Untitled Document
Sign Up | Login    
Cars & Bikes

2013 TOP 5 CARS

Prev

cars 2013

Next

ಭಾರತೀಯ ಕಾರುಮಾರುಕಟ್ಟೆ ಕಡೆಗೆ ನೋಡಿದರೆ ಬಹುತೇಕ ಕಂಪನಿಗಳು 2013 ಅಂತ್ಯವಾಗುವುದನ್ನೇ ಕಾಯುತ್ತಿವೆ. ಈ ವರ್ಷ ಆರಂಭದಿಂದಲೂ ಕಾರು ಮಾರುಕಟ್ಟೆ ಅನೇಕ ಕಾರಣಗಳಿಂದಾಗಿ ಚೇತರಿಸಿಕೊಂಡಿಲ್ಲ. ಆದರೂ ಹಲವು ಮಾದರಿಯ ಕಾರುಗಳನ್ನು ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಅವುಗಳಲ್ಲಿ ಗಮನ ಸೆಳೆದ ಟಾಪ್‌ 5 ಕಾರುಗಳ ಪಟ್ಟಿ ಇಲ್ಲಿದೆ.


     Next

2013 TOP 5 CARS

Prev

Grand I 10

Next

ಹ್ಯುಂಡೈ ಗ್ರಾಂಡ್ ಐ 10

ಹ್ಯುಂಡೈ ಕಂಪನಿ ಈ ವರ್ಷ ಬಿಡುಗಡೆ ಮಾಡಿದ ಗ್ರಾಂಡ್ ಐ 10 ಕಾರು ಗ್ರಾಹಕರ ಮೆಚ್ಚುಗೆಗಳಿಸಿದ್ದು, ಇದರ ದರ 4.29 ಲಕ್ಷ ರೂ.-6.41 ಲಕ್ಷ ರೂ. ಇದು ಹೊಸ ಮಾದರಿ ಕಾರಾಗಿದ್ದು, ಹ್ಯುಂಡೈ ಐ 20 ಮತ್ತು ಹ್ಯುಂಡೈ ಐ 10 ನಡುವಿನ ಮಾದರಿ ಇದಾಗಿದೆ. ಡೀಸೆಲ್‌ ಎಂಜಿನ್, ಪೆಟ್ರೋಲ್‌ ಎಂಜಿನ್‌ ಎಂಬ ಎರಡು ಮಾದರಿಯಲ್ಲಿ ಕಾರುಗಳು ಲಭ್ಯವಿದೆ.


     Next

2013 TOP 5 CARS

Prev

Stile

Next

ಅಶೋಕ್ ಲೈಲಾಂಡ್ ಸ್ಟೈಲ್

ಹಿಂದೂಜಾ ಗ್ರೂಪ್‌ನ ಅಶೋಕ್ ಲೈಲಾಂಡ್ ಅಕ್ಟೋಬರ್‌ನಲ್ಲಿ ಮಲ್ಟಿ ಪರ್ಪಸ್‌ ವಾಹನ "ಸ್ಟೈಲ್‌" ಬಿಡುಗಡೆ ಮಾಡಿದ್ದು, ಇದರ ದರ 7.49 ಲಕ್ಷ ರೂ. 9.29 ಲಕ್ಷ ರೂ.(ದೆಹಲಿ ಎಕ್ಸ್ ಷೋರೂಂ ದರ). ಸಾಮಾನ್ಯ ಡೀಸೆಲ್‌ ಎಂಜಿನ್ ಹೊಂದಿರುವ ಈ ವಾಹನ, 5 ಸ್ಫೀಡ್‌ ಮ್ಯಾನುವೆಲ್‌ ಟ್ರಾನ್ಸ್‌ಮಿಷನ್ ಹೊಂದಿದ್ದು, ಲೀಟರ್‌ಗೆ 19.5 ಕಿ.ಮೀ. ಮೈಲೇಜ್‌ ಕೊಡುತ್ತದೆ ಎಂದು ಕಂಪನಿ ಹೇಳಿತ್ತು. ಇದು ಲೈಲಾಂಡ್‌ ಮತ್ತು ನಿಸ್ಸಾನ್‌ ಕಂಪನಿಗಳ ಜಂಟಿ ಉತ್ಪನ್ನವಾಗಿದೆ.


     Next

2013 TOP 5 CARS

Prev

ENJOY

Next

ಷೆವರ್ಲೆ ಎಂಜಾಯ್‌
ಜನರಲ್‌ ಮೋಟಾರ್ಸ್‌ ಇಂಡಿಯಾ ಕಳೆದ ಮೇ ತಿಂಗಳಲ್ಲಿ "ಎಂಜಾಯ್‌" ಮಾದರಿ ಕಾರನ್ನು ಬಿಡುಗಡೆ ಮಾಡಿತ್ತು. ಇದರ ದರ 5.49 ಲಕ್ಷ ರೂ.ಗಳಿಂದ 7.99 ಲಕ್ಷ ರೂ.(ದೆಹಲಿ ಎಕ್ಸ್ ಷೋರೂಂ ದರ). ನಾಲ್ಕು ಸಿಲೆಂಡರ್‌ ಎಂಜಿನ್‌ ಹೊಂದಿರುವ ಈ ಕಾರು ಪೆಟ್ರೋಲ್‌ ಮತ್ತು ಡೀಸೆಲ್‌ ಮಾದರಿಗಳಲ್ಲಿ ಲಭ್ಯ.


     Next

2013 TOP 5 CARS

Prev

Honda Amaze

Next

ಹೊಂಡಾ ಅಮೇಝ್‌

ಆಟೊಮೊಬೈಲ್‌ ಕ್ಷೇತ್ರದ ದಿಗ್ಗಜ ಕಂಪನಿ ಹೊಂಡಾ ಕಳೆದ ಏಪ್ರಿಲ್‌ನಲ್ಲಿ ಬಹುನಿರೀಕ್ಷಿತ ಸೀಡಾನ್‌ "ಅಮೇಝ್‌" ಮಾದರಿ ಕಾರನ್ನು ಬಿಡುಗಡೆ ಮಾಡಿದೆ. 5 ಲಕ್ಷ ರೂ. ಇದರ ಆರಂಭಿಕ ದರವಾಗಿದ್ದು, ಡೀಸೆಲ್ ಮತ್ತು ಪೆಟ್ರೋಲ್‌ ಮಾದರಿಗಳಲ್ಲಿ ಲಭ್ಯ. ಡೀಸೆಲ್‌ನಲ್ಲಿ ನಾಲ್ಕು ರೀತಿಯ ಮತ್ತು ಪೆಟ್ರೋಲ್‌ನಲ್ಲಿ ಆರು ರೀತಿಯ ಕಾರುಗಳನ್ನು ಕಂಪನಿ ಮಾರುಕಟ್ಟೆಗೆ ಬಿಟ್ಟಿದೆ.


     Next

2013 TOP 5 CARS

Prev

ford EcoSport

Next

ಫೋರ್ಡ್‌ ಇಕೋಸ್ಪೋರ್ಟ್

ಜಾಗತಿಕ ಆಟೋ ಮೊಬೈಲ್‌ ಕ್ಷೇತ್ರದ ಮುಂಚೂಣಿ ಕಂಪನಿ ಫೋರ್ಡ್ ಜೂನ್‌ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ "ಇಕೋಸ್ಫೋರ್ಟ್" ಮಾದರಿ ಕಾರನ್ನು ಪರಿಚಯಿಸಿತು. ಇದು ಹೊಸ ಮಾದರಿಯ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಆಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಲಭ್ಯ. ಪೆಟ್ರೋಲ್‌ ಎಸ್‌ಯುವಿಗೆ ಆರಂಭಿಕ ಬೆಲೆ 5.59 ಲಕ್ಷ ರೂ., ಡೀಸೆಲ್ ಮಾದರಿಯ ಎಸ್‌ಯುವಿಗೆ ಆರಂಭಿಕ ಬೆಲೆ 7.90 ಲಕ್ಷ ರೂ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited