Untitled Document
Sign Up | Login    
Cars & Bikes

ಥಾರ್ ಗೆ ಪ್ರತಿಸ್ಪರ್ಧಿ ಗೂರ್ಖಾ ?

Prev

ಗೂರ್ಖಾ

Next

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೇನೂ ಕೊರತೆ ಇಲ್ಲ. ಯಾವ ಕಂಪನಿಯ ವಾಹನ ಮಾರುಕಟ್ಟೆಗೆ ಬಂದು ಅಕಸ್ಮಾತ್ ಅದು ಯಶಸ್ವಿಯಾದರೆ ಅದಕ್ಕೆ ಪ್ರತಿಸ್ಪರ್ಧಿ ಎಂಬಂತೆ ಇನ್ನೊಂದು ಕಂಪನಿ ವಾಹನ ಬೀದಿಗಿಳಿಯುತ್ತದೆ. ಈಗ ಮಹಿಂದ್ರಾದ "ಥಾರ್" ಅಂಥದ್ದೊಂದು ಪ್ರತಿಸ್ಪರ್ಧಿ ಫೋರ್ಸ್ ನ "ಗೂರ್ಖಾ"!

ಸೆಪ್ಟೆಂಬರ್ ತಿಂಗಳಲ್ಲಿ ಇದು ಮಾರುಕಟ್ಟೆಗೆ ಬರಲಿದೆ. ಕಳೆದ ವರ್ಷವೇ ಈ ವಾಹನದ ಮಾದರಿಯನ್ನು ಫೋರ್ಸ್ ಕಂಪನಿ ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿಳಂಬವಾಗಿದೆ ಎಂಬುದು ಕಂಪನಿಯ ಸಮಜಾಯಿಷಿ.

ಗೂರ್ಖಾ 2WD soft top, 4WD soft top, 4WD hard top ಎಂಬ ಮೂರು ನಮೂನೆಯಲ್ಲಿ ಲಭ್ಯವಿದ್ದು, ದರ ಕ್ರಮವಾಗಿ 6.25 ಲಕ್ಷ, 8.35 ಲಕ್ಷ, 8.5 ಲಕ್ಷ ರೂ. (ದೆಹಲಿಯ ಎಕ್ಸ್ ಶೋರೂಂ ದರ) ನಿಗದಿಯಾಗಿದೆ. ಮರ್ಸಿಡೆಸ್ ಬೆನ್ಜ್ ಕಂಪನಿಯ 2.6 ಲೀ. ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನುವೆಲ್ ಟ್ರಾನ್ಸ್ ಮಿಶನ್ ಅಳವಡಿಸಲಾಗಿದೆ. ಇದೊಂದು ಎಸ್ ಯುವಿ ಆಗಿದ್ದು, ಶೀಘ್ರವೇ ವಾಹನ ಪ್ರಿಯರ ಕುತೂಹಲ ತಣಿಸಲಿದೆ.


     Next

Share this page :  

Other Cars & Bikes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited