Untitled Document
Sign Up | Login    
Gadgets

Canvas Turbo Mini

Prev

Canvas Turbo Mini

Next

ಕ್ಯಾನ್ವಾಸ್ ಟರ್ಬೊ ಮಿನಿ ಮೊಬೈಲ್ ಫೋನನ್ನು ಕೊನೆಗೂ ಮೈಕ್ರೋ ಮ್ಯಾಕ್ಸ್ ತನ್ನ ವೆಬ್ ಸೈಟ್ ಮೂಲಕ ಗ್ರಾಹಕರಿಗೆ ಪರಿಚಯಿಸಿದೆ. ಇದರ ಮಾರುಕಟ್ಟೆ ದರ ಎಷ್ಟೆಂದು ಬಹಿರಂಗಪಡಿಸಿಲ್ಲವಾದರೂ 14,490 ರೂ.ಗಳ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಆನ್ ಲೈನ್ ಮಾರುಕಟ್ಟೆಯಲ್ಲಿ ಇದನ್ನು ಖರೀದಿಸಿದರೆ 3-4 ಬಿಸಿನೆಸ್ ದಿನಗಳ ಅವಧಿಯಲ್ಲಾಗಿ ಗ್ರಾಹಕರಿಗೆ ತಲುಪಿಸುವುದಾಗಿ ರಿಟೇಲ್ ಮಾರಾಟಗಾರರು ಸ್ಪಷ್ಟಪಡಿಸಿದ್ದಾರೆ. ಇದು ಇನ್ನೂ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ.

ಮೈಕ್ರೋಮ್ಯಾಕ್ಸ್ ಕಂಪನಿಯ ಫುಲ್ ಎಚ್ಡಿ ಡಿಸ್ ಪ್ಲೇ ಹೊಂದಿದ ಮೊದಲ ಫೋನ್ ಎಂಬುದು ಟರ್ಬೊ ಫೋನಿನ ವಿಶೇಷತೆ. ಇದನ್ನು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದರ ಮಿನಿ ವರ್ಷನ್ ಕ್ಯಾನ್ವಾಸ್ ಮಿನಿ ಟರ್ಬೊ(A200). ಇದು ಡ್ಯುಯೆಲ್ ಸಿಮ್ ಫೋನ್ ಆಗಿದ್ದು, ಆಂಡ್ರಾಯ್ದ್ 4.2 ಜೆಲ್ಲಿ ಬೀನ್ ಮೂಲಕ ಕಾರ್ಯಾಚರಿಸು್ತದೆ. 4.7 ಇಂಚು ಎಚ್ ಡಿ ಐಪಿಎಸ್ ಡಿಸ್ ಪ್ಲೇ ಹೊಂದಿದ್ದು, 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ MT6582 ಪ್ರೊಸೆಸರ್ ಮತ್ತು ಒಂದು ಜಿಬಿ ರಾಮ್ ಹೊಂದಿದೆ. 4ಜಿಬಿ ಇನ್ಬಿಲ್ಟ್ ಸ್ಟೋರೇಜ್ ಸಾಮರ್ಥ್ಯವನ್ನೂ ಒಳಗೊಂಡಿದೆ. 8 ಮೆಗಾ ಪಿಕ್ಸೆಲ್ ಕ್ಯಾಮರಾ, ಎಲ್ಇಡಿ ಫ್ಲ್ಯಾಶ್, ಮುಂಭಾಗದಲ್ಲಿ 5 ಮೆಗಾ ಪಿಕ್ಸೆಲ್ ಕ್ಯಾಮರಾ ಕೂಡಾ ಇದೆ.


     Next

Canvas Turbo Mini

Prev

turbo mini

Next

Display 4.69-inch
Processor 1.3GHz
Front Camera 5-megapixel
Resolution 720x1280 pixels
RAM 1MB
OS Android 4.2
Storage 4GB
Rear Camera 8-megapixel
Battery capacity 1800mAh


     Next

Share this page :  

© bangalorewaves. All rights reserved. Developed And Managed by Rishi Systems P. Limited