Untitled Document
Sign Up | Login    
Cars & Bikes

ಶೀಘ್ರವೇ ಬರಲಿದೆ ನಿಸಾನ್ ‘e-NV200’

Prev

ನಿಸಾನ್  ‘e-NV200’

Next

ವಿದ್ಯುತ್ ಚಾಲಿತ ಕಾರು ಉತ್ಪಾದನೆ ಕಡೆಗೆ ಗಮನಹರಿಸಿರುವ ನಿಸಾನ್ ಕಂಪನಿ, ಶೀಘ್ರವೇ ಎರಡನೇ ಮಾದರಿಯ ಇ - ಕಾರು "e-NV200" ಅನ್ನು ಶೀಘ್ರವೇ ಅನಾವರಣಗೊಳಿಸಲಿದೆ. ನಿಸಾನ್ ಕಂಪನಿಯ ಬಾರ್ಸಿಲೋನದಲ್ಲಿರುವ ಉತ್ಪಾದನಾ ಘಟಕದಲ್ಲಿ ಈ ಕಾರು ಸಿದ್ಧವಾಗುತ್ತಿದೆ.
ಬಾರ್ಸಿಲೋನಾದ ಈ ಘಟಕವೇ ಜಾಗತಿಕ ಬೇಡಿಕೆಯನ್ನು ಪೂರೈಸುವ ನಿರೀಕ್ಷೆಯಿದೆ. ಪ್ರಸ್ತುತ ನಿಸಾನ್ "e-NV200" ಕಾರು ವಾಣಿಜ್ಯ ಬಳಕೆಗೆ ಲಭ್ಯವಿದೆ. ಇ-ಟ್ಯಾಕ್ಸಿಯಾಗಿಯೂ ಇದು ಬಳಕೆಯಾಗಲಿದೆ. ಮುಂದಿನ ತಿಂಗಳು ಮೊದಲ ಕಾರು ರಫ್ತು ಮಾಡಲು ಸಂಸ್ಥೆ ತೀರ್ಮಾನಿಸಿದೆ. ಅಧಿಕೃತ ಅಂತರ್ಜಾಲ ತಾಣದ ಪ್ರಕಾರ, ಜಪಾನ್ ಸೇರಿದಂತೆ ಜಗತ್ತಿನ 20 ದೇಶಗಳಿಗೆ ಇ- ಕಾರು ರಫ್ತು ಮಾಡಲಿದೆ. ಭಾರತೀಯ ಮಾರುಕಟ್ಟೆಗೂ ಶೀಘ್ರವೇ ನಿಸಾನ್ "e-NV200" ಪ್ರವೇಶಿಸುವ ಸಾಧ್ಯತೆ ಇದೆಯಂತೆ..


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited