದಲ್ಲಿ ಹಾಕಬೇಕು
ಉಲ್ಲಂಘಿಸಿದವರಿಗೆ ರೂ100-5000ದವರೆಗೆ ದಂಡ

BW News Bureau : ಬೆಂಗಳೂರು ನಗರದ ನಾಗರಿಕರು ಇನ್ನು ಮುಂದೆ ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಸ್ಕರಣೆಯಾಗುವ (ಹಸಿ) ತ್ಯಾಜ್ಯ ಮತ್ತು ಸಂಸ್ಕರಣೆಯಾಗದ (ಒಣ) ತ್ಯಾಜ್ಯವಾಗಿ ವಿಂಗಡಣೆ ಮಾಡಲು ಎರಡು ಕಸದ ಡಬ್ಬಿ ಮತ್ತು ಒಂದು ಬ್ಯಾಗ್‌ ಎಂಬ ನೂತನ ವಿಧಾನ ಅಳವಡಿಸಿಕೊಳ್ಳುವುದನ್ನು ಹೈಕೋರ್ಟ್‌ ಕಡ್ಡಾಯಗೊಳಿಸಿ ಗುರುವಾರ ಆದೇಶಿಸಿದೆ.

ನಿಯಮ ಉಲ್ಲಂಘಿಸುವ ನಾಗರಿಕರಿಗೆ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ - 1976ರ ಸೆಕ್ಷನ್‌ 431(ಆ) ಪ್ರಕಾರ ದಂಡ ವಿಧಿಸಲು ಕೋರ್ಟ್‌ ಆದೇಶಿಸಿದ್ದು, ಅದರ ಅಡಿಯಲ್ಲಿ ಕನಿಷ್ಠ 100 ರೂ.ಗಳಿಂದ ಗರಿಷ್ಠ 5000 ರೂ. ದಂಡ ವಿಧಿಸಲು ಅವಕಾಶವಿದೆ ಎನ್ನಲಾಗುತ್ತಿದೆ.

ಇನ್ನು ಮುಂದೆ ಬೆಂಗಳೂರು ಜನತೆ ಹಸಿರು ಮತ್ತು ಕೆಂಪುಬಣ್ಣದ ಪ್ರತ್ಯೇಕ ಎರಡು ಕಸದ ಡಬ್ಬಿ ಮತ್ತು ಒಂದು ಬ್ಯಾಗ್‌ (ಚೀಲ)ನಲ್ಲಿ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಿಸಬೇಕು. ಹಸಿರು ಬಣ್ಣದ ಡಬ್ಬಿಯಲ್ಲಿ ಹಸಿ ಅಥವಾ ಸಂಸ್ಕರಣೆಯಾಗುವ ತ್ಯಾಜ್ಯ ಮತ್ತು ಕೆಂಪುಬಣ್ಣದ ಡಬ್ಬಿಯಲ್ಲಿ ಔಷಧದಂತಹ ಪದಾರ್ಥಗಳನ್ನು ಸಂಗ್ರಹಿಸಬೇಕು. ಇನ್ನೂ ಒಂದು ಚೀಲದಲ್ಲಿ ಸಂಸ್ಕರಣೆಯಾಗದ ಅಥವಾ ಘನ ತ್ಯಾಜ್ಯವನ್ನು ಸಂಗ್ರಹಿಸಿ ಬಿಬಿಎಂಪಿ ನಿಯೋಜಿಸಿದ ಕಸ ಸಂಗ್ರಹ ವ್ಯಕ್ತಿಗೆ ನೀಡಬೇಕು ಎಂದು ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದೆ.

ತ್ಯಾಜ್ಯ ವಿಲೇವಾರಿ ಸಂಬಂಧ ಇನ್ನೂ ಹಲವು ನಿರ್ದೇಶನಗಳನ್ನು ನ್ಯಾಯಪೀಠ ನೀಡಿದೆ. ಅವುಗಳೆಂದರೆ, ಮನೆ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಕಸ ಸಂಸ್ಕರಣೆ ಘಟಕಗಳಿಗೆ ನೇರವಾಗಿ ಸಾಗಣೆ ಮಾಡಬೇಕು. ಮನೆಯಿಂದ ಸಂಗ್ರಹಿಸಿದ ವಿಂಗಡಿಸಿದ ಕಸವನ್ನು ಯಾವುದೇ ಸನ್ನಿವೇಶದಲ್ಲೂ ಮಿಶ್ರಣ ಮಾಡಿ ಸಾಗಣೆ ಮಾಡದಂತೆ ಇಲಾಖೆಗಳು ಖಾತರಿವಹಿಸಬೇಕು ಎಂದು ಪೀಠ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ಮೇಲಿನ ಸಿದ್ಧತೆಗಳ ಅನುಪಸ್ಥಿತಿಯಲ್ಲಿ ಮಾತ್ರ ಎರಡನೇ ಹಂತದ ಕಸ ಸಂಗ್ರಹ (ಬಿಬಿಎಂಪಿ ನಿಗದಿಪಡಿಸಿದ ಕಸದ ತೊಟ್ಟಿಯಲ್ಲಿ) ಮಾತ್ರ ಕಸವನ್ನು ಸಂಗ್ರಹಿಸಬೇಕು ಎಂದಿದೆ.

ಬಿಬಿಎಂಪಿಯು 3 ವಿಧಾನದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಜನರು ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ -1976ರ ಸೆಕ್ಷನ್‌ 431(ಆ) ಪ್ರಕಾರ ದಂಡ ವಿಧಿಸುವುದರ ಜೊತೆಗೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಹೈಕೋರ್ಟ್‌ ಆದೇಶಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited