ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ 2015-16ರ ತಮ್ಮ ಮೊದಲ ಪೂರ್ಣ ಪ್ರಮಾಣದ ಬಜೆಟ್ ಫೆಬ್ರವರಿ 28 ರಂದು ಮಂಡಿಸಲಿದ್ದಾರೆ.
ಫೆ. 23ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆ.26ರಂದು ರೈಲ್ವೆ ಮುಂಗಡಪತ್ರ ಮಂಡನೆಯಾಗಲಿದೆ.
ಫೆ.27ರಂದು ಆರ್ಥಿಕ ಸಮೀಕ್ಷೆ ಮತ್ತು ಫೆ.28ರಂದು ಸಾಮಾನ್ಯ ಮುಂಗಡಪತ್ರ ಮಂಡಿಸಲಾಗುತ್ತದೆ. ಬಜೆಟ್ ಅಧಿವೇಶನ ಮಾರ್ಚ್ 20ರವರೆಗೆ ಮುಂದುವರೆಯಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಬಾರಿ ಸಾಮಾನ್ಯ ಬಜೆಟ್ ಶನಿವಾರ ಮಂಡಿಸುತ್ತಿರುವುದು ವಿಶೇಷ. ಸಾಮಾನ್ಯವಾಗಿ ಶನಿವಾರ ಸಂಸತ್ ಅಧಿವೇಶನ ನಡೆಯುವುದಿಲ್ಲ. ಆದರೆ ಫೆ.28ರಂದೇ ಬಜೆಟ್ ಮಂಡಿಸುವ ಪರಿಪಾಠ ಇದೆ. ಹೀಗಾಗಿ ಶನಿವಾರವಾದರೂ ಅಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.