Untitled Document
Sign Up | Login    
Dynamic website and Portals
  
February 26, 2015

ರೈಲ್ವೆ ಬಜೆಟ್ 2015-16

ರೈಲ್ವೆ ಬಜೆಟ್ 2015-16

ನವದೆಹಲಿ : ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಪರಿಪೂರ್ಣ 2015-16ನೇ ಸಾಲಿನ ಕೇಂದ್ರ ರೈಲ್ವೆ ಬಜೆಟ್ ನ್ನು ಸಚಿವ ಸುರೇಶ್ ಪ್ರಭು ಮಂಡಿಸಿದರು.

ಲೋಕಸಭೆಯಲ್ಲಿ ಪ್ರಸ್ತಕ್ತ ಸಾಲಿನ ರೈಲ್ವೆ ಮುಂಗಡಪತ್ರ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು, ಬಜೆಟ್ ಮಂಡನೆಗೆ ಹಾಗೂ ದೇಶದ ಜನರ ಸೇವೆಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಕೃತಜ್ನತೆ ತಿಳಿಸಿದರು.

ರೈಲ್ವೆ ವ್ಯವಸ್ಥೆ ಭಾರತೀಯ ಜೀವನಾಡಿ. ಸ್ವಾತಂತ್ರ್ಯ ಸಿಕ್ಕು 6 ದಶಕಗಳು ಕಳೆದರೂ ರೈಲ್ವೆ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಕಂಡಿಲ್ಲ. ಕಳೆದ 2 ದಶಕಗಳಿಂದ ರೈಲ್ವೆ ಭಾರೀ ಅಭಿವೃದ್ಧಿ ಹೊಂದಿದೆ. ಉತ್ತಮ ಸೇವೆ, ಉತ್ತಮ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.ಗೂಡ್ಸ್ ರೈಲು ಸೇರಿದಂತೆ ಸಾಮಾನ್ಯ ರೈಲುಗಳು ಗಂಟೆಗೆ 25 ಕಿ.ಮೀ ವೇಗ ಚಲಿಸುತ್ತದೆ.ಹಲವು ವರ್ಷಗಳಿಂದ ಇಲಾಖೆಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳಾಗಿಲ್ಲ ಎಂದು ತಿಳಿಸಿದರು..

ರೈಲ್ವೆ ಇಲಾಖೆಯಲ್ಲಿ ಭದ್ರತೆ ನಿಜವಾದ ಸವಾಲು. ಇಲಾಖೆಯಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಅಗತ್ಯವಿದೆ. ಎಫ್.ಡಿಐ ಗೆ ಅವಕಾಶ ನೀಡಿದರೆ ಸುಧಾರಣೆಗೆ ವೇಗ ದೊರೆಯುತ್ತದೆ. ಇಲಖೆಯಲ್ಲಿ ಭಾರೀ ಬದಲಾವಣೆ ಅಗವಿದ್ದು, ಈಗಿರುವ ಕೆಲ ಮಾರ್ಗವನ್ನು ಬದಲಿಸಿ, ಹೊಸ ರೈಲು ಮಾರ್ಗ ಕಲ್ಪಿಸಬೇಕಿದೆ. ಮುಂದಿನ ೫ ವರ್ಷಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ಭಾರೀ ಸುಧಾರಣೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈಲ್ವೆ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲು ಆದ್ಯತೆ ನೀಡಲಾಗುವುದು. ಆಧುನಿಕತೆಗೆ ತಕ್ಕಂತೆ ರೈಲ್ವೆ ಸಾಮರ್ಥ್ಯ ಹೆಚ್ಚಳ ಮಾಡಲಾಗುವುದು. ಖಾಸಗಿ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ನಮ್ಮ ಸರ್ಕಾರದ ಗುರಿಯಾಗಿದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಪ್ರಯಾಣಿಕ ಸ್ನೇಹಿ ಮಾಡುವುದೇ ನಮ್ಮ ಆದ್ಯತೆ. ಪ್ರಯಾಣಿಕರ ರೈಲು ಯಥಾಸ್ಥಿತಿಯಲ್ಲಿ ಸಾಗಲಿದೆ. ಗೂಡ್ಸ್ ರೈಲುಗಳಿಗೆ ಸಮಯ ನಿಗಧಿಮಾಡಲಾಗುವುದು ಎಂದು ಹೇಳಿದರು.

ಈ ದೇಶದ ರೈಲಿಗೆ ಪುನರ್ಜನ್ಮ ಸಿಗಬೇಕು ಎಂಬುದು ನಮ್ಮ ಆಗ್ರಹ. ಬದಲಾವಣೆ ತರದೇ ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಗೇಜ್ ಪರಿವರ್ತನೆ, ಡಬ್ಲಿಂಗ್ ಗೆ ಟೈಮ್ ಫಿಕ್ಸ್ ಮಾಡಲಾಗಿದೆ. ರೈಲ್ವೆ ಇಲಾಖೆಯಲ್ಲಿ 8.50 ಲಕ್ಷ ಹೂಡಿಕೆಗೆ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಜನರೇ ನಮಗೆ ದೊಡ್ಡ ಆಸ್ತಿ. ಪ್ಯಾಸೆಂಜರ್ ರೈಲುಗಳ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೈಲು ನಿಲ್ದಾಣಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಆಧುನಿಕರಣಕ್ಕಾಗಿ ಖಾಸಗಿ ವಲಯ ದರವನ್ನು ಆಹ್ವಾನಿಸಲಾಗುವುದು. ರೈಲ್ವೆ ಅಭಿವೃದ್ಧಿಗಾಗಿ ನಾಲ್ಕು ಪ್ರಮುಖ ಗುರಿ ಹೊಂದಲಾಗಿದೆ ಅವುಗಳೆಂದರೆ- ಸಾಮರ್ಥ್ಯದ ವಿಸ್ತರಣೆ, ಗ್ರಾಹಕರಿಗೆ ಉತ್ತಮ ಸೇವೆ. ಅನುಭವದ ಸದ್ಬಳಕೆ ಮತ್ತು ರೈಲ್ವೆ ಭದ್ರತೆ.

ಹೂಡಿಕೆಗಾಗಿ ಬ್ಯಾಂಕ್ ಗಳು ಮತ್ತು ನಿವೃತ್ತಿ ಫಂಡ್ ಗಳನ್ನು ಬಳಕೆ ಮಾಡುತ್ತೇವೆ. ಮಹಿಳಾ ಸುರಕ್ಷತೆಗಾಗಿ '182' ಟೋಲ್ ಫ್ರೀ ನಂಬರ್ ಆಕ್ಟಿವೇಟ್ ಮಾಡಲಾಗುವುದು. ಮಹಿಳಾ ಸುರಕ್ಷತೆಗೆ ನಿರ್ಬಯ ಫಂಡ್ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖ ಅಂಶಗಳು-
* ಪ್ರಯಾಣಿಕರು ತಮಗೆ ಬೇಕಾದ ಆಹಾರ ಪಡೆಯಲು ಇ-ಕ್ಯಾಟರಿಂಗ್ ವ್ಯವಸ್ಥೆ.
* ಉತ್ತಮ ಆಡಳಿತ ಮತ್ತು ಪಾರದರ್ಶಕತೆ
* ಸ್ವಚ್ಛ ಶೌಚಾಲಯಗಳ ವ್ಯವಸ್ಥೆ
* ಬಯೋ ಟಾಯ್ಲೆಟ್ ನಿರ್ಮಾಣಕ್ಕೆ ಯೋಜನೆ
* ರೈಲ್ವೆ ಪ್ರಯಾಣ ದರದಲ್ಲಿ ಯಾವುದೇ ರೀತಿ ಏರಿಕೆ ಇಲ್ಲ.
* ವಿವಿಧ ಭಾಷೆಗಳಲ್ಲಿ ಇ-ಟಿಕೆಟ್ ಸೌಲಭ್ಯ.
* ಐಆರ್ ಟಿಸಿ ವೆಬ್ ಸೈಟ್ ನಿಂದ ಆಹಾರಕ್ಕೆ ವ್ಯವಸ್ಥೆ
* ಮಹಿಳಾ ಕೋಚ್ ಗಳಲ್ಲಿ ಸಿಸಿಟಿವಿ ಅಳವಡಿಕೆ
* ಸಂಸದರ ನಿಧಿಯಿಂದ ಧನ ಸಹಾಯವನ್ನು ರೈಲ್ವೇ ಇಲಾಖೆಗೆ ನೀಡಬಹುದು.
* ಮುಂದಿನ 5 ವರ್ಷಗಳಲ್ಲಿ 8.5 ಲಕ್ಷ ಕೋಟಿ ರೂ ಹೂಡಿಕೆ.
* ಹೈಸ್ಪೀಡ್ ರೈಲು ವೇಗ ಮಿತಿ ಹೆಚ್ಚಳಕ್ಕೆ ಕ್ರಮ.
* 120 ದಿನಗಳ ಮೊದಲೇ ರೈಲ್ವೇ ಟಿಕೆಟ್ ಬುಕ್ ಮಾಡಲು ಅವಕಾಶ
* ಹೈಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ, ಮುಂಬೈ ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು
* 400 ರೈಲ್ವೇ ನಿಲ್ದಾಣದಲ್ಲಿ ವೈ-ಫೈ
* ಬೆಂಕಿ ಅವಘಡ ಸಂಭವಿಸಿದರೆ ಪ್ರಯಾಣಿಕರಿಗೆ ಮಾಹಿತಿ ನೀಡಲು ವಾರ್ನಿಂಗ್ ವ್ಯವಸ್ಥೆ ಜಾರಿಗೆ
* 6608 ಕಿ.ಮಿ ರೈಲ್ವೇ ಮಾರ್ಗ ವಿದ್ಯುತೀಕರಣಕ್ಕೆ ಕ್ರಮ
* ನಾಲ್ಕು ನಗರದಲ್ಲಿ ರೈಲ್ವೇ ಸಂಶೋಧನಾ ಕೇಂದ್ರ ಸ್ಥಾಪನೆ
* ಚಲಿಸುತ್ತಿರುವ ರೈಲಿನಲ್ಲಿ ಖಾಲಿ ಇರುವ ಸೀಟುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲು ಕ್ರಮ
* ಕಡಿಮೆ ದರದಲ್ಲಿ ಕುಡಿಯುವ ನೀರು ಪೂರೈಕೆ
* ಬಿ ಕೆಟಗರಿ ರೈಲ್ವೆ ನಿಲ್ದಾಣಗಳಲ್ಲಿ ವೈ ಫೈ ಸೌಕರ್ಯ ಒದಗಣೆ. ಮಹಿಳಾ ಕೋಚ್ ಗಳಲ್ಲಿ ಸಿಸಿಟಿವಿ ಅಳವಡಿಕೆ.
* ಅಶಕ್ತರಿಗೆ, ವೃದ್ಧರಿಗಾಗಿ ಆಲ್ ಲೈನ್ ನಲ್ಲೇ ವೀಲ್ ಚೇರ್ ಬುಕ್ಕಿಂಗ್ ಮಾಡಬಹುದು. * ಅಂಧರಿಗೆ ಸಹಾಯಕವಾಗಲು ರೈಲ್ವೆ ಇಲಾಖೆಯಿಂದ ಬ್ರೈಲ್ ಲಿಪಿ ಯೋಜನೆ ಜಾರಿ.
* ಆಯ್ದ ರೈಲು ನಿಲ್ದಾಣಗಳಲ್ಲಿ ಸೆಟಲೈಟ್ ಸ್ಷೇಶನ್ ನಿರ್ಮಾಣಕ್ಕೆ ಆದ್ಯತೆ
* ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಳ.

* ರೈಲ್ ಕಂ ರೋಡ್ ಟಿಕೆಟ್ ಸೌಕರ್ಯ ಹಲವು ಸ್ಷೇಶನ್ ಗಳಿಗೆ ವಿಸ್ತರಣೆ. ಕೆಲವೇ ತಿಂಗಳಲ್ಲಿ ಹೊಸ ಸೌರವಿದ್ಯುತ್ ಘಟಕ ಸ್ಥಾಪನೆ
* ಜಾಹೀರಾತುಗಳಿಂದ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ. ರೈಲ್ವೆ ಸಿಬ್ಬಂದಿಗಳಿಗಾಗಿ ಪೂರ್ಣ ಪ್ರಮಾಣದ ವಿವಿ ಸ್ಥಾಪನೆ
* ಅಪಘಾತಗಳ ತಡೆಗೆ ಐದು ವರ್ಷಗಳ ಸುರಕ್ಷತಾ ಯೋಜನೆ. ನಾಲ್ಕು ಫ್ರೈಟ್ ಕಾರಿಡಾರ್ ಗಳ ನಿರ್ಮಾಣ ಈ ವರ್ಷವೇ ಪೂರ್ಣ. 9,420 ಕಿ.ಮೀ. ರೈಲ್ವೆ ಮಾರ್ಗದ ಸಾಮರ್ಥ್ಯ ವೃದ್ದಿಗೆ 96,182 ಕೋಟಿ ರೂ. ಯೋಜನೆ

* ಅರುಣಾಚಲ ಪ್ರದೇಶದಿಂದ ದೆಹಲಿಗೆ ನೇರ ರೈಲು ಸಂಪರ್ಕ. 6,608 ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ
* ರೈಲುಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ವಾರ್ನಿಂಗ್ ಸಿಸ್ಷಮ್ ಅಳವಡಿಸಲಾಗುವುದು
* ರೈಲ್ವೆ ಆಸ್ತಿಗಳ ಮಾರಾಟಕ್ಕೆ ಬದಲಾಗಿ. ಅವುಗಳಿಂದ ಆದಾಯ ಗಳಿಸಲು ಆದ್ಯತೆ.
* ಬೋಗಿಗಳಲ್ಲೇ ವಾರ್ನಿಂಗ್ ಸಿಸ್ಟಮ್ ಅಳವಡಿಕೆ. ಖಾಲಿ ಸೀಟುಗಳ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು
* ಆರು ಸಾವಿರ ಕಿಲೋ ಮೀಟರ್ ವಿದ್ಯುತ್ ಚಾಲಿತ ಮಾರ್ಗ
* 4 ನಗರಗಳಲ್ಲಿ ರೈಲ್ವೆ ಸಂಶೋಧನಾ ಕೇಂದ್ರ ಸ್ಥಾಪನೆ
* ದೆಹಲಿ ಕೋಲ್ಕತಾ, ದೆಹಲಿ ಮುಂಬೈ ನಡುವೆ ಹೈಸ್ಪೀಡ್ ರೈಲು. ಈ ಬಗ್ಗೆ ಮೂರು ತಿಂಗಳಲ್ಲಿ ವರದಿ ನೀಡಲಾಗುವು.ಹೈಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ

* ರೈತರಿಗಾಗಿ ನಿಲ್ದಾಣಗಳಲ್ಲಿ ಕಾರ್ಗೋ ಸೆಂಟರ್ ನಿರ್ಮಾಣ. ಹೈಸ್ಪೀಡ್ ರೈಲುಗಳ ವೇಗ ಗಂಟೆಗೆ 160 ಕಿ.ಮೀ.ನಿಂದ 200 ಕಿ.ಮೀಗೆ ಹೆಚ್ಚಳ
* ಎಸ್ಎಂಎಸ್ ನಲ್ಲಿ ರೈಲಿನ ಆಗಮನ, ನಿರ್ಗಮನ ಮಾಹಿತಿ. ಹೈ ಸ್ಪೀಡ್ ರೈಲುಗಳ ಸಂಖ್ಯೆ ಹೆಚ್ಚಳ. 9 ಮಾರ್ಗಗಳಲ್ಲಿ ರೈಲಿನ ವೇಗ 200 ಕಿ.ಮೀಗೆ ಹೆಚ್ಚಳ

* ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮೆಷಿನ್ ವ್ಯವಸ್ಥೆ. ಮುಂಬೈ ಅಹಮದಾಬಾದ್ ನಡುವೆ ಹೈಸ್ಪೀಡ್ ರೈಲು
* ಗರ್ಭಿಣಿಯರಿಗೆ ಲೋವರ್ ಬರ್ತ್ ನಲ್ಲೇ ಸೀಟು ನೀಡುವ ವ್ಯವಸ್ಥೆ. ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಬಹಿರಂಗ ಬಿಡ್

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited