Untitled Document
Sign Up | Login    
Dynamic website and Portals
  
February 25, 2016

ರೈಲ್ವೆ ಬಜೆಟ್ 2016:ಪ್ರಯಾಣ ದರ ಏರಿಕೆ ಇಲ್ಲ

ನವದೆಹಲಿ : ಗುರುವಾರ 2016 ರ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಕುಮಾರ್, ಪ್ರಯಾಣಿಕರ ಪ್ರಯಾಣ ದರವನ್ನು ಹೆಚ್ಚಿಸದೇ ತಮ್ಮ ಎರಡನೇ ರೈಲ್ವೆ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. 3 ಸೂಪರ್ ಫಾಸ್ಟ್ ರೈಲ್ ಅನ್ನು ಘೋಷಿಸಿದರು. ಅದರ ಜೊತೆ ಸುರೇಶ ಪ್ರಭು ಅವರು ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿದರು. ಹಿರಿಯ ನಾಗರಿಕರಿಗೆ ಶೇಕಡಾ 50 ರಷ್ಟು ಮತ್ತು ಮಹಿಳೆಯರಿಗೆ ಶೇಕಡಾ 33 ರಷ್ಠು ಎಲ್ಲಾ ವರ್ಗಗಳಲ್ಲಿ ಮೀಸಲಾತಿ ನೀಡಲಾಗುವುದೆಂದರು.

ರೈಲ್ವೆ ಬಜೆಟ್ 2016 ರ ಪ್ರಮುಖ ಅಂಶಗಳು :

* ಗೂಗಲ್‌ ಸಹಭಾಗಿತ್ವದಲ್ಲಿ ಈ ವರ್ಷದಲ್ಲಿ 100 ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ. ಮುಂದಿನ 2 ವರ್ಷಗಳಲ್ಲಿ 400 ನಿಲ್ದಾಣಗಳಿಗೆ ವಿಸ್ತರಣೆ.

* ಬಸ್‌ ಕಂಡಕ್ಟರ್‌ಗಳು ಬಳಸುವಂಥದ್ದೇ ಯಂತ್ರ ರೈಲು ಟಿಕೆಟ್‌ ವಿತರಿಸಲು ಬಳಕೆ. ಫ್ಲ್ಯಾಟ್‌ಫಾರ್ಮ್ ಟಿಕೆಟ್‌ ಖರೀದಿಗೆ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಬಳಸಲು ಅವಕಾಶ.

* ಸ್ವಚ್ಛ ಭಾರತ ಅಡಿ ಹಲವು ಕಾರ್ಯಕ್ರಮ. ಎಸ್ಸೆಮ್ಮೆಸ್‌ ಸಂದೇಶ ಕಳುಹಿಸಿದರೆ ಶೌಚ, ಬೋಗಿ ಶುಚಿ. ರೈಲಲ್ಲಿ ಬಯೋವ್ಯಾಕ್ಯೂಮ್‌ ಶೌಚಾಲಯ. ಮಾನವ ತ್ಯಾಜ್ಯ ನೇರ ವಿಲೇವಾರಿ ರದ್ದು.

* ಟಿಕೆಟ್‌ ರಹಿತ ಪ್ರಯಾಣ, ವಂಚನೆ ತಡೆಗಟ್ಟಲು ಪ್ರಮುಖ ರೈಲು ನಿಲ್ದಾಣಗಳಲ್ಲಿ ಬಾರ್‌ಕೋಡ್‌ ಟಿಕೆಟ್‌, ಸ್ಕ್ಯಾನರ್‌ ವ್ಯವಸ್ಥೆ ಅಳವಡಿಕೆ. ಆ್ಯಪ್‌ ಮೂಲಕ ಟಿಕೆಟ್‌ ಖರೀದಿಗೆ ವ್ಯವಸ್ಥೆ.

* ರೈಲುಗಳ ಒಳಗೆ ಜಿಪಿಎಸ್‌ ಆಧಾರಿತ ಡಿಜಿಟಲ್‌ ಡಿಸ್‌ಪ್ಲೇ ಫ‌ಲಕ ಅಳವಡಿಕೆ. ಪ್ರಯಾಣಿಕರಿಗೆ ಮುಂದಿನ ನಿಲ್ದಾಣದ ಬಗ್ಗೆ ಮಾಹಿತಿ, ಎಫ್ಎಂ ಸೇವೆ ಒದಗಿಸಲು ಪ್ರಯತ್ನ.

* ಸ್ವಯಂಚಾಲಿತ ಬಾಗಿಲು, ವಿಮಾನದಲ್ಲಿರುವಂತೆ ನೀರು ಕಡಿಮೆ ಬಳಸುವ ವ್ಯಾಕ್ಯೂಂ ಟಾಯ್ಲೆಟ್‌, ಕಸದ ಡಬ್ಬಿ, ಟಿವಿ, ವೆಂಡಿಂಗ್‌ ಮೆಶಿನ್‌ ಹೊಂದಿದ ಹೊಸ ರೀತಿಯ ಬೋಗಿ ವಿನ್ಯಾಸ.

* ತತ್ಕಾಲ್‌ ಟಿಕೆಟ್‌ಗಳ ಮಾರಾಟ ಅಕ್ರಮಕ್ಕೆ ಕಡಿವಾಣ. ರೈಲು ನಿಲ್ದಾಣಗಳಲ್ಲಿರುವ ತತ್ಕಾಲ್‌ ಕೌಂಟರ್‌ ಬಳಿ ಸಿಸಿಟಿವಿ ಅಳವಡಿಕೆ. ಕಾಲ ಕಾಲಕ್ಕೆ ಪರಿಣತರಿಂದ ಪರಿಶೋಧನೆ.

* ಕಾದಿರಿಸಿದ ಟಿಕೆಟ್‌ ರದ್ದುಪಡಿಸುವವರಿಗೆ 139 ಸಹಾಯವಾಣಿಯಲ್ಲೂ ನೆರವು. ಸೂಚನೆ ಪಾಲಿಸಿದರೆ, ಒನ್‌ ಟೈಮ್‌ ಪಾಸ್‌ವರ್ಡ್‌ ರವಾನೆ. ಟಿಕೆಟ್‌ ರದ್ದುಗೊಳಿಸಿ, ಹಣ ವಾಪಸ್‌.

* ಸ್ಥ್ಯಳೀಯ ಭಾಷೆಯ ವೃತ್ತಪತ್ರಿಕೆಗಳು ಲಭ್ಯ

* ರೈಲಿನ ಸರಾಸರಿ ವೇಗವನ್ನು 80 ಕಿ.ಮೀ.ಗೆ ಏರಿಕೆ

* ರೈಲ್ವೇಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಫೇಸ್‌ಬುಕ್‌, ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣ ಬಳಕೆ. ಆನ್‌ಲೈನ್‌ ಮೂಲಕ ನಡೆಸುತ್ತಿರುವ ನೇಮ ಕಾತಿ ಪ್ರಕ್ರಿಯೆ ಎಲ್ಲ ಹುದ್ದೆಗಳಿಗೂ ವಿಸ್ತರಣೆ.

* ಬೆಂಗಳೂರು ಸಬ್ ಅರ್ಬನ್ ರೈಲ್ವೆ ಘೋಷಣೆ

* ರೈಲ್ವೇ ಕ್ಯಾಟರಿಂಗ್‌ ವ್ಯವಸ್ಥೆಯಲ್ಲಿ ಇನ್ನು ಸ್ಥಳೀಯ ಆಹಾರಗಳೂ ಲಭ್ಯ. ಮಕ್ಕಳಿಗೆ ಬೇಬಿ ಫುಡ್ ಸೌಲಭ್ಯ

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited