Untitled Document
Sign Up | Login    
Cars & Bikes

ಹೊಂಡಾ ‘ಮೊಬಿಲೋ’ ಜುಲೈನಲ್ಲಿ ರಸ್ತೆಗೆ

Prev

ಹೊಂಡಾ ‘ಮೊಬಿಲೋ’

Next

ಭಾರತೀಯ ಅಟೊಮೊಬೈಲ್ ಮಾರುಕಟ್ಟೆಗೆ ಹೊಂಡಾ ಕಂಪನಿ ಇದೇ ಮೊದಲ ಬಾರಿಗೆ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಒಂದನ್ನು ಪರಿಚಯಿಸುತ್ತಿದೆ. ಕಳೆದ ವರ್ಷವೇ ಇದರ ಮುನ್ಸೂಚನೆ ನೀಡಿದ್ದ ಕಂಪನಿ “ಮೊಬಿಲೋ’’ ಮಾದರಿಯನ್ನು ಪರಿಚಯಿಸಿತ್ತು. ಈ ಮೊಬಿಲೋ ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ಭಾರತದ ರಸ್ತೆಗೆ ಇಳಿಯಲಿದೆ.

ಈ ಎಂಪಿವಿ ಮಾರುತಿ ಕಂಪನಿಯ ಎರ್ಟಿಗೋ, ಟೊಯೋಟ ಕಂಪನಿಯ ಇನ್ನೋವಾ, ಚೆವರ್ಲೆ ಕಂಪನಿಯ ಎಂಜಾಯ್ ಗೆ ಪ್ರತಿಸ್ಪರ್ಧಿಯಾಗುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಹೊಂಡಾ ಹೇಳಿಕೊಂಡಂತೆ ಈ ವಾಹನದ ವಿಶೇಷತೆಗಳತ್ತ ಗಮನ ಹರಿಸೋಣ.

ಮೊದಲನೆಯದಾಗಿ ಮೈಲೇಜ್. ಮೊಬಿಲೋದಲ್ಲಿ 1.5 ಲೀ- i-DTEC ಎಂಬ ಎಂಜಿನ್ ಅಳವಡಿಸಿದ್ದು, ಇದು 26 ಕಿ.ಮೀ/ಲೀ. ಮೈಲೇಜ್ ಕೊಡಲಿದೆ.

ಕಾರ್ಯಕ್ಷಮತೆ ಬಗ್ಗೆ ಗಮನಿಸಿದರೆ, ಮೊಬಿಲೋದಲ್ಲಿ ಅಳವಡಿಸಿರುವ ಎಂಜಿನ್ 99ಬಿಎಚ್ಪಿ ಮತ್ತು 200 ಎನ್ಎಂ ಶಕ್ತಿ ಹೊಂದಿದೆ.

ಮೊಬಿಲೋ 4386 ಎಂಎಂ ಉದ್ದ ಹೊಂದಿದ್ದು ಪ್ರತಿಸ್ಪರ್ಧಿ ವಾಹನಗಳಿಗಿಂತ ಸಹಜವಾಗಿಯೇ ಗಾತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದೆ. ಒಟ್ಟಿನಲ್ಲಿ ಹೋಂಡಾ ಕಂಪನಿ "Man maximum, machine minimum" ಫಿಲಾಸಫಿ ಅಡಿ ಕೆಲಸ ಮಾಡುತ್ತದೆ.

ಇನ್ನು ಗ್ರೌಂಡ್ ಕ್ಲಿಯರೆನ್ಸ್ ವಿಚಾರಕ್ಕೆ ಬಂದರೆ, ಮೊಬಿಲೋದ ಗ್ರೌಂಡ್ ಕ್ಲಿಯರೆನ್ಸ್ 185 ಎಂಎಂ ಆಗಿದ್ದು, ಇದು ಉಳಿದ ಎದುರಾಳಿ ವಾಹನಗಳಿಗಿಂತ ಹೆಚ್ಚೇ ಇದೆ. ವಾಹನದ ಒಳಭಾಗದ ವಿಚಾರ ಗಮನಿಸಿದರೆ, ಆಸನಗಳು, ಆಂತರಿಕ ವಿನ್ಯಾಸಕ್ಕೆ ಉಪಯೋಗಿಸಿರುವ ವಸ್ತುಗಳು ಕೂಡಾ ಅತ್ಯುತ್ತಮ ಗುಣಮಟ್ಟದವು.

ಈ ಎಂಪಿವಿ ಮಾರುತಿ ಕಂಪನಿಯ ಎರ್ಟಿಗೋ, ಟೊಯೋಟ ಕಂಪನಿಯ ಇನ್ನೋವಾ, ಚೆವರ್ಲೆ ಕಂಪನಿಯ ಎಂಜಾಯ್ ಗೆ ಹೋಲಿಸಿದರೆ ಉತ್ತಮ ಫೀಚರ್ ಗಳನ್ನು ಹೊಂದಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಬಹಳ ನಿರೀಕ್ಷೆ ಮೂಡಿಸಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited