Untitled Document
Sign Up | Login    
Dynamic website and Portals
  
December 31, 2015

ಸೋನಿಯಾ ಗಾಂಧಿ ಬಂಗಲೆ ಪ್ರಧಾನಿ ಮೋದಿ ನಿವಾಸಕ್ಕಿಂತಲೂ ದೊಡ್ಡದು!

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

ನವದೆಹಲಿ : ಹೌದು, ವಿಚಿತ್ರವೆನಿಸಿದರೂ ಇದು ಸತ್ಯ!. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸ ಭಾರತದ ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸಕ್ಕಿಂತಲೂ ದೊಡ್ಡದು. ಸೋನಿಯಾ ಗಾಂಧಿ ಮನೆ ದೇಶದ ರಾಜಕಾರಣಿಗಳಲ್ಲಿ ಅತ್ಯಂತ ದೊಡ್ಡ ನಿವಾಸಗಳಲ್ಲೊಂದು. ಈ ಮಾಹಿತಿ ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಮೂಲಕ ಪಡೆಯಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸ 7 ರೇಸ್ ಕೋರ್ಸ್ ರಸ್ತೆ, 14,101 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಸೋನಿಯಾ ಗಾಂಧಿ ಬಂಗಲೆ 10 ಜನಪತ್ ಬರೋಬ್ಬರಿ 15,181 ಚ.ಮೀ. ವಿಸ್ತೀರ್ಣ ಹೊಂದಿದೆ!. ಕೇವಲ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರು ಇದಕ್ಕಿಂತ ದೊಡ್ಡ ನಿವಾಸ ಪಡೆಯುವ ಭಾಗ್ಯ ಹೊಂದಿದ್ದಾರೆ.

ಈ ಮಾಹಿತಿಯನ್ನು ಆರ್.ಟಿ.ಐ ಮೂಲಕ ದೇವ್ ಆಶಿಷ್ ಭಟ್ಟಾಚಾರ್ಯ ಎಂಬುವವರು ಪಡೆದಿದ್ದಾರೆ.

ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದಿದ್ದರೂ ಕೇವಲ ಸಂಸದೆಯಾಗಿರುವ ಸೋನಿಯಾ ಗಾಂಧಿಯವರಿಗೆ ಇಷ್ಟು ದೊಡ್ಡ ಭವ್ಯ ಬಂಗಲೆಯನ್ನು ಹಿಂದಿನ ಸರಕಾರ ವಿಶೇಷವಾಗಿ ನೀಡಿತ್ತು.

ರಾಷ್ಟ್ರಪತಿ ಬಂಗಲೆ 320 ಎಕರೆ ಪ್ರದೇಶವನ್ನು ವ್ಯಾಪಿಸಿದ್ದರೆ, ಮೌಲಾನಾ ಅಜಾದ್ ರಸ್ತೆಯಲ್ಲಿರುವ ಉಪ ರಾಷ್ಟ್ರಪತಿ ಯವರ ಬಂಗಲೆ ವಿಸ್ತೀರ್ಣ 26,333.49 ಚ.ಮೀಟರ್.

ಅಷ್ಟೇ ಅಲ್ಲ, ತುಘಲಕ್ ರಸ್ತೆಯಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಬಂಗಲೆ 5,022.58 ಚ.ಮೀ. ದಷ್ಟು ವಿಸ್ತಾರವಾಗಿದ್ದು, ಲೋಧಿ ಎಸ್ಟೇಟ್ ನಲ್ಲಿರುವ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾಡ್ರಾ ಅವರ ಬಂಗಲೆ 2,765.18 ಚ.ಮೀ. ವಿಸ್ತೀರ್ಣ ಹೊಂದಿದೆ. ಕೇವಲ ಗಾಂಧಿ ಪರಿವಾರ ಎಂಬ ಕಾರಣಕ್ಕೆ ತೆರಿಗೆದಾರರ ಹಣದಲ್ಲಿ ಇವರಿಗೆ ವಿಶಾಲವಾದ ಬಂಗಲೆಗಳನ್ನು ಕೊಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಆಶ್ಚರ್ಯವೆಂದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶ ಸರಕಾರ ಪ್ರಿಯಾಂಕಾ ವಾಡ್ರಾಗೆ ಸೇರಿದ ಭೂಮಿಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ಅವರು ಎಸ್.ಪಿ.ಜಿ. ಭದ್ರತೆ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಈ ಮಾಹಿತಿಯನ್ನು ನೀಡಲು ಸರಕಾರ ನಿರಾಕರಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited