Untitled Document
Sign Up | Login    
Cars & Bikes

ಮಾರುತಿ ಎ-ಸ್ಟಾರ್‍ಗೆ ಪ್ರತಿಸ್ಪರ್ಧಿ ಸುಝುಕಿ ಎ-ವಿಂಡ್‌?

Prev

ಸುಝುಕಿ ಎ-ವಿಂಡ್‌

Next

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಎ-ಸ್ಟಾರ್‌ಗೆ ಪರ್ಯಾಯವಾಗಿ ಜಪಾನಿನ ಸುಝುಕಿ ಮೋಟರ್‌ ಕಾರ್ಪೊರೇಷನ್ ಎ-ವಿಂಡ್‌ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಥಾಯ್ಲೆಂಡ್‌ನಲ್ಲಿ ನಡೆದ 30ನೇ ಥಾಯ್ಲೆಂಡ್‌ ಇಂಟರ್‍ನ್ಯಾಷನಲ್‌ ಮೋಟರ್‌ ಎಕ್ಸ್‌ಪೊದಲ್ಲಿ ಈ ಕಾರನ್ನು ಅನಾವರಣಗೊಳಿಸಿದೆ.
ಎ-ವಿಂಡ್ ಕಾರು ಯುವ ಜನರನ್ನು ಆಕರ್ಷಿಸುವಂತಹ ಬಾಹ್ಯ ಮತ್ತು ಆಂತರಿಕ ವಿನ್ಯಾಸವನ್ನು ಹೊಂದಿದೆ. ಪ್ರತಿಯೊಂದರಲ್ಲೂ ಕಲರ್‌ ಮ್ಯಾಚಿಂಗ್‌ ಬಗ್ಗೆ ಗಮನಹರಿಸಲಾಗಿದೆ. ಎನರ್ಜಿ ಯೆಲ್ಲೋ ಮತ್ತು ಪನೋರಮಿಕ್‌ ಬ್ಲೂ ಕಲರ್‌ಗಳಲ್ಲಿ ಕಾರು ಲಭ್ಯವಿದೆ.
ಎಂಜಿನ್‌ನ ಸಾಮರ್ಥ್ಯವನ್ನು ಗಮನಿಸಿದರೆ, ಎ ವಿಂಡ್ 996CC 3-ಸಿಲಿಂಡರ್‍ ಪೆಟ್ರೋಲ್ ಎಂಜಿನ್ ಹೊಂದಿದೆ. 16 ಇಂಚಿನ ಅಲ್ಲೋಯ್‌ ವೀಲ್ಹ್‌ಗಳನ್ನುಹೊಂದಿದ್ದು, 185/55 R16 ಗಾತ್ರದ ಟಯರ್‍ಗಳನ್ನು ಜೋಡಿಸಲಾಗಿದೆ. ಫ್ರಂಟ್‌ ವೀಲ್ಹ್‌ ಡ್ರೈವ್‌ಗೆ ಸಿವಿಟಿ ಅಳವಡಿಸಲಾಗಿದ್ದು, ಉತ್ತಮ ಗ್ರಿಪ್‌ ಹೊಂದಿದೆ.
ಮಾಧ್ಯಮ ವರದಿಗಳ ಪ್ರಕಾರ 2014 ರಲ್ಲಿ ಭಾರತದಲ್ಲಿ ನಡೆಯಲಿರುವ ಇಂಡಿಯ ಅಟೊ ಎಕ್ಸ್‌ಪೊನಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಗೆ ಕಂಪನಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಮಾರುತಿಯ ಎ-ಸ್ಟಾರ್‌ ಮಾದರಿ ಕಾರುಗಳು ಆಲ್ಟೋ ಮಾದರಿ ಕಾರಿನಂತೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಮಾರುತಿ ಸುಝುಕಿಯ ಎ-ಸ್ಟಾರ್‌ ಬದಲಾಗಿ ಎ-ವಿಂಡ್‌ ಭಾರತೀಯ ಮಾರುಕಟ್ಟೆಗೆ ಬಿಟ್ಟರೆ ಯಶಸ್ವಿಯಾದೀತು ಎಂಬ ವಿಶ್ವಾಸ ಸುಝುಕಿಗಿದೆ ಎನ್ನಲಾಗಿದೆ.


     Next

ಮಾರುತಿ ಎ-ಸ್ಟಾರ್‍ಗೆ ಪ್ರತಿಸ್ಪರ್ಧಿ ಸುಝುಕಿ ಎ-ವಿಂಡ್‌?

Prev

ಎ-ವಿಂಡ್‌ ಬಾಹ್ಯ ವಿನ್ಯಾಸ

Next

ಬಾಹ್ಯ ವಿನ್ಯಾಸ
ಡೈನಾಮಿಕ್‌ ಬಾಡಿ, ವಿಶಾಲವಾದ ಒಳಾಂಗಣ ವಿನ್ಯಾಸ ಮತ್ತು ಉತ್ತಮ ಗುಣಮಟ್ಟ ಎಂಬ ಮೂರು ಕಾನ್ಸೆಪ್ಟ್‌ಗಳನ್ನು ಆಧರಿಸಿ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಎನರ್ಜಟಿಕ್‌ ಸ್ಟೈಲ್‌, ವಿಶಾಲ ಒಳಾಂಗಣ ಸ್ಥಳಾವಕಾಶ, ಅತ್ಯುತ್ತಮ ಗುಣಮಟ್ಟದ ಒಳಾಂಗಣ ವಿನ್ಯಾಸ ಮತ್ತು ಬಾಹ್ಯ ವಿನ್ಯಾಸ ಸಹಜವಾಗಿಯೇ ಎಲ್ಲರ ಗಮನಸೆಳೆಯುವಂತಿದೆ. ಫ್ರಂಟ್ ಗ್ರಿಲ್‌ ಜತೆಗೆ ಇರುವ ಹೆಡ್‌ಲೈಟ್‌ಗಳು, ಬೇಸಿಕ್ ಮಾಡೆಲ್‌ಗೆ ಹೋಲಿಸಿದರೆ ಇದು ಅತ್ಯಂತ ಸುಧಾರಿತ ಮಾದರಿಯಾಗಿದೆ.


     Next

ಮಾರುತಿ ಎ-ಸ್ಟಾರ್‍ಗೆ ಪ್ರತಿಸ್ಪರ್ಧಿ ಸುಝುಕಿ ಎ-ವಿಂಡ್‌?

Prev

ಎ -ವಿಂಡ್‌ ಒಳಾಂಗಣ ವಿನ್ಯಾಸ

Next

ಒಳಾಂಗಣ ವಿನ್ಯಾಸ
ಬಾಹ್ಯ ವಿನ್ಯಾಸಕ್ಕೆ ಅನುಗುಣವಾದ ಒಳಾಂಗಣ ವಿನ್ಯಾಸವನ್ನು ಇಲ್ಲಿ ಕಾಣಬಹುದು. ಕಂಫೋರ್ಟೆಬಲ್‌ ಆಗಿರುವ ಕ್ಯಾಬನ್‌, ಮುಂಭಾಗದ ಸೀಟ್‌ಗಳು ಮತ್ತು ಹಿಂಬದಿ ಸೀಟ್‌ಗಳ ನಡುವೆ ಉತ್ತಮ ಸ್ಥಳಾವಕಾಶ, ಪೂರ್ಣ ಪ್ರಮಾಣದಲ್ಲಿ ತೆರೆಯಲ್ಪಡುವ ಬಾಗಿಲು, ಒಳಗೆ ಕೂರುವುದಕ್ಕೆ ಮತ್ತು ಹೊರಗೆ ಇಳಿಯುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಲಗೇಜ್ ಸ್ಪೇಸ್‌ ಕೂಡಾ ಸಾಕಷ್ಟಿದೆ.


     Next

ಮಾರುತಿ ಎ-ಸ್ಟಾರ್‍ಗೆ ಪ್ರತಿಸ್ಪರ್ಧಿ ಸುಝುಕಿ ಎ-ವಿಂಡ್‌?

Prev

ಎ -ವಿಂಡ್‌

Next

Dimensions
Overall length: 3,600mm
Overall width : 1,600mm
Overall height: 1,540mm
Wheelbase : 2,425mm
Engine : 996cm3 petrol engine
Type of drive : Front-wheel drive with CVT
Tyre size : 185/55 R16


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited