Untitled Document
Sign Up | Login    
Gadgets

Samsung Galaxy S Duos 2

Prev

Samsung Galaxy S Duos 2

Next

ಮೊಬೈಲ್ ಕ್ಷೇತ್ರದ ಮುಂಚೂಣಿ ಕಂಪನಿ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ಎಸ್‌ ಡ್ಯುಯೋಸ್‌ 2 ಮೊಬೈಲ್‌ ಫೋನನ್ನು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಬಜೆಟ್ ಆಂಡ್ರಾಯ್ಡ್‌ ಸ್ಮಾರ್ಟ್‌ ಫೋನ್ ಎಂದೇ ಬಿಂಬಿಸಲ್ಪಟ್ಟಿದ್ದು ಕಂಪನಿಯ ಆನ್‌ಲೈನ್‌ ಸ್ಟೋರ್‍ನಲ್ಲಿ ನವೆಂಬರ್‌ ತಿಂಗಳಿನಲ್ಲೇ ಕಾಣಿಸಿಕೊಂಡಿತ್ತು. ಆದಾಗ್ಯೂ, ಮಾರುಕಟ್ಟೆಯಲ್ಲಿ ಈ ಮೊಬೈಲ್‌ನ ಲಭ್ಯತೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆನ್‌ಲೈನ್‌ ಸ್ಟೋರ್‌ನಲ್ಲಿ ಫೋನ್‌ ಮೇಲೆ ಕ್ಲಿಕ್ ಮಾಡಿದರೆ "ನೋಟಿಫೈ ಮಿ' ಎಂಬ ಆಯ್ಕೆ ಗ್ರಾಹಕರ ಎದುರು ಕಾಣಿಸುತ್ತಿತ್ತು. ಇದರ ಬೆಲೆ 10990 ರೂಪಾಯಿ.
ಅಂದ ಹಾಗೆ ಈ ಗ್ಯಾಲಕ್ಸಿ ಎಸ್‌ ಡ್ಯುಯೋಸ್‌ 2 ಫೋನ್‌ ಗ್ಯಾಲಕ್ಸಿ ಎಸ್‌ ಡ್ಯುಯೋಸ್‌ನ ಸುಧಾರಿತ ಮಾದರಿಯಾಗಿದೆ. ಗ್ಯಾಲಕ್ಸಿ ಎಸ್ ಡ್ಯುಯೋಸ್‌ ಫೋನನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಿದ್ದು 17900 ರೂ. ದರ ನಿಗದಿ ಮಾಡಿದೆ.
ಸುಧಾರಿತ ಗ್ಯಾಲಕ್ಸಿ ಎಸ್‌ ಡ್ಯುಯೋಸ್‌ 2 ಫೋನಿನ ವಿಶೇಷತೆ ಏನೆಂದರೆ, ಇದು ಭಾರತದ ಕನ್ನಡ, ಅಸ್ಸಾಮೀಸ್‌, ಬೆಂಗಾಲಿ, ಗುಜರಾತಿ, ಹಿಂದಿ,ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಸೇರಿದಂತೆ 10 ಪ್ರಾದೇಶಿಕ ಭಾಷೆಗಳನ್ನು ಇದರಲ್ಲಿ ಬಳಸಬಹುದಾಗಿದೆ. 4 ಇಂಚು ಡಬ್ಲ್ಯುವಿಜಿಎ(480x800) ಟಿಎಫ್‌ಟಿ ಡಿಸ್‌ಪ್ಲೇ ಮತ್ತು 1.2GHz ಡುಯೆಲ್‌ ಕೋರ್‌ ಪ್ರೊಸೆಸರ್‌(ಚಿಪ್‌ಸೆಟ್‌ ಯಾವುದೆಂದು ನಿಖರವಾಗಿ ಬಹಿರಂಗವಾಗಿಲ್ಲ), ಡುಯೆಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ) ಸೌಲಭ್ಯವನ್ನು ಹೊಂದಿದೆ. ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಮೂಲಕ ಇದು ಕಾರ್ಯಾಚರಿಸುತ್ತಿದ್ದು, 5 ಮೆಗಾಪಿಕ್ಸೆಲ್‌ ಹಿಂಬದಿ ಕ್ಯಾಮೆರಾ, ವಿಜಿಎ ಮುಂಬದಿ ಕ್ಯಾಮರಾವನ್ನು ಒಳಗೊಂಡಿದೆ. ವೈಫೈ, ಬ್ಲೂಟೂತ್‌, ಇಡಿಜಿಇ, ಜಿಪಿಆರ್‌ಎಸ್‌ ಮತ್ತು 3 ಜಿಯನ್ನು ಸಪೋರ್ಟ್‌ ಮಾಡುತ್ತದೆ.


     Next

Samsung Galaxy S Duos 2

Prev

samsung Galaxy s duos 2

Next

4-inch WVGA (480x800) TFT display
1.2GHz dual-core processor (unspecified chipset)
768MB of RAM
4GB inbuilt storage, expandable up to 64GB via microSD card
5-megapixel rear camera with LED flash
VGA front-facing camera
Dual-SIM (GSM+GSM)
Android 4.2 Jelly Bean with TouchWiz UI
Wi-Fi, Bluetooth, EDGE, GPRS and 3G
1500mAh battery
121.5x63.1x10.57mm


     Next

Share this page :  

© bangalorewaves. All rights reserved. Developed And Managed by Rishi Systems P. Limited