Untitled Document
Sign Up | Login    
Cars & Bikes

ಎಟಿಯೋಸ್ ಕ್ರಾಸ್ ಸ್ಟೈಲಿಶ್ ಕಾರು !

Prev

ಎಟಿಯೋಸ್ ಕ್ರಾಸ್

Next

ಟೊಯೋಟ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಸಂಸ್ಥೆ "ಎಟಿಯೋಸ್ ಕ್ರಾಸ್'' ಎಂಬ ಹೊಸ ಮಾದರಿಯ ಸ್ಟೈಲಿಶ್ ಕಾರನ್ನು ಗ್ರಾಹಕರಿಗೆ ಪರಿಚಯಿಸಿದೆ. ಮೊದಲ ನೋಟಕ್ಕೆ ಗಮನ ಸೆಳೆವ ಈ ಕಾರು, 1.5 L, 1.2 L ಪೆಟ್ರೋಲ್ ಹಾಗೂ 1.4L D-4D ಡೀಸೆಲ್ ಎಂಜಿನ್ ಗಳ ಮಾದರಿಯಲ್ಲಿ ಲಭ್ಯವಿದೆ.

ಅತ್ಯುತ್ತಮ ಹೊರ ವಿನ್ಯಾಸ, ಸ್ಟೈಲಿಶ್ ಡೈಮಂಡ್ ಕಟ್ ಅಲ್ಲೋಯ್ ಗಳು ಜತೆಗೆ ಫಾಗ್ ಲ್ಯಾಂಪ್ ಮತ್ತು ಎಡ-ಬಲ ತಿರುಗುವ ಸಂಕೇತ ನೀಡುವ ಇಂಡಿಕೇಟರ್ ಗಳಿವೆ. ಒಆರ್ವಿಎಂ, ಹಿಂಭಾಗದಲ್ಲೂ ವೈಪರ್ ಇರುವುದು ಈ ವಾಹನದ ವಿಶೇಷತೆ.

ಒಳಾಂಗಣ ವಿನ್ಯಾಸವೂ ಅತ್ಯುತ್ತಮವಾಗಿದ್ದು, ಪಿಯಾನೋ ಬ್ಲ್ಯಾಕ್ ಇಂಟೀರಿಯರ್ಸ್, ಸ್ಪೋರ್ಟಿ ಸೀಟ್ ಫ್ಯಾಬ್ರಿಕ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿದ ಡಿಐಎನ್ ಅಡಿಯೋ ಸಿಸ್ಟಂ, ಯುಎಸ್ ಬಿ, ಎಯುಎಕ್ಸ್- ಇನ್ ಮತ್ತು ರಿಮೋಟ್ ವ್ಯವಸ್ಥೆ ಇದೆ. ಸ್ಟೀಯರಿಂಗ್ ವೀಲ್ಹ್ ನಲ್ಲೇ ಅಡಿಯೋ ಕಂಟ್ರೋಲ್ ವ್ಯವಸ್ಥೆ ಹೊಂದಿರುವುದು ವಿಶೇಷ. ಅಕಸ್ಮಾತ್ ಅಪಘಾತ ಸಂಭವಿಸಿದರೆ ತುರ್ತಾಗಿ ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿ ಪಡಿಸುವ ಏರ್ ಬ್ಯಾಗ್ ಗಳು ತೆರೆದುಕೊಳ್ಳುತ್ತವೆ.

ಅಂದ ಹಾಗೆ ಈ ಕಾರು ಆರೆಂಜ್ ಮತ್ತು ಅಲ್ಟ್ರಾ ಮರೈನ್ ಬ್ಲೂ, ಕ್ಲಾಸಿಕ್ ಗ್ರೇ, ಸಿಂಫನಿ ಸಿಲ್ವರ್ ಸೇರಿದಂತೆ ಏಳು ಬಣ್ಣಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಕಾರಿನ ಎಕ್ಸ್ ಷೋರೂಂ ಬೆಲೆ ದೆಹಲಿಯಲ್ಲಿ 5.76 ಲಕ್ಷ ರೂ.-7.35 ಲಕ್ಷ ರೂ. ಡೀಸೆಲ್ ಎಂಜಿನ್ ಕಾರಿನ ಬೆಲೆ 6.90 ಲಕ್ಷ ರೂ.-7.40 ಲಕ್ಷ ರೂ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited