Untitled Document
Sign Up | Login    
Gadgets

ಅಮೆಜಾನ್ 3ಡಿ ಸ್ಮಾರ್ಟ್ ಫೋನ್ 18ಕ್ಕೆ ಲಾಂಚ್

Prev

ಅಮೆಜಾನ್ 3ಡಿ ಫೋನ್ ಹೀಗರಬಹುದಾ?

Next

ಜಗತ್ತಿನಾದ್ಯಂತ ಕುತೂಹಲ ಕೆರಳಿಸಿರುವ ಸ್ಮಾರ್ಟ್ ಫೋನ್ ಇದು. ಅಮೆಜಾನ್ ಬಿಡುಗಡೆ ಮಾಡಿರುವ ಟೀಸರ್ ಕೂಡಾ ಈ 3ಡಿ ಫೋನ್ ಹೇಗಿರಬಹುದೆಂಬ ಚಿಂತನೆಗೆ ಹಚ್ಚಿದೆ. ಎನಿಹೌ ಜೂನ್ 18ಕ್ಕೆ ಎಲ್ಲ ಕುತೂಹಲಗಳು ತಣಿಯಲಿವೆ.
ಯಾವುದೇ ರೀತಿಯ ಮಾಹಿತಿಯನ್ನು ಅಥವಾ ಹಿಂಟ್ ಬಿಟ್ಟುಕೊಡದೇ ಭಾರಿ ಕುತೂಹಲ ಕಾಪಾಡುವಲ್ಲಿ ಅಮೆಜಾನ್ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ, 3ಡಿ ಕನ್ನಡಕ ಧರಿಸದೇ ನೋಡಬಹುದಾದ ಫೋನ್ ಇದಾಗಿದೆ. ಬಹಳ ವರ್ಷಗಳ ಸಂಶೋಧನೆ ಬಳಿಕ ಈ ಫೋನ್ ಸಿದ್ಧಪಡಿಸಿರುವ ಅಮೆಜಾನ್ ಸ್ಮಾರ್ಟ್ ಫೋನ್ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸುವ ನಿರೀಕ್ಷೆ ಇದೆ.
ಈ 3ಡಿ ಸ್ಮಾರ್ಟ್ ಫೋನ್ನೊಂದಿಗೆ ಅಮೆಜಾನ್ ಸ್ಮಾರ್ಟ್ ಫೋನ್ ಕ್ಷೇತ್ರಕ್ಕೆ ಕಾಲಿರಿಸುತ್ತಿದೆ. ಬಿಜಿಆರ್ ಎಂಬ ತಾಣ ಅಮೆಜಾನ್ 3ಡಿ ಫೋನ್ ನ ಚಿತ್ರವನ್ನು ಬಹಿರಂಗಪಡಿಸಿದೆ. ಅದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನೂ ಒದಗಿಸಿದೆ. ಆದರೆ, ಅಮೆಜಾನ್ ಕಡೆಯಿಂದ ಒಂದು ಟೀಸರ್ ಬಂದಿರುವುದು ಬಿಟ್ಟರೆ ಬೇರಾವ ಗುಟ್ಟು ಬಹಿರಂಗವಾಗಿಲ್ಲ.


     Next

Share this page :  

© bangalorewaves. All rights reserved. Developed And Managed by Rishi Systems P. Limited