Untitled Document
Sign Up | Login    
Cars & Bikes

ಎಕ್ಸಲೆಂಟ್ ಹ್ಯುಂಡೈ ಎಕ್ಸೆಂಟ್ !

Prev

ಹ್ಯುಂಡೈ ಎಕ್ಸೆಂಟ್

Next

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಫ್ಯಾಮಿಲಿ ಕಾರುಗಳಿಗೆ ಬಹಳ ಬೇಡಿಕೆ. ದಕ್ಷಿಣ ಕೊರಿಯಾ ಮೂಲದ ಹುಂಡೈ ಕಂಪನಿ ಭಾರತೀಯ ಮನಗೆದ್ದಿರುವುದೂ ಇದೇ ಫ್ಯಾಮಿಲಿ ಕಾರುಗಳ ಮೂಲಕವೇ ಎಂದರೆ ಅಚ್ಚರಿಯೇನಿಲ್ಲ. ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಕ್ಸೆಂಟ್ ಕೂಡಾ ಎಕ್ಸಲೆಂಟ್ ಫ್ಯಾಮಿಲಿ ಕಾರುಗಳಲ್ಲಿ ಒಂದು.
ಹೊಂಡಾ ಅಮೇಜ್‍ಗೆ ಕಾಂಪಿಟೇಟಿವ್ ಎನ್ನುವಂತೆ ರಸ್ತೆಗಿಳಿದ ಹುಂಡೈ ಎಕ್ಸೆಂಟ್ ಹೆಚ್ಚೂಕಡಿಮೆ ಗ್ರಾಂಡ್ ಐ10 ಕಾರಿನ ಮತ್ತೊಂದು ರೂಪ. ಗ್ರಾಂಡ್ ಐ10 ಕಾರಿನ ಅಪ್‍ಡೇಟ್ ವರ್ಷನ್ ಎಂದೂ ಹೇಳಬಹುದು.
ಏನಿದರ ವಿಶೇಷ: ಕಂಪನಿ ಹೇಳಿಕೊಂಡಿರುವ ಪ್ರಕಾರ, ಯುಟು ಸಿಆರ್‍ಡಿಐ ಡೀಸೆಲ್ ಎಂಜಿನ್, ಅತ್ಯಾಕರ್ಷಕ ಮತ್ತು ಆರಾಮದಾಯಕ ಒಳವಿನ್ಯಾಸ ಹೊಂದಿದ್ದು, ಹೊರ ನೋಟಕ್ಕೆ ಸ್ವಿಫ್ಟ್ ಡಿಸೈರ್ ಕಾರಿನ ವಿನ್ಯಾಸ, ಸೆಗ್ಮೆಂಟ್ ಲೀಡಿಂಗ್ 407 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಈ ಕಾರು ಪ್ರತಿ ಲೀಟರ್
ಡೀಸೆಲ್‍ಗೆ 24.4 ಕಿ.ಮೀ., ಪ್ರತಿ ಲೀಟರ್ ಪೆಟ್ರೋಲ್‍ನಿಂದ 19 ಕಿ.ಮೀ. ಮೈಲೇಜ್ ಸಿಗಲಿದೆ. ಇಂಧನ ಬಳಕೆಯಲ್ಲೂ ಎಆರ್‍ಎಐನಿಂದ ಮಾನ್ಯಗೊಂಡಿದೆ.

ಉಳಿದಂತೆ ಹವಾನಿಯಂತ್ರಿತ ವ್ಯವಸ್ಥೆ, ಸ್ಮಾರ್ಟ್ ಬಟನ್ ಸ್ಟಾರ್ಟ್, ಸೆನ್ಸರ್ ಹೊಂದಿದ ಪಾರ್ಕಿಂಗ್ ಕ್ಯಾಮರಾ, 15 ಇಂಚ್‍ನ ಡೈಮಂಡ್ ಕಟ್ ಮಿಶ್ರ
ಲೋಹದಿಂದ ತಯಾರಾದ ವೀಲ್ಹ್ ಗಳನ್ನು ಹೊಂದಿದ್ದು, ಇನ್ನಿತರೆ ಸೌಲಭ್ಯಗಳನ್ನೂ ಒಳಗೊಂಡಿದೆ. 4.66 ಲಕ್ಷ ರೂ.ನಿಂದ 7.50 ಲಕ್ಷ ರೂ.ಗೆ ವಿಭಿನ್ನ ದರ್ಜೆಯಲ್ಲಿ ಈ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಎಕ್ಸೆಂಟ್ ಒಟ್ಟು 12 ಪ್ರಕಾರದಲ್ಲಿ ಲಭ್ಯವಿದ್ದು, ಬೆಲೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಪವರ್ ಸ್ಟೇರಿಂಗ್ ವ್ಯವಸ್ಥೆಯ ಹ್ಯುಂಡೈ ಎಕ್ಸೆಂಟ್ ಸದ್ಯಕ್ಕೆ ಒಟ್ಟು ಆರು ಬಣ್ಣಗಳಲ್ಲಿ ಲಭ್ಯ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited