Untitled Document
Sign Up | Login    
Cars & Bikes

ಮಾರುಕಟ್ಟೆಗೆ ಹೊಸ ಫೋರ್ಡ್ ಫೀಸ್ಟಾ

Prev

ಹೊಸ ಫೋರ್ಡ್ ಫೀಸ್ಟಾ

Next

ಪ್ರಮುಖ ವಾಹನ ತಯಾರಿಕಾ ಕಂಪನಿ ಫೋರ್ಡ್ ಈ ವರ್ಷ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಇಂಡಿಯನ್ ಆಟೋ ಎಕ್ಸ್ ಪೋ 2014ರಲ್ಲಿ ಹೊಸ ಫೋರ್ಡ್ ಫೀಸ್ಟಾವನ್ನು ಪ್ರದರ್ಶಿಸಿತ್ತು. ಇದು ಫೇಸ್ ಲಿಫ್ಟ್ ಮಾಡಿದ ಕಾರಾಗಿದ್ದು, ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದೇ ಮಾದರಿಯ ಪೆಟ್ರೋಲ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿರುವ ಕಂಪನಿ, ಡೀಸೆಲ್ ಎಂಜಿನ್ ನ ಅಬಿಂಟೆ, ಟ್ರೆಂಡ್್ ಹಾಗೂ ಟೈಟಾನಿಯಂ ಮಾದರಿಯ ಫೀಸ್ಟಾ ಕಾರನ್ನು ಬಿಡುಗಡೆಗೊಳಿಸಿದೆ. ದೆಹಲಿಯಲ್ಲಿ ಇವುಗಳ ಎಕ್ಸ್ ಶೋರೂಂ ದರ ಕ್ರಮವಾಗಿ 7.69 ಲಕ್ಷ ರೂ., 8.55 ಲಕ್ಷ ರೂ., 9.29 ಲಕ್ಷ ರೂ.

ಫೇಸ್ ಲಿಫ್ಟ್ ಮಾತ್ರವಲ್ಲ ಅದಕ್ಕೆ ತಕ್ಕಂತೆ ಸುಧಾರಿತ ಮಾದರಿಯನ್ನೇ ಕಂಪನಿ ಈಗ ಸಿದ್ದಗೊಳಿಸಿದೆ. ದರವನ್ನೂ ಕಡಿತಗೊಳಿಸಿದೆ. ಹಳೇ ಮಾದರಿಯ ಫೀಸ್ಟಾಕ್ಕೂ ಹೊಸದಕ್ಕೂ ಪ್ರಮುಖವಾಗಿ ಗುರುತಿಸಬಹುದಾದ ಬದಲಾವಣೆ ಫೇಸ್ ಲಿಫ್ಟ್ ಆದರೂ, ಅದರ ಬಂಪರ್, ಹೊಸ ಜಾಗದಲ್ಲಿ ಅಳವಡಿಸಿರುವ ಫಾಗ್ ಲ್ಯಾಂಪ್ ಗಳೂ ಗಮನಸೆಳೆಯುತ್ತವೆ. ಸೈಡ್ ಲುಕ್ ಹಾಗೆಯೇ ಉಳಿದಕೊಂಡಿದೆ. 1.5 ಲೀ. ಡೀಸೆಲ್ ಎಂಜಿನ್ ಗರಿಷ್ಠ 90ಬಿಎಚ್ಪಿ ಶಕ್ತಿ ಸಾಮರ್ಥ್ಯ ಹೊಂದಿದ್ದು, ಉತ್ತಮ ಮೈಲೇಜ್ ಅಂದರೆ, ಹಳೇ ಮಾದರಿ ಕಾರು 23.5 ಕಿ.ಮೀ/ಲೀ. ಮೈಲೇಜ್ ಕೊಡುತ್ತಿದ್ದರೆ, ಹೊಸ ಮಾದರಿ 25.1 ಕಿ.ಮೀ/ಲೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇದಲ್ಲದೆ, ಫೋರ್ಡ್ ಎಸ್ ವೈ ಎನ್ ಸಿ (ಹ್ಯಾಂಡ್ಸ್ - ಫ್ರೀ ಮ್ಯೂಸಿಕ್ ಹಾಗೂ ಫೋನ್ ಕಾಲ್ ಅಟೆಂಡ್ ಮಾಡುವ ವ್ಯವಸ್ಥೆ), ಕೀಲೆಸ್ ಎಂಟ್ರಿ, ಪುಷ್ ಬಟನ್ ಸ್ಟಾರ್ಟ್, ಮಳೆ ಬಂದ ಕೂಡಲೇ ಅರಿತು ಕೆಲಸ ಮಾಡುವ ರೈನ್ ಸೆನ್ಸಿಂಗ್ ವೈಪರ್ಸ್, ಅಪಘಾತವಾದಾಗ ಚಾಲಕ ಹಾಗೂ ಪ್ರಯಾಣಿಕರನ್ನು ಕಾಪಾಡುವ ಏರ್ ಬ್ಯಾಗ್ ಗಳು ಇದರ ಇನ್ನಿತರ ವಿಶೇಷತೆಗಳು.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited