Untitled Document
Sign Up | Login    
Dynamic website and Portals
  
January 12, 2015

ಅನಿವಾಸಿ ಭಾರತೀಯರಿಗೆ ಇ-ಮತದಾನ ಸೌಲಭ್ಯ

ನವದೆಹಲಿ : ಅನಿವಾಸಿ ಭಾರತೀಯರಿಗೂ ಮತದಾನ ಮಾಡುವ ಹಕ್ಕು ದೊರೆತಿದೆ. ಎನ್.ಆರ್.ಐ ಗಳು ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಮತಚಲಾವಣೆ ಮಾಡುವುದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇ-ವೋಟಿಂಗ್ ಮೂಲಕ ಅನಿವಾಸಿ ಭಾರತೀಯರಿಗೆ ಮತದಾನ ಮಾಡುವ ಅವಕಾಶ ನೀಡಬೇಕು, ಈ ಸೌಲಭ್ಯವನ್ನು 8 ವಾರಗಳಲ್ಲಿ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್ ಆದೇಶವನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ, ಇ-ಬ್ಯಾಲೆಟ್ ಮೂಲಕ ಎನ್.ಆರ್.ಐಗಳಿಗೆ ಮತದಾನ ಮಾಡುವ ಸೌಲಭ್ಯ ನೀಡುವ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.

ಇ-ಬ್ಯಾಲೆಟ್ ಡೌನ್ ಲೋಡ್ ಮಾಡಿ ಅಭ್ಯರ್ಥಿಗಳಿಗೆ ಮತ ಚಲಾವಣೆ ಮಾಡುವುದರ ಮೂಲಕ ಇನ್ನು ಮುಂದೆ ಎನ್.ಆರ್ ಐಗಳೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎನ್.ಆರ್.ಐಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲು ಕಾನೂನಿಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited