Untitled Document
Sign Up | Login    
Gadgets

Facebook close to acquiring Bangalore based company

Prev

little eye labs webpage

Next

ಬೆಂಗಳೂರಿನ ಆಪ್ ಟೆಸ್ಟಿಂಗ್ ಕ್ಷೇತ್ರದ ಉದಯೋನ್ಮುಖ ಸಂಸ್ಥೆ ಲಿಟ್ಲ್ ಐ ಲ್ಯಾಬ್ಸ್. ಅಮೆರಿಕ ಮೂಲದ ಬೃಹತ್‌ ಸಾಮಾಜಿಕ ಜಾಲತಾಣ ಈ ಸಂಸ್ಥೆಯನ್ನು ಖರೀದಿಸಲು ಮುಂದಾಗಿದ್ದು, ಮಾತುಕತೆಗಳು ನಡೆದಿವೆ.
ಮೊಬೈಲ್‌ ಆಪ್‌ ವಿಶ್ಲೇಷಣೆ ಉಪಕರಣ ಮತ್ತು ತಪಾಸಣಾ ಉಪಕರಣಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಲಿಟ್ಲ್ ಐ ಲ್ಯಾಬ್ಸ್ ಮಾಡುತ್ತಿದೆ. ಈ ಉಪಕರಣಗಳು ಆಪ್‌ಗಳ ಒಟ್ಟಾರೆ ಗುಣ, ಅದರ ಕಾರ್ಯವೈಖರಿ ಇತ್ಯಾದಿಗಳನ್ನು ವಿಶ್ಲೇಷಿಸುತ್ತದೆ. ಇದಕ್ಕೆ ಆಪ್‌ ಇಂಡಸ್ಟ್ರಿಯಿಂದ ಉತ್ತಮ ಪ್ರತಿಕ್ರಿಯೆಯೂ ಇತ್ತು. ಜೈದೀಪ್‌ ಮಿರ್‌ಚಂದಾನಿ ಮತ್ತು ಬ್ರಿಜ್‌ ಭಾಸಿನ್‌ ಮಾರ್ಗದರ್ಶನದಲ್ಲಿ ಎಂಟು ಯುವಕರು 1996ರಲ್ಲಿ ಆರಂಭಿಸಿದ ಸಂಸ್ಥೆ ಇದು.
ಐಸ್ಪಿರಿಟ್‌(ಇಂಡಿಯನ್‌ ಸಾಫ್ಟ್‌ವೇರ್‌ ಪ್ರಾಡಕ್ಟ್ಸ್‌ ಇಂಡಸ್ಟ್ರಿ ರೌಂಡ್ ಟೇಬಲ್‌) ಮೂಲಕ ಲಿಟ್ಲ್‌ ಐ ಲ್ಯಾಬ್ಸ್‌ ಖರೀದಿಗೆ ಫೇಸ್‌ಬುಕ್‌ ಮಾತುಕತೆ ನಡೆಸಿದ್ದು, ಯಶಸ್ವಿಯಾದರೆ ಫೇಸ್‌ಬುಕ್‌ ಸಂಸ್ಥೆ ಖರೀದಿಸಲಿರುವ ಮೊದಲ ಸಂಸ್ಥೆ ಲಿಟ್ಲ್ ಐ ಲ್ಯಾಬ್ ಆಗಲಿದೆ ಎಂದು ಕೆಲ ಮಾಧ್ಯಮ ವರದಿಗಳು ತಿಳಿಸಿವೆ.


     Next

Share this page :  

© bangalorewaves. All rights reserved. Developed And Managed by Rishi Systems P. Limited