Untitled Document
Sign Up | Login    
Dynamic website and Portals
  
August 5, 2015

ಮಧ್ಯಪ್ರದೇಶ ಅವಳಿ ರೈಲು ಅಪಘಾತ : 24 ಸಾವು

ಭೋಪಾಲ್ : ಮಧ್ಯಪ್ರದೇಶದ ಹರ್ದಾ ಬಳಿ ಮಂಗಳವಾರ ರಾತ್ರಿ ನಡೆದ ಎರಡು ರೈಲು ಅಪಘಾತದಲ್ಲಿ ಈವರೆಗೆ ಸುಮಾರು 24 ಜನ ಮೃತಪಟ್ಟಿರುವ ವರದಿಯಾಗಿದೆ. 300 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಾರಣಾಸಿ-ಮುಂಬಯಿ ಮಾರ್ಗದ ಕಾಮಯಾನಿ ಎಕ್ಸ್ ಪ್ರೆಸ್ ರೈಲು ಮಂಗಳವಾರ ರಾತ್ರಿ 11:45 ರ ಸುಮಾರಿಗೆ ಭೋಪಾಲ್ ನಿಂದ 160 ಕಿ.ಮೀ ದೂರದಲ್ಲಿ ಹರ್ದಾ ಬಳಿ ಹಳಿತಪ್ಪಿದೆ. ಅದೇ ಸಮಯದಲ್ಲಿ ಪಟನಾದಿಂದ ಮುಂಬಯಿಗೆ ಸಾಗುತ್ತಿದ್ದ ಜನತಾ ಎಕ್ಸ್ ಪ್ರೆಸ್ ಕೂಡ ಅಪಘಾತಕ್ಕೀಡಾಗಿದೆ.

ಮಚಕ್ ನದಿ ಸೇತುವೆಯ ಬಳಿ ಈ ಅಪಘಾತಗಳಾಗಿವೆ. ಕಾಮಯಾನಿ ಎಕ್ಸ್ ಪ್ರೆಸ್ ನ 7 ಬೊಗಿಗಳು ಮತ್ತು ಜನತಾ ಎಕ್ಸ್ ಪ್ರೆಸ್ ನ 3 ಬೊಗಿ ಮತ್ತು ಎಂಜಿನ್ ಹಳಿತಪ್ಪಿದೆ. ಭಾರೀ ಮಳೆಯ ಕಾರಣದಿಂದ ರೈಲು ಟ್ರಾಕ್ ಮೇಲೆ ಹಾಕಿರುವ ಆಧಾರ ವಸ್ತುಗಳು ಕೊಚ್ಚಿ ಹೋಗಿದ್ದರಿಂದ ಈ ಅವಗಡ ಸಂಭವಿಸಿದೆ ಎಂದು ಪಶ್ಚಿಮ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ, ಪಿಯೂಷ ಮಾಥುರ್ ತಿಳಿಸಿದ್ದಾರೆ.

ರೈಲ್ವೆ ಸಚಿವಾಲಯ ಮೃತ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದೆ.

ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗುವ ಹಂತದಲ್ಲಿದೆ.

ಸಹಾಯವಾಣಿ ಸಂಖ್ಯೆಗಳು ಃ ಭೋಪಾಲ್ 0755 4001609 ಹರ್ದಾ 9752460088 ಬಿನಾ 07580 222052 ಇಟಾರ್ಸಿ 07572 241920

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Crime

ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತ: ಸಾವಿನ ಸಂಖ್ಯೆ ಐದಕ್ಕೆ ಏರಿಕೆ
  • ಬೆಂಗಳೂರಿನ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿತಗೊಂಡ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
  • ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ
  • ಸೈನೈಡ್ ಮೋಹನ್ ಗೆ ಜೀವಾವಧಿ ಜೈಲು ಶಿಕ್ಷೆ: ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited