Untitled Document
Sign Up | Login    
Gadgets

Mobile Zone

Prev

ಮೊಬೈಲ್ ಫೋನ್

Next

ಭಾರತೀಯ ಮಾರುಕಟ್ಟೆಯಲ್ಲಿ 2013ರಲ್ಲಿ 68 ಬ್ರ್ಯಾಂಡ್ ಗಳ 957 ಮಾಡೆಲ್ ಫೋನ್ ಬಿಡುಗಡೆ ಭಾಗ್ಯ ಕಂಡಿದೆ. ಹೌದು.. 2013ರಲ್ಲಿ ದಿನವೊಂದರ ಸರಾಸರಿ 3 ಹೊಚ್ಚ ಹೊಸ ಮಾದರಿಯ ಮೊಬೈಲ್ ಫೋನ್ ಬಿಡುಗಡೆಯಾಗಿದೆ !
ವಿಶೇಷ ಅಂದರೆ ಭಾರತೀಯ ಮಾರುಕಟ್ಟೆಯಲ್ಲಿರುವ 68 ಬ್ರ್ಯಾಂಡ್ ಗಳ ಪೈಕಿ 48 ಕೂಡಾ ಅಚ್ಚ ಭಾರತೀಯ ಬ್ರ್ಯಾಂಡ್ ಗಳೇ ಆಗಿವೆ. ಶೇಕಡ 68ರಷ್ಟು ಮಾಡೆಲ್ ಗಳು ಭಾರತೀಯ ಕಂಪನಿಗಳದ್ದೇ ಆಗಿದ್ದು, ಮಾರಾಟದಲ್ಲೂ ಅವೇ ಮುಂಚೂಣಿಯಲ್ಲಿವೆ. 2012ರಲ್ಲಿ ಒಟ್ಟು 515 ಮಾದರಿಯ ಫೋನ್ ಗಳಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದವು. ಇದರಲ್ಲಿ ಶೇಕಡ 60ರಷ್ಟು ಭಾರತೀಯ ಬ್ರ್ಯಾಂಡ್ ಗಳ ಫೋನ್ ಗಳಿದ್ದವು. ಈ ವಿಷಯ 91ಮೊಬೈಲ್ಸ್ ಕಂಪನಿ ಸಿದ್ಧಪಡಿಸಿದ ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿದೆ.

ಭಾರತೀಯರ ಒಲವು: ಮೊಬೈಲ್ ಫೋನ್ ವಿಚಾರಕ್ಕೆ ಬಂದರೆ ಭಾರತೀಯ ಒಲವು ಅವುಗಳ ದರವನ್ನಾಧರಿಸಿಯೇ ಇದೆ ಎಂಬುದೂ ಅಧ್ಯಯನದಲ್ಲಿ ದೃಢಪಟ್ಟಿದೆ. ಇದರಂತೆ, ಹೊಸ ಮಾದರಿಯ ಫೋನ್ ಗಳೂ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಕಳೆದ ವರ್ಷ ಬಿಡುಗಡೆಯಾದ ಮಾಡೆಲ್ ಗಳ ಪೈಕಿ ಡ್ಯುಯೆಲ್ ಸಿಮ್ ಮಾಡೆಲ್ ಗಳ ಸಂಖ್ಯೆ 534, 3ಜಿ ಅಳವಡಿಸಿ ಮಾಡೆಲ್ ಗಳ ಸಂಖ್ಯೆ 385. ಸರಾಸರಿ ಲೆಕ್ಕಾಚಾರಕ್ಕೆ ಇಳಿದರೆ ಒಟ್ಟು ಬಿಡುಗಡೆಯಾದ ಮೊಬೈಲ್ ಮಾಡೆಲ್ ಗಳ ಪೈಕಿ ಭಾರತೀಯ ಕಂಪನಿಗಳು ಬಿಡುಗಡೆ ಮಾಡಿದ ಮಾಡೆಲ್ ಗಳ ಪಾಲು 68%, ಅಂತಾರಾಷ್ಟ್ರೀಯ ಕಂಪನಿಗಳು ಬಿಡುಗಡೆ ಮಾಡಿದ ಮಾಡೆಲ್ ಗಳ ಪಾಲು 32%.

ಇನ್ನು ದರದ ಲೆಕ್ಕಾಚಾರ ಆಧರಿಸಿ ಹೇಳುವುದಾದರೆ, 2000 ರೂ. ದರಕ್ಕಿಂತ ಕಡಿಮೆ ದರ ಮೊಬೈಲ್ ಮಾಡೆಲ್ ಗಳ ಪಾಲು 29%, 2000-5000 ರೂ. ನಡುವಿನ ದರದ ಮಾಡೆಲ್ ಗಳ ಪಾಲು 22%, 5000-15000 ರೂ. ದರದ ನಡುವಿನ ಮಾಡೆಲ್ ಗಳ ಪಾಲು 38%, 15000-25000 ರೂ. ದರ ನಡುವಿನ ಮಾಡೆಲ್ ಗಳ ಪಾಲು 6% ಮತ್ತು 25000 ರೂ. ಮೇಲ್ಪಟ್ಟ ಮಾಡೆಲ್ ಗಳ ಪಾಲು 5% ಇದ್ದವು.

ಅದೇ ರೀತಿ, ಟಾಪ್ 10 ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಭಾರತೀಯ ಕಂಪನಿಗಳಾದ ಇಂಟೆಕ್, ಕಾರ್ಬನ್ ಮುಂಚೂಣಿಯಲ್ಲಿದ್ದು ತಲಾ 65 ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದವು. ಉಳಿದಂತೆ, ಲಾವಾ+ಕ್ಸೋಲೊ 63, ಮೈಕ್ರೋಮ್ಯಾಕ್ಸ್ 59, ಸೆಲ್ಕಾನ್ 57, ಮ್ಯಾಕ್ಸ್ 54, ವಿಡಿಯೋಕಾನ್ 36, ಲೆಮನ್ ಮೊಬೈಲ್ಸ್ 34, ಸ್ಯಾಮ್ ಸಂಗ್ ಮತ್ತು ಸ್ಪೈಸ್ ತಲಾ 33 ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದವು. ಅಚ್ಚರಿ ವಿಷಯ ಎಂದರೆ, ಟಾಪ್ 10 ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಬ್ರ್ಯಾಂಡ್ ಎಂದು ಇರುವುದು ಸ್ಯಾಮ್ ಸಂಗ್ ಒಂದೇ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.


     Next

Share this page :  

© bangalorewaves. All rights reserved. Developed And Managed by Rishi Systems P. Limited