Untitled Document
Sign Up | Login    
Dynamic website and Portals
  

Related News

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ

ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್‌ ನ್ನು ವಿಲೀನಗೊಳಿಸುವ ನೂತನ ಸಂಪ್ರದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಈ ಮೂಲಕ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಒಂಭತ್ತು ದಶಕಗಳ ಹಳೇ ಸಂಪ್ರದಾಯಕ್ಕೆ ತೆರೆಬಿದ್ದಿದೆ. ಕೇಂದ್ರ...

2017ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಗೆ ತೆರೆ

ಮುಂದಿನ ಆರ್ಥಿಕ ವರ್ಷದಿಂದ ಪ್ರತ್ಯೇಕ ರೈಲ್ವೆ ಮುಂಗಡ ಪತ್ರ ಮಂಡಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ 92 ವರ್ಷಗಳ ಇತಿಹಾಸವಿರುವ ಭಾರತದ ರೈಲ್ವೇ ಬಜೆಟ್​ಗೆ 2017ರಿಂದ ತೆರೆಬೀಳಲಿದೆ. ರೈಲ್ವೆ ಮುಂಗಡ ಪತ್ರವನ್ನು ಸಾಮಾನ್ಯ ಮುಂಗಡಪತ್ರದೊಂದಿಗೆ ಸೇರಿಸುವಂತೆ ಕೇಂದ್ರ ರೈಲ್ವೆ ಸಚಿವ ಸುರೇಶ್...

ಸೇತು ಭಾರತಂ - ರೈಲ್ವೇ ಕ್ರಾಸಿಂಗ್‌ ಮುಕ್ತ ಹೆದ್ದಾರಿ ಯೋಜನೆ ಉದ್ಘಾಟನೆ

ಭಾರತದಲ್ಲಿ ಹೆದ್ದಾರಿ, ರೈಲ್ವೆ, ಮತ್ತು ಐವೇ ಗಳನ್ನು ಅಭಿವೃದ್ಧಿ ಪಡಿಸಲು ಸತತ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು. 50,800 ಕೋಟಿ ರೂಪಾಯಿಯ ಮಹತ್ವಾಕಾಂಕ್ಷೆಯ ಸೇತು ಭಾರತಂ, ರೈಲ್ವೇ ಕ್ರಾಸಿಂಗ್‌ ಮುಕ್ತ ಹೆದ್ದಾರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ...

ರೈಲ್ವೆ ಬಜೆಟ್ 2016:ಪ್ರಯಾಣ ದರ ಏರಿಕೆ ಇಲ್ಲ

ಗುರುವಾರ 2016 ರ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಕುಮಾರ್, ಪ್ರಯಾಣಿಕರ ಪ್ರಯಾಣ ದರವನ್ನು ಹೆಚ್ಚಿಸದೇ ತಮ್ಮ ಎರಡನೇ ರೈಲ್ವೆ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. 3 ಸೂಪರ್ ಫಾಸ್ಟ್ ರೈಲ್ ಅನ್ನು ಘೋಷಿಸಿದರು. ಅದರ...

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೊಸ ಟಿಕೇಟ್ ನೀಡುವ ವ್ಯವಸ್ಥೆ

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಈಗ ಡಿಜಿಟಲ್ ಸರದಿಗೆ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯನ್ನು ಮಂಗಳವಾರ ಬೆಂಗಳೂರು ರೈಲ್ವೆ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಸಂಜೀವ್ ಅಗರ್ವಾಲ್ ಉದ್ಘಾಟನೆಗೊಳಿಸಿದರು. ಈ ರೀತಿಯ ವ್ಯವಸ್ಥೆ ಈಗಾಗಲೇ ಮೈಸೂರು, ಶಿವಮೊಗ್ಗ ಮತ್ತು ದಾವಣಗೆರೆ ರೈಲ್ವೆ ನಿಲ್ಗಾಣಗಳಲ್ಲಿವೆ. ಪ್ರಯಾಣಿಕರು...

ಮಧ್ಯಪ್ರದೇಶ ಅವಳಿ ರೈಲು ಅಪಘಾತ : 24 ಸಾವು

ಮಧ್ಯಪ್ರದೇಶದ ಹರ್ದಾ ಬಳಿ ಮಂಗಳವಾರ ರಾತ್ರಿ ನಡೆದ ಎರಡು ರೈಲು ಅಪಘಾತದಲ್ಲಿ ಈವರೆಗೆ ಸುಮಾರು 24 ಜನ ಮೃತಪಟ್ಟಿರುವ ವರದಿಯಾಗಿದೆ. 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ವಾರಣಾಸಿ-ಮುಂಬಯಿ ಮಾರ್ಗದ ಕಾಮಯಾನಿ ಎಕ್ಸ್ ಪ್ರೆಸ್ ರೈಲು ಮಂಗಳವಾರ...

ರಾಜ್ಯಗಳ ವಿಕಾಸವಾಗದೆ ದೇಶದ ಅಭಿವೃದ್ಧಿ ಅಸಾಧ್ಯ: ಬಿಹಾರದಲ್ಲಿ ಪ್ರಧಾನಿ ಮೋದಿ

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಪಟ್ನಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿ ಐಐಟಿ ಯನ್ನು ಉದ್ಘಾಟಿಸಿದರು. ಅಲ್ಲದೆ, ಪ್ರಧಾನಿ ಮೋದಿಯವರು ಮೆಡಿಕಲ್ ಇಲೆಕ್ಟ್ರಾನಿಕ್ಸ್ ಗೆ ಇನ್ಕ್ಯುಬೇಷನ್ ಸೆಂಟರ್ ಹಾಗೂ ಜಗದೀಶ್ಪುರ-ಹಾಲ್ಡಿಯಾ...

ರೈಲ್ವೆ ಟಿಕೆಟ್ ಪಡೆಯಲು ಆರಂಭವಾಗಲಿದೆ ಸ್ವಯಂ ಚಾಲಿತ ಟಿಕೆಟ್‌ ಮಾರಾಟ ಯಂತ್ರ

ರೈಲ್ವೆ ಟಿಕೆಟ್ ಗೆ ಇನ್ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ. ಕಾಯ್ದಿರಿಸದ ಟಿಕೆಟ್‌ ಮೂಲಕ ಪ್ರಯಾಣಿಸುವವರ ಅನುಕೂಲಕ್ಕಾಗಿ ಸ್ವಯಂಚಾಲಿತ ಟಿಕೆಟ್‌ ಮಾರಾಟ ಯಂತ್ರ (ಎವಿಟಿಎಂ) ಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಶೀಘ್ರದಲ್ಲೇ ಬೆಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಎಟಿಎಂ ಮಾದರಿಯ ಟಿಕೆಟ್‌...

ಚೀನಾದಲ್ಲಿ ಮೋದಿ: 10ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಚೀನಾ 10 ಬಿಲಿಯನ್ ಡಾಲರ್ ಮೌಲ್ಯದ 24 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಬೀಜಿಂಗ್ ನಲ್ಲಿರುವ ಗ್ರೇಟ್ ಹಾಲ್ ಆಫ್ ಪೀಪಲ್ ನ ಸೌತ್ ಚೇಂಬರ್...

ದಂತೇವಾಡಾಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ ಗಢದ ನಕ್ಸಲ್‌ಪೀಡಿತ ದಂತೇವಾಡಾ ಜಿಲ್ಲೆಗೆ ಶನಿವಾರ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಇದೇ ವೇಳೆ ಅವರು ಅಲ್ಟ್ರಾ ಮೆಗಾ...

ಛತ್ತೀಸ್ ಗಢಕ್ಕೆ ಪ್ರಧಾನಿ:ನಕ್ಸಲ್ ರಿಂದ ಗ್ರಾಮಸ್ಥರ ಒತ್ತೆ, ರೈಲ್ವೆ ಮಾರ್ಗ ಸ್ಫೋಟ

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶ ದಾಂತೇವಾಡಾ ಜಿಲ್ಲೆಗೆ ಭೇಟಿ ನೀಡಿರುವ ಬೆನ್ನಲ್ಲೇ ನಕ್ಸಲರ ಗುಂಪೊಂದು ಸುಕ್ಮಾ ಜಿಲ್ಲೆಯ ಮರೆಂಗಾ ಗ್ರಾಮದ ಸುಮಾರು 300ಕ್ಕೂ ಅಧಿಕ ಗ್ರಾಮಸ್ಥರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡ ಘಟನೆ ನಡೆದಿದೆ. ದಾಂತೇವಾಡಾದಲ್ಲಿ ನಾನಾ ಕಾರ್ಯಕ್ರಮಗಳಿಗೆ...

ರೈಲ್ವೆ ಜನರಲ್‌ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ

ರೈಲ್ವೆ ನಿಲ್ದಾಣದಲ್ಲಿ ಉದ್ದನೆಯ ಸರತಿ ಸಾಲಿನಲ್ಲೇ ನಿಂತು ಇನ್ನು ಮುಂದೆ ಟಿಕೆಟ್‌ ಖರೀದಿಸಬೇಕು ಎಂದೇನಿಲ್ಲ. ಅನ್‌ ರಿಸರ್ವ್ಡ್ (ಸಾಮಾನ್ಯ) ಟಿಕೆಟ್‌ ಗಳನ್ನು ಇನ್ನು ಮೊಬೈಲ್‌ ಆಪ್‌ ಮೂಲಕವೇ ಖರೀದಿಸಬಹುದು. ತಿಂಗಳ ಪಾಸನ್ನೂ ಇದೇ ರೀತಿ ಖರೀದಿ ಮಾಡಬಹುದು. ಈ ವಿನೂತನ ಸೇವೆಗೆ...

ಕ್ಷಮೆ ಯಾಚಿಸುವಂತೆ ವೆಂಕಯ್ಯ ನಾಯ್ಡುಗೆ ವಿಪಕ್ಷಗಳ ಆಗ್ರಹ

ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕ್ಷಮೆಯಾಚಿಸುವಂತೆ ವಿರೋಧಪಕ್ಷಗಳು ಪಟ್ಟು ಹಿಡಿದಿದ್ದು, ಕ್ಷಮೆ ಯಾಚಿಸದೇ ಇದ್ದರೆ ರೈಲ್ವೆ ಬಜೆಟ್ ಮಂಡನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿವೆ. ವಿರೋಧ ಪಕ್ಷಗಳು ಸದನ ಹಾಳುಮಾಡುವ ಮನಸ್ಥಿತಿಯನ್ನು ಹೊಂದಿವೆ ಎಂದು ವೆಂಕಯ್ಯ ನಾಯ್ಡು...

ರೈಲ್ವೆ ಬಜೆಟ್: ಪ್ರಯಾಣ ದರ ಯಥಾಸ್ಥಿತಿ; ತತ್ಕಾಲ್‌ ಟಿಕೆಟ್‌ ದುಬಾರಿ ಸಾಧ್ಯತೆ

ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್‌ ಮಧ್ಯಾಹ್ನ 12ಕ್ಕೆ ಮಂಡನೆಯಾಗಲಿದೆ. ರೈಲ್ವೆ ಮಂತ್ರಿ ಸುರೇಶ್‌ ಪ್ರಭು ಅವರ ಚೊಚ್ಚಲ ರೈಲ್ವೆ ಮುಂಗಡಪತ್ರ ಇದಾಗಿದ್ದು, ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ...

ಸುರೇಶ್ ಪ್ರಭು ಹಳಿ ಇಲ್ಲದ ರೈಲು ಬಿಟ್ಟಿದ್ದಾರೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದ ಮಟ್ಟಿಗೆ ಇದೊಂದು ನಿರಾಶಾದಾಯಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ತೈಲ ಬೆಲೆ ಇಳಿಕೆಯಿಂದ ಕೇಂದ್ರಕ್ಕೆ 18-20 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ. ಇದನ್ನು ರೈಲ್ವೆ ಬಜೆಟ್ ನಲ್ಲಿ ಉಪಯೋಗಿಸಿಕೊಳ್ಳಲು ಅವಕಾಶವಿದ್ದರೂ...

ರೈಲ್ವೆ ಬಜೆಟ್ 2015-16

ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಪರಿಪೂರ್ಣ 2015-16ನೇ ಸಾಲಿನ ಕೇಂದ್ರ ರೈಲ್ವೆ ಬಜೆಟ್ ನ್ನು ಸಚಿವ ಸುರೇಶ್ ಪ್ರಭು ಮಂಡಿಸಿದರು. ಲೋಕಸಭೆಯಲ್ಲಿ ಪ್ರಸ್ತಕ್ತ ಸಾಲಿನ ರೈಲ್ವೆ ಮುಂಗಡಪತ್ರ ಮಂಡಿಸಿದ ಕೇಂದ್ರ ರೈಲ್ವೆ...

ಎನ್.ಡಿ.ಎ ಸರ್ಕಾರದ ರೈಲ್ವೇ ಬಜೆಟ್ ಕನಸಿನ ಬಜೆಟ್: ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಮಂಡಿಸಿರುವ ಎನ್.ಡಿ.ಎ ಸರ್ಕಾರದ ಪೂರ್ಣಾವಧಿ ರೈಲ್ವೆ ಬಜೆಟ್ ಬಗ್ಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇದು ಕನಸಿನ ಬಜೆಟ್ ಎಂದು ಟೀಕಿಸಿದ್ದಾರೆ. ಬಜೆಟ್ ನಲ್ಲಿ ಘೋಷಿಸಲಾಗಿರುವ ಯಾವುದೇ ಅಂಶಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಕ್ಕೆ ಸಾಧ್ಯವಿಲ್ಲ...

ರೈಲ್ವೆಗೆ ಪ್ರತ್ಯೇಕ ಬಜೆಟ್ ಇಲ್ಲ: ಸಾಮಾನ್ಯ ಬಜೆಟ್ ನಲ್ಲೇ ಅಡಕ ಸಾಧ್ಯತೆ

ಫೆ.26ರಂದು ಸಚಿವ ಸುರೇಶ್‌ ಪ್ರಭು ಅವರು ಮಂಡಿಸಲಿರುವ ರೈಲ್ವೆ ಬಜೆಟ್‌, ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ರೈಲ್ವೆ ಬಜೆಟ್‌ ಆಗಲಿದೆಯೇ ಎಂಬ ಸುದ್ದಿ ದೆಹಲಿ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ, ರೈಲ್ವೆ ಬಜೆಟ್‌ ನ್ನು ಸಾಮಾನ್ಯ ಬಜೆಟ್‌ ನೊಳಗೆ ಅಡಕಗೊಳಿಸುವ ಕುರಿತು...

ರೈಲ್ವೆ ಟಿಕೆಟ್ ಗಿಂತ ಸ್ಪೈಸ್ ಜಟ್ ವಿಮಾನ ದರ ಕಡಿಮೆ

ವಿಮಾನ ಪ್ರಯಾಣಿಕರಿಗೆ ಒಂದು ಸಿಹಿಸುದ್ದಿ. ಸ್ಪೈಸ್ ಜೆಟ್, ರೈಲು ಟಿಕೆಟ್ ದರಕ್ಕಿಂತ ವಿಮಾನ ಯಾನ ಅಗ್ಗಗೊಳಿಸಿದೆ. ಕಡಿಮೆ ಖರ್ಚಿನ ಪ್ರಯಾಣಕ್ಕಾಗಿ ಸ್ಪೈಸ್ ಜೆಟ್ ಬುಧವಾರ ಪ್ರಯಾಣಿಕರಿಗಾಗಿ ಹೊಸ ಆಫರ್ ನೀಡಿದೆ. ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಎಲ್ಲಾ ತೆರಿಗೆಗಳು ಸೇರಿ...

ಫೆ.26ಕ್ಕೆ ರೈಲ್ವೆ, 28ಕ್ಕೆ ಕೇಂದ್ರ ಬಜೆಟ್‌ ಮಂಡನೆ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2015-16ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 28 ರಂದು ಮಂಡಿಸಲಿದ್ದಾರೆ. ಫೆ. 23ರಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಫೆ.26ರಂದು ರೈಲ್ವೆ ಮುಂಗಡಪತ್ರ ಮಂಡನೆಯಾಗಲಿದೆ. ಫೆ.27ರಂದು ಆರ್ಥಿಕ ಸಮೀಕ್ಷೆ ಮತ್ತು ಫೆ.28ರಂದು...

ಬಾಬ್ರಿ ಮಸೀದಿ ಧ್ವಂಸ ದಿನ: ದೇಶಾದ್ಯಂತ ಕಟ್ಟೆಚ್ಚರ

ಡಿ.6 ಬಾಬ್ರಿ ಮಸೀದಿ ಧ್ವಂಸ ದಿನವಾದ ಹಿನ್ನೆಲೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ದೇಶಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಬಾಬ್ರಿ ಮಸೀದಿ ಧ್ವಂಸಗೊಂಡು ಡಿ.6ಕ್ಕೆ 22 ವರ್ಷ. ಈ ಮಧ್ಯೆ ದೇಶದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು...

ರೈಲು ನಿಲ್ದಾಣಗಳ ಖಾಸಗೀಕರಣಕ್ಕೆ ಪ್ರಧಾನಿ ಮೋದಿ ನಿರ್ಧಾರ

ರೈಲ್ವೆ ನಿಲ್ದಾಣಗಳಿಗೆ ಹೊಸ ರೂಪ ಕೊಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ರೈಲು ನಿಲ್ದಾಣಗಳನ್ನೇ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ 10ರಿಂದ 12 ರೈಲು ನಿಲ್ದಾಣಗಳನ್ನು ಖಾಸಗೀಕರಣ ಮಾಡಲಾಗುತ್ತದೆ. ನಿಲ್ದಾಣಗಳು ಏರ್‌ಪೋರ್ಟ್‌ಗಳಿಗಿಂತ ಉತ್ತಮವಾಗಿರಬೇಕು. ರೈಲುಗಳು ವಾಣಿಜ್ಯ ಕಟ್ಟಡಗಳ ಕೆಳಗೆ...

ರಾಜ್ಯದ 14 ರೈಲ್ವೆ ಯೋಜನೆಗೂ ಕುತ್ತು

ಕೆಲವೇ ದಿನಗಳ ಹಿಂದೆ ರೈಲ್ವೆ ಖಾತೆಯನ್ನು ಕಳೆದುಕೊಂಡ ಕರ್ನಾಟಕಕ್ಕೆ ಈಗ ಮತ್ತೂಂದು ಹಿನ್ನಡೆ ಎದುರಾಗಿದೆ. ಇದುವರೆಗೂ ಕಾಮಗಾರಿ ಚಾಲ್ತಿಗೊಳ್ಳದ ಬರೋಬ್ಬರಿ 10 ಸಾವಿರ ಕೋಟಿ ರೂ. ಮೌಲ್ಯದ 14 ಯೋಜನೆ ಗಳನ್ನು ಕೈಬಿಡಲು ರೈಲ್ವೆ ಸಚಿವಾಲಯ ಚಿಂತನೆ ನಡೆಸಿದೆ. ರೈಲ್ವೆ ಇಲಾಖೆ...

ಕೇಂದ್ರ ಸಂಪುಟ ವಿಸ್ತರಣೆ: ಸಚಿವರಿಗೆ ಖಾತೆ ಹಂಚಿಕೆ

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಿದ ಬಳಿಕ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಜತೆ ಹಲವಾರು ಪ್ರಮುಖ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ. ರೈಲ್ವೆ ಖಾತೆಯನ್ನು ನಿರ್ವಹಿಸುತ್ತಿದ್ದ ಡಿ.ವಿ.ಸದಾನಂದಗೌಡ ಅವರ ಖಾತೆ ಬದಲಾವಣೆ ಮಾಡಲಾಗಿದ್ದು,...

ಎಕ್ಸ್ ಪ್ರೆಸ್ ರೈಲುಗಳ ನಡುವೆ ಡಿಕ್ಕಿ 12 ಜನ ಸಾವು

ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದರ ಪರಿಣಾಮ 12 ಜನ ಸಾವನ್ನಪ್ಪಿದ್ದು, 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ. ಸೆ.30ರ ತಡರಾತ್ರಿ ವಾರಣಾಸಿಯಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ಮದ್ವುದೀ-ಲಖನೌ ಕ್ರಿಶಕ್ ಎಕ್ಸ್‌ಪ್ರೆಸ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited