Untitled Document
Sign Up | Login    
Cars & Bikes

ಆಡಿ ಕ್ಯೂ3 ಎಸ್ ಮಾದರಿ ಕಾರು ಅಫೋರ್ಡಬಲ್ !

Prev

ಕ್ಯೂ ೩ ಎಸ್ ಮಾದರಿ ಆಡಿ ಕಾರು

Next

ಆಡಿ ಇಂಡಿಯಾ ಇತ್ತೀಚೆಗೆ ಕ್ಯೂ3 ಎಸ್ ಮಾದರಿ ಕಾರನ್ನು ಮಾರುಕಟ್ಟೆಗೆ ಮತ್ತೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 24.37 ಲಕ್ಷ ರೂ. ಕಳೆದ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿಗೆ ಈ ಮಾದರಿ ಕಾರು ಬಿಡುಗಡೆ ಮಾಡಿದಾಗ 24.99 ಲಕ್ಷ ರೂ. ದರ ನಿಗದಿ ಮಾಡಿತ್ತು. ಈ ಹೊಸ ಮಾದರಿ ಕಾರಿನ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೇಶಾದ್ಯಂತ ಕಾರು ಬಳಕೆದಾರರು ಇದರತ್ತ ಗಮನಹರಿಸಿದ್ದಾರೆ.

ಈ ಆಡಿ ಕಾರಿನ ದರ ಬಹುತೇಕ ಟೊಯೊಟಾ ಫೋರ್ಚೂನರ್ ಮತ್ತು ಇದೇ ರೀತಿ ಇತರೆ ಕಂಪನಿಗಳ ಕೆಲವು ಮಾದರಿ ಕಾರುಗಳ ಬೆಲೆಗೆ ಸ್ಪರ್ಧೆ ನೀಡುವಂತಿದೆ. ಕಾರು ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಆಡಿ ಕಂಪನಿ ಗ್ರಾಹಕರಿಗೆ "ಶೂನ್ಯ ಡೌನ್ ಪೇಮೆಂಟ್'' ಮತ್ತು ಮಾಸಿಕ 27,700 ರೂ.ಗಳ ಇಎಂಐ ಸ್ಕೀಂ ಪರಿಚಯಿಸಿದೆ. ಕಡಿಮೆ ಬಜೆಟ್ ನ ಎಸ್ ಯುವಿಗಳತ್ತ ಗಮನಹರಿಸಿದರೆ ಕ್ಯೂ3 ಎಸ್ ನಲ್ಲಿ ಕ್ವಾಟ್ರೋ ಫೋರ್ ವ್ಹೀಲ್ ಡ್ರೈವ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸೇರಿದಂತೆ ಕೆಲವು ಫೀಚರ್ ಗಳು ಇಲ್ಲ. ಇದರ ಬದಲು ಇದರಲ್ಲಿ ಫ್ರಂಟ್ ವ್ಹೀಲ್ ಡ್ರೈವ್ ಮತ್ತು ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸೌಲಭ್ಯ ಅಳವಡಿಸಲಾಗಿದೆ.

ಇನ್ನು ಎಂಜಿನ್ ವಿಚಾರಕ್ಕೆ ಬಂದರೆ 2.0 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದ್ದು, ಉತ್ತಮ ಇಂಧನ ಕ್ಷಮತೆ ಹೊಂದಿದೆ. ಎಂಜಿನ್ ಶಕ್ತಿ ಸಾಮಾನ್ಯ ಕ್ಯೂ3ನಲ್ಲಿ 174.3ಬಿಎಚ್ ಇದ್ದರೆ ಇದರಲ್ಲಿ ಅದು 140 ಬಿಎಚ್ ಪಿಗೆ ಇಳಿದಿದ್ದು, ಸಾಮಾನ್ಯ ಕ್ಯೂ3 ನಲ್ಲಿ 15.73 ಕೆಎಂಪಿಎಲ್ ಇದ್ದರೆ, ಇದರಲ್ಲಿ 17.71 ಕೆಎಂಪಿಎಲ್ ಇರುವುದು ವಿಶೇಷ. ಇದಲ್ಲದೆ, ರೇರ್ ಪಾರ್ಕಿಂಗ್ ಸೆನ್ಸರ್, ಕ್ರೂಯಿಸ್ ಕಂಟ್ರೋಲ್, ಚಾಲಕನಿಗೆ ಮಾಹಿತಿ ನೀಡುವ ವ್ಯವಸ್ಥೆ, ಸುರಕ್ಷತಾ ಕ್ರಮವಾಗಿ ಆರು ಏರ್ ಬ್ಯಾಗ್ ಗಳು ಮತ್ತು ಇತರೆ ವಿಶೇಷ ಸವಲತ್ತುಗಳನ್ನು ಒಳಗೊಂಡಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited