Untitled Document
Sign Up | Login    
Gadgets

Both Side Transparent Touch Screen Mobile

Prev

Graphic image of touch screen mobile

Next

ಗ್ರಾಹಕ ಸಂತೃಪ್ತಿಗೆ ಪ್ರಾಮುಖ್ಯತೆ ಕೊಡುವ ಮೊಬೈಲ್ ಫೋನ್‌ ಕ್ಷೇತ್ರದಲ್ಲಿ ಸಂಶೋಧನೆ ನಿರಂತರ. ಇತ್ತೀಚೆಗಷ್ಟೇ ಒಂದು ಕಂಪನಿ ಪಾರದರ್ಶಕ ಮೊಬೈಲ್ ತಯಾರಿಸಿ ಗ್ರಾಹಕ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಪಾರದರ್ಶಕ ಮೊಬೈಲ್‌ಗಳ ಗುಣಮಟ್ಟ ಸುಧಾರಿಸುವ ಕಡೆಗೂ ಗಮನಹರಿಸಿವೆ. ಮೊಬೈಲ್ ಕ್ಷೇತ್ರದ ದಿಗ್ಗಜ ಸಂಸ್ಥೆ ಸ್ಯಾಮ್‌ಸಂಗ್‌ ಪಾರದರ್ಶಕ ಮೊಬೈಲ್‌ನ ಇಬ್ಬದಿಗಳಲ್ಲೂ ಟಚ್‌ ಸ್ಕ್ರೀನ್ ಅಳವಡಿಸುವ ಮೂಲಕ ಒಂದು ಹೆಜ್ಜೆ ಮುಂದಿರಿಸಿದೆ.

ಏನು ಈ ಫೋನ್ ವಿಶೇಷತೆ: ಶುಭ್ರವಾದ ಡಿಸ್‌ಪ್ಲೇ ಇರುವ ಕಾರಣ ಬಳಕೆದಾರರು ಸುಲಭವಾಗಿ ಫೋನಿನ ಕಾರ್ಯಗಳನ್ನು ನಿಯಂತ್ರಿಸಬಹುದು. ಇದೇ ತಂತ್ರಜ್ಞಾನವನ್ನು ವಿಡಿಯೋ ಪ್ಲೇಬ್ಯಾಕ್ ಮತ್ತು ಗೇಮಿಂಗ್‌ಗಳಲ್ಲೂ ಬಳಸಬಹುದಾಗಿದೆ. ಈ ಮೊಬೈಲ್‌ ಫೋನ್‌ ಈಗಿನ್ನೂ ಸಂಶೋಧನೆ ಮತ್ತು ಅಭಿವೃದ್ಧಿ ಹಂತದಲ್ಲಿದ್ದು ಮಾರುಕಟ್ಟೆಗೆ ಬರಲು ಇನ್ನಷ್ಟು ವರ್ಷಗಳು ಕಾಯಬೇಕಾಗಬಹುದು.

ಈ ಮೊಬೈಲ್‌ ಫೋನ್‌ ಚಿತ್ರಗಳನ್ನು ಅಮೆರಿಕದಲ್ಲಿ ಬಿಡುಗಡೆಮಾಡಲಾಗಿದ್ದು, ಸ್ಯಾಮ್‌ಸಂಗ್ ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ಎರಡೂ ಬದಿ ಟಚ್‌ ಸ್ಕ್ರೀನ್ ಇರುವ ಕಾರಣ ಬಳಕೆದಾರರು ಸುಲಭವಾಗಿ ಮುಂಬದಿ ಅಥವಾ ಹಿಂಬದಿಯಿಂದ ತಮಗೆ ಬೇಕಾದ ಐಕಾನ್‌ ಟಚ್‌ ಮಾಡಿ ಫೋನಿನ ಕಾರ್ಯ ನಿರ್ವಹಿಸಬಹುದಾಗಿದೆ. ವಿಡಿಯೋವನ್ನು ಮುಂದೋಡಿಸುವುದು ಅಥವಾ ಹಿಂದೋಡಿಸುವುದನ್ನು ಹಿಂಬದಿಯಿಂದ ಮಾಡಬಹುದು. ಇದರಿಂದ ಅವರ ವೀಕ್ಷಣೆಗೆ ಯಾವುದೇ ಅಡ್ಡಿ ಉಂಟಾಗಲ್ಲ. ಇಂತಹ ಅನೇಕ ಫೀಚರ್‌ಗಳನ್ನು ಅದು ಒಳಗೊಂಡಿದ್ದು ಇನ್ನಷ್ಟು ಗ್ರಾಹಕ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಲು ಸಂಶೋಧನೆ ನಡೆದಿದೆ.


     Next

Share this page :  

© bangalorewaves. All rights reserved. Developed And Managed by Rishi Systems P. Limited