Untitled Document
Sign Up | Login    
Cars & Bikes

ಫೋರ್ಸ್ ವನ್ ಎಲ್ ಎಕ್ಸ್

Prev

ಫೋರ್ಸ್ ವನ್ ಎಲ್ ಎಕ್ಸ್

Next

ಫೋರ್ಸ್ ಮೋಟಾರ್ಸ್ ಕಂಪನಿ ತನ್ನ ಫೋರ್ಸ್ ವನ್ ಶ್ರೇಣಿಯ ಎಲ್ ಎಕ್ಸ್ ಮಾದರಿಯ ಎಸ್ ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ದೆಹಲಿಯಲ್ಲಿ ಈ ವಾಹನದ ಎಕ್ಸ್ ಶೋರೂಂ ದರ 13.98 ಲಕ್ಷ ರೂ.

ಈ ಕಂಪನಿ ಭಾರತದಲ್ಲಿ ಪ್ರಯಾಣಿಕರ ವಾಹನ (ಸಾರಿಗೆ)ಗಳ ಕ್ಷೇತ್ರದ ಮೂಲಕ ಎಂಟ್ರಿ ತೆಗೆದುಕೊಂಡಿತ್ತು. 2011ರಲ್ಲಿ ಮೊದಲ ಎಸ್ ಯುವಿಯನ್ನು ಗ್ರಾಹಕರಿಗೆ ಪರಿಚಯಿಸಿದ ಕಂಪನಿ, 2013ರ ವೇಳೆಗೆ ಇನ್ನೆರಡು ಎಸ್ ಯು ವಿಗಳನ್ನು ಪರಿಚಯಿಸಿತು. ಫೋರ್ಸ್ ವನ್ ಇಎಕ್ಸ್, ಎಸ್ ಎಕ್ಸ್ ಗಳನ್ನೂ ಪರಿಚಯಿಸಿದೆ.

ಫೋರ್ಸ್ ವನ್ ಎಲ್ ಎಕ್ಸ್ 2.2 ಲೀ. ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, ಎಸ್ ಎಕ್ಸ್ ನಷ್ಟೇ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೆ ಹೊಂದುವ ಡುಯಲ್ ಮಾಸ್ ಫ್ಲೈವೀಲ್ ಇದರ ವಿಶೇಷತೆ. ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹೊಂದಿರುವ ಇದು ಏಳು ಸೀಟ್ ಸಾಮರ್ಥ್ಯದ ವಾಹನ. ದೇಶದ ಉಳಿದೆಡೆಯೂ ಇದು ಶೀಘ್ರ ಲಭಿಸಲಿದೆ ಎಂದು ಕಂಪನಿ ತಿಳಿಸಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited