Untitled Document
Sign Up | Login    
Cars & Bikes

TATA ZEST N BOLT

Prev

BOLT

Next

ಟಾಟಾ ಮೋಟಾರ್ಸ್ ಸೋಮವಾರ ಎರಡು ಹೊಚ್ಚ ಹೊಸ ಮಾದರಿ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಝೆಸ್ಟ್ ಮತ್ತು ಬೋಲ್ಟ್ ಎಂಬ ಮಾದರಿಯ ಕಾರುಗಳಿವು. ಇವುಗಳಲ್ಲಿ ಝೆಸ್ಟ್ ಸೀಡಾನ್ ಕಾರಿನ ಸುಧಾರಿತ ಮಾದರಿ. ಪೆಟ್ರೋಲ್ ಎಂಜಿನ್ ಹೊಂದಿರುವ ಇವುಗಳು ಕಂಪನಿಯ ಹೊಸ ರೆವೊಟ್ರೊನ್ ಸರಣಿಯ ಕಾರುಗಳು. ಭಾರತದ ಪುಣೆ, ಇಂಗ್ಲೆಂಡಿನ ಕೊವೆಂಟ್ರಿ, ಇಟಲಿಯ ಟುರಿನ್ ಸ್ಟುಡಿಯೋಗಳಲ್ಲಿ ಈ ಕಾರುಗಳ ವಿನ್ಯಾಸ ಅಂತಿಮಗೊಳಿಸಲಾಗಿದ್ದು, ಎರಡರಲ್ಲೂ ಇಲೆಕ್ಟ್ರಾನಿಕ್ ಪವರ್ ಅಸಿಸ್ಟೆಡ್ ಸಿಸ್ಟಂ ಅಳವಡಿಸಲಾಗಿದೆ.

ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನ ಅಭಿವೃದ್ಧಿಗಾಗಿ ಹೆಚ್ಚಿನ ಗಮನಹರಿಸುತ್ತಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಅದರ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 7500 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ಮುಂದಾಗಿದೆ. ಈ ಅವಧಿಯಲ್ಲಿ 15- 20 ಹೊಸ ಮಾದರಿ ಕಾರುಗಳನ್ನು ಗ್ರಾಹಕರು ಟಾಟಾ ಮೋಟಾರ್ಸ್ ನಿಂದ ನಿರೀಕ್ಷಿಸಬಹುದು ಎಂದು ಕಂಪನಿ ಮೂಲಗಳು ತಿಳಿಸಿವೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited