Untitled Document
Sign Up | Login    
Cars & Bikes

ನಿಸ್ಸಾನ್‌ ‘ಡಾಟ್ಸನ್ ಗೋ’ ರೋಡ್‌ ಶೋ

Prev

ನಿಸ್ಸಾನ್ ಡಾಟ್ಸನ್ ಗೊ

Next

ಪ್ರಮುಖ ಕಾರು ಉತ್ಪಾದನಾ ಕಂಪನಿ ಜಪಾನಿನ ನಿಸ್ಸಾನ್ ತನ್ನ ಹೊಸ ಶ್ರೇಣಿಯ ‘ಡಾಟ್ಸನ್‌ ಗೋ’ ಮಾದರಿ ಕಾರನ್ನು ಮಾರುಕಟ್ಟೆಗೆ ಬಿಡುವ ಮೊದಲು ಭಾರತದ 90 ಪ್ರಮುಖ ನಗರಗಳಲ್ಲಿ ಅದರ ರೋಡ್‌ ಶೋ ನಡೆಸಲು ತೀರ್ಮಾನಿಸಿದೆ.
ಇದರಂತೆ ಈಗಾಗಲೇ ನವದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಡಾಟ್ಸನ್‌ ಗೋ ರೋಡ್‌ ಶೋ ನಡೆದಿದ್ದು, ಬೆಂಗಳೂರು ಸೇರಿದಂತೆ ಉಳಿದ ನಗರಗಳಲ್ಲೂ ರೋಡ್‌ ಶೋ ಜತೆ ಜತೆಗೇ ನಡೆಯಲಿವೆ. ಕಂಪನಿ ಯಾವುದೇ ಶ್ರೇಣಿಯ ಅಥವಾ ಮಾದರಿಯ ಕಾರನ್ನು ಈ ರೀತಿ ರೋಡ್‌ ಶೋ ಮೂಲಕ ಜನರ ಬಳಿಗೆ ಕೊಂಡೊಯ್ದಿಲ್ಲ. ಇದೇ ಪ್ರಥಮ ಬಾರಿ ಇಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಡಾಟ್ಸನ್‌ ಗೋ ಭಾರತದ ಕಾರು ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಇದೆ. ದರವೂ 4 ಲಕ್ಷ ರೂಪಾಯಿ ಒಳಗೇ ಇದ್ದು, 1.2 ಲೀಟರ್‌ ಸಾಮರ್ಥ್ಯದ ಎಂಜಿನ್‌ ಹೊಂದಿದೆ. ಕಾರಿನ ಆಂತರಿಕ ಮತ್ತು ಬಾಹ್ಯ ವಿನ್ಯಾಸಗಳೆರಡೂ ಕೂಡ ಅತ್ಯಾಕರ್ಷಕವಾಗಿದ್ದು, ಪ್ರಯಾಣಿಕ ಸ್ನೇಹಿ ಫೀಚರ್‌ಗಳನ್ನು ಒಳಗೊಂಡಿದೆ ಎಂದು ನಿಸ್ಸಾನ್‌ ಕಂಪನಿ ಭಾರತೀಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆಂಚಿರೊ ಯೊಮುರೊ ತಿಳಿಸಿದ್ದಾರೆ.
ನಿಸ್ಸಾನ್ ಮೋಟಾರ್ಸ್ 2012ರ ಮಾರ್ಚ್‌ ತಿಂಗಳಲ್ಲಿ ಡಾಟ್ಸನ್‌ ಮಾದರಿ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಈಗ "ಗೋ" ಶ್ರೇಣಿಯ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited