Untitled Document
Sign Up | Login    
Gadgets

ಅಸುಸ್ ಝೆನ್ ಫೋನ್ ಸರಣಿ ಶೀಘ್ರ ಮಾರುಕಟ್ಟೆಗೆ

Prev

ಝೆನ್ ಫೋನ್ 5

Next

ಡೆಸ್ಕ್ ಟಾಪ್, ಲ್ಯಾಪ್ ಟಾಪ್ ತಯಾರಿಕಾ ಕಂಪನಿ ಅಸುಸ್ ಇದೀಗ ಸ್ಮಾರ್ಟ್ ಫೋನ್ ಮಾರುಕಟ್ಟೆಗೂ ಪ್ರವೇಶ ಮಾಡಿದೆ. ಈ ವರ್ಷಾರಂಭದಲ್ಲಿ ಇದನ್ನು ಘೋಷಿಸಿದ್ದ ಕಂಪನಿ ಝೆನ್ ಫೋನ್ ಸರಣಿಯ ಝೆನ್ ಫೋನ್ 4, ಝೆನ್ ಫೋನ್ 5, ಝೆನ್ ಫೋನ್ 6 ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಜುಲೈ 9ರಂದು ಇವುಗಳ ಬಿಡುಗಡೆ ನಡೆಯಲಿದೆ.

ಇವುಗಳ ಬಿಡುಗಡೆಗೂ ಮೊದಲೇ ಝೆನ್ ಫೋನ್ 5ರ ಮಾದರಿಯ ಚಿತ್ರ ಹಾಗೂ ವಿಶೇಷತೆಗಳು ಬಹಿರಂಗಗೊಂಡಿವೆ. ಇದನ್ನು ಎನ್ಡಿಟಿವಿ ಗ್ಯಾಜೆಟ್ ವರದಿ ಮಾಡಿದೆ. ಕೇವಲ 145 ಗ್ರಾಂ ತೂಕದ ಈ ಫೋನ್ 148.2x72.8x10.34mm ಗಾತ್ರದ್ದಾಗಿದೆ. 5 ಇಂಚಿನ ಸ್ಕ್ರೀನ್ ಹೊಂದಿದ್ದು, ಇದು IPS HD (720x1280 pixels) ಸಾಮರ್ಥ್ಯದ್ದಾಗಿದೆ. ಇದಕ್ಕೆ ಕೋರ್ನಿಂಗ್ ಗೊರಿಲ್ಲಾ ಗ್ಲಾಸ್ 3ರ ರಕ್ಷಣೆಯೂ ಇದೆ.

ಚಾರ್ಕೋಲ್ ಬ್ಲ್ಯಾಕ್, ಪರ್ಲ್ ವೈಟ್, ಚೆರ್ರಿ ರೆಡ್, ಟ್ವಿಲೈಟ್ ಪರ್ಪಲ್, ಚಾಂಪಗ್ನೆ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿದೆ. ಮೈಕ್ರೋ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಕೆಳಭಾಗದಲ್ಲೂ, 3.5 ಎಂಎಂ ಅಡಿಯೋ ಪೋರ್ಟ್ ಮೇಲ್ಭಾಗದಲ್ಲೂ ಅಳವಡಿಸಲಾಗಿದೆ. ಇದರ ಬೆಲೆ 10000- 15000 ರೂ.ಗಳ ಆಸುಪಾಸಿನಲ್ಲಿರಬಹುದು.

KEY SPECS

Display 5.00-inch
Processor 1.6GHz
Front Camera 2-megapixel
Resolution 720x1280 pixels
RAM 2GB
OS Android 4.3
Storage 8GB
Rear Camera 8-megapixel
Battery capacity 2110mAh


     Next

Share this page :  

© bangalorewaves. All rights reserved. Developed And Managed by Rishi Systems P. Limited