ನವದೆಹಲಿ : ವಿಮಾನ ಪ್ರಯಾಣಿಕರಿಗೆ ಒಂದು ಸಿಹಿಸುದ್ದಿ. ಸ್ಪೈಸ್ ಜೆಟ್, ರೈಲು ಟಿಕೆಟ್ ದರಕ್ಕಿಂತ ವಿಮಾನ ಯಾನ ಅಗ್ಗಗೊಳಿಸಿದೆ. ಕಡಿಮೆ ಖರ್ಚಿನ ಪ್ರಯಾಣಕ್ಕಾಗಿ ಸ್ಪೈಸ್ ಜೆಟ್ ಬುಧವಾರ ಪ್ರಯಾಣಿಕರಿಗಾಗಿ ಹೊಸ ಆಫರ್ ನೀಡಿದೆ.
ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಎಲ್ಲಾ ತೆರಿಗೆಗಳು ಸೇರಿ 599 ರೂ. ಮತ್ತು 3,499 ರೂಪಾಯಿಯಿಂದ ಆರಂಭವಾಗಲಿದೆ ಎಂದು ತಿಳಿಸಿದೆ.
ಈ ಹೊಸ ಸ್ಕೀಮ್ ನಲ್ಲಿ 4 ಲಕ್ಷ ಟಿಕೆಟ್ ಗೆ ಆಫರ್ ನೀಡಿದೆ. ಹಾಗಾಗಿ ಶುಕ್ರವಾರದಿಂದ ಬುಕ್ಕಿಂಗ್ ಆರಂಭವಾಗಲಿದೆ. 2015ರ ಜುಲೈ01 ರಿಂದ ಅಕ್ಟೋಬರ್ 24ರ ಒಳಗಿನ ಪ್ರಯಾಣಕ್ಕೆ ಮಾತ್ರ ಈ ಆಫರ್ ಅನ್ವಯವಾಗಲಿದೆ.
ಇದು ಸ್ಪೈಸ್ ಜೆಟ್ ನ ಅತ್ಯಂತ ಕಡಿಮೆ ಪ್ರಯಾಣದರವಾಗಿದೆ. ಇದು ಪ್ರಯಾಣಿಕರಿಗೆ ರೈಲ್ವೆಗಿಂತ ಕಡಿಮೆ ಪ್ರಮಾಣದ ದರವಾಗಿದೆ ಎಂದು ವಿವರಿಸಿದೆ.
ಅಂತಾರಾಷ್ಟ್ರೀಯ ವಿಮಾನದಲ್ಲಿ ( ಕೊಲಂಬೊ, ಕಾಬೂಲ್ ಮತ್ತು ದುಬೈ, ಅಹಮ್ಮದಾಬಾದ್, ದುಬೈ ಸೆಕ್ಟರ್ ಹೊರತುಪಡಿಸಿ) ಎಲ್ಲಾ ತೆರಿಗೆ ಸೇರಿ ಆರಂಭಿಕ 3,499 ರೂಪಾಯಿಯಿಂದ ಟಿಕೆಟ್ ದರ ನಿಗದಿಪಡಿಸಲಾಗಿದೆ.
ಅಲ್ಲದೇ ಹೈದರಾಬಾದ್ ನಿಂದ ವಿಜಯವಾಡ, ದೆಹಲಿ ಟು ಡೆಹ್ರಾಡೂನ್, ಗುವಾಹಟಿ ಟು ಕೋಲ್ಕತಾ, ಅಹಮ್ಮದಾಬಾದ್ ಟು ಮುಂಬೈ ಮತ್ತು ಬೆಂಗಳೂರು ಪ್ರಯಾಣ ದರ ಕೇವಲ 599!
ದೆಹಲಿ ಟು ಕಾಠ್ಮಂಡು ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರಯಾಣ ದರ 3,499 ರೂಪಾಯಿ. ನಾಲ್ಕು ಲಕ್ಷ ಟಿಕೆಟ್ ಈ ಆಫರ್ ನಲ್ಲಿದ್ದು, ಇದರಲ್ಲಿ ಒಂದು ಲಕ್ಷ ಟಿಕೆಟ್ 599 ರೂ. ಪ್ರಯಾಣಕ್ಕೆ ಮೀಸಲಿರಿಸಲಾಗಿದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.