Untitled Document
Sign Up | Login    
Cars & Bikes

ವೆರಿಟೊ ವೈಬ್ ಮಾರುಕಟ್ಟೆಗೆ

Prev

ಮಹೀಂದ್ರಾ ವೆರಿಟೊ ವೈಬ್

Next

ಮಹೀಂದ್ರಾ ಅಂಡ್ ಮಹೀಂದ್ರಾ ಲಿ. ಕಾಂಪ್ಯಾಕ್ಟ್ ಕಾರು ’ವೆರಿಟೊ ವೈಬ್’ ನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.

ಮಹೀಂದ್ರಾ ಘಟಕದಲ್ಲಿಯೇ ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿರುವ ಈ ವಾಹನ 1.5ಲೀ ಡಿಸಿಐ ಡೀಸೆಲ್ ಎಂಜೀನ್ ಹೊಂದಿದ್ದು, 20.8 ಕಿ.ಮೀ ಮೈಲೇಜ್ ನೀಡಬಲ್ಲದು. ಡಿ2, ಡಿ4 ಮತ್ತು ಡಿ6 ಶ್ರೇಣಿ ಮತ್ತು 7 ಬಣ್ಣಗಳ ಆಯ್ಕೆಯಲ್ಲಿದ್ದು, ಬೆಲೆ 5.68ಲಕ್ಷದಿಂದ 6.54 ಲಕ್ಷದ ವರೆಗೂ ಲಭ್ಯವಿದೆ.

ವೆರಿಟೊದಲ್ಲಿ ಅತ್ಯಾಧುನಿಕ ಚಾಲನಾ ಮಾಹಿತಿ ವ್ಯವಸ್ಥೆ, ಉತ್ತಮ ಎಲ್ ಇ ಡಿ ಲೈಟ್ ಸ್ಟ್ರೀಮಿಂಗ್ ಹಿಂಬದಿ ದೀಪ, ಫಾಗ್ ಲ್ಯಾಂಪ್ ಅಳವಡಿಸಲಾಗಿದೆ. 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ಇದೆ.

ವೆರಿಟೊ ವೈಬ್ ಪ್ರವೇಶದಿಂದ ದೇಶದ ವಾಹನ ಮಾರುಕಟ್ಟೆಯಲ್ಲಿ ಕಂಪನಿಗೆ ಸ್ಪೋರ್ಟಿ ಸೆಡಾನ್ ವರ್ಗದಲ್ಲಿ ಹೊಸ ಅವಕಾಶಗಳು ಸೃಷ್ಠಿಯಾಗಲಿದೆ ಎಂದು ಎಂಎಂಎಲ್ ನ ಮಾರಾಟ ವಿಭಾಗದ ಉಪಾಧ್ಯಕ್ಷ ವಿಜಯ್ ನಕ್ರಾ ತಿಳಿಸಿದ್ದಾರೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited