Untitled Document
Sign Up | Login    
Dynamic website and Portals
  

Related News

ಬಿಹಾರ್ ಚುನಾವಣೆಃ ಮಹಾಮೈತ್ರಿಕೂಟ ಮುನ್ನಡೆ

ಬಿಹಾರ್ ಚುನಾವಣೆಯ ಇತ್ತೀಚಿನ ವರದಿ ಬಂದಾಗ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಕೂಟ ಮುನ್ನಡೆ ಸಾಧಿಸಿದೆ. ಮತ ಎಣಿಕೆಯ ಪ್ರಾರಂಭದಲ್ಲಿ ಮುನ್ನಡೆ ಸಾಧಿಸಿದ್ದ ಎನ್ ಡಿ ಎ ಮೈತ್ರಿಕೂಟಕ್ಕೆ ನಂತರ ಹಿನ್ನಡೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಅರ್...

ಕೇಜ್ರಿವಾಲ್ ಗೆ ಪಟ್ನಾ ವಿಮಾನ ನಿಲ್ದಾಣದಲ್ಲಿ ಕಪ್ಪು ಬಾವುಟ ಪ್ರದರ್ಶನ

ಪಟ್ನಾ ವಿಮಾನ ನಿಲ್ದಾಣದಲ್ಲಿ ಗುರುವಾರ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಕೇಜ್ರಿವಾಲ್ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದವರು ತಾವು ಅಣ್ಣಾ ಹಜಾರೆ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಲು...

ಜೆಡಿಯು-ಆರ್.ಜೆ.ಡಿ ಮೈತ್ರಿ ಖಚಿತ: ನಿತೀಶ್ ಕುಮಾರ್ ಸಿಎಂ ಅಭ್ಯರ್ಥಿ

ಮುಂಬರುವ ಬಿಹಾರದ ವಿಧಾನಸಭಾ ಚುನಾವಣೆಯನ್ನು ಜೆಡಿಯು, ಆರ್.ಜೆ.ಡಿ ಮೈತ್ರಿಯಲ್ಲಿ ಎದುರಿಸಲಾಗುವುದು. ಅಲ್ಲದೇ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ ಎಂದು ಎಸ್.ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ. ಈ ಮೂಲಕ ಎರಡೂ ಪಕ್ಷಗಳ ನಡುವೆ ಕಳೆದ ಹಲವು ದಿನಗಳಿಂದ...

ಬಿಹಾರ ವಿಧಾನಸಭಾ ಚುನಾವಣೆ: ಆರ್‌.ಜೆ.ಡಿ, ಜೆಡಿಯು, ಕಾಂಗ್ರೆಸ್ ಒಂದಾಗಿ ಸ್ಪರ್ಧೆ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌.ಜೆ.ಡಿ, ಜೆಡಿಯು ಹಾಗೂ ಕಾಂಗ್ರೆಸ್ ಒಂದಾಗಿ ಬಿಜೆಪಿ ವಿರುದ್ಧ ಸ್ಪರ್ಧಿಸಲಿವೆ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಯಾದವ್,ಕಾಂಗ್ರೆಸ್, ಜೆಡಿಯು, ಆರ್‌.ಜೆ.ಡಿ ಹಾಗೂ ಎನ್‌.ಸಿ.ಪಿ ಸೇರಿದಂತೆ ಇತರೆ ಪಕ್ಷಗಳು ಒಂದಾಗಿ ಚುನಾವಣೆಗೆ ಸ್ಪರ್ಧಿಸಲಿವೆ...

ಪಾರ್ಸೆಲ್ ನಲ್ಲಿ ಬಂದ ಬಾಂಬ್ ಸ್ಫೋಟ: ಓರ್ವ ಬಲಿ

ಬಿಹಾರದ ಗಯಾದ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷರ ಮನೆಗೆ ಪಾರ್ಸೆಲ್‌ ನಲ್ಲಿ ಕಳುಹಿಸಲಾದ ಬಾಂಬ್‌ ಸಿಡಿದು ಮನೆ ಕೆಲಸದಾಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಡಿಯು ಜಿಲ್ಲಾಧ್ಯಕ್ಷ ಅಭಯ್‌ ಕುಶ್ವಾಹ ಅವರ ಮನೆಗೆ ಪಾರ್ಸೆಲ್‌ ಬಂದಿದ್ದು, ಅದನ್ನು ಬೆಳಗ್ಗೆ ಕೆಲಸದಾಳು...

ಜನತಾ ಪರಿವಾರಕ್ಕೆ 'ಸಮಾಜವಾದಿ ಜನತಾಪಕ್ಷ' ಎಂದು ಮರು ನಾಮಕರಣ

'ಬಿಹಾರ'ದಲ್ಲಿ ಬಿಜೆಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇತ್ತ ಜನತಾ ಪರಿವಾರದ ವಿಲೀನ ಪ್ರಕ್ರಿಯೆಯೂ ಚುರುಕುಗೊಂಡಿದೆ. ಆರು ಪಕ್ಷಗಳು ವಿಲೀನಗೊಳ್ಳಲಿರುವ ಹಳೆ ಜನತಾಪರಿವಾರಕ್ಕೆ ಸಮಾಜವಾದಿ ಜನತಾಪಕ್ಷ ಎಂದು ನಾಮಕರಣವಾಗಲಿದ್ದು, ಹೊಸರೂಪ ಪಡೆದಿರುವ ಜನತಾಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಅವರು ಅಧ್ಯಕ್ಷರಾಗಲಿದ್ದಾರೆ. ಸಮಾಜವಾದಿ...

ಶೂನ್ಯದೊಂದಿಗೆ ಸೇರಿದರೆ ಶೂನ್ಯವೇ ಪ್ರಾಪ್ತಿ: ಲಾಲೂ, ನಿತೀಶ್ ಬಗ್ಗೆ ಅಮಿತ್ ಶಾ ವ್ಯಂಗ್ಯ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್.ಜೆ.ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶೂನ್ಯದೊಂದಿಗೆ ಬೆರೆತರೆ ಶೂನ್ಯವೇ ಪ್ರಾಪ್ತಿಯಾಗಲಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಏ.14ರಂದು ನಡೆದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ...

ಜನತಾ ಪರಿವಾರ ಒಗ್ಗೂಡುವ ಸಾಧ್ಯತೆ ನಿಚ್ಚಳ: ಪರಿವಾರದೊಂದಿಗೆ ವಿಲೀನಕ್ಕೆ ಜೆಡಿಯು ಒಪ್ಪಿಗೆ

'ಹಳೆ ಜನತಾ ಪರಿವಾರ' ಮತ್ತೆ ಒಂದಾಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್.ಜೆ.ಡಿ ಪಕ್ಷದ ನಂತರ ಬಿಹಾರದ ಆಡಳಿತ ಪಕ್ಷ ಜೆಡಿಯು ಹಳೆ ಜನತಾ ಪರಿವಾರದೊಂದಿಗೆ ವಿಲೀನವಾಗಲು ಸಮ್ಮತಿ ಸೂಚಿಸಿದೆ. ರಾಜ್ಯದ ಜಾತ್ಯಾತೀತ ಜನತಾದಳವೂ ಸೇರಿದಂತೆ ಒಟ್ಟು ಆರುಪಕ್ಷಗಳು...

ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ, ಕ್ಷಮೆ ಕೇಳಲು ನಿರಾಕರಿಸಿದ ಶರದ್ ಯಾದವ್

ಮಹಿಳೆಯರ ಬಗ್ಗೆ ಅಸಭ್ಯ ರೀತಿಯಲ್ಲಿ ಮಾತನಾಡಿದರೂ ತಮ್ಮ ಮೊಂಡು ವಾದವನ್ನೇ ಮುಂದುವರೆಸಿರುವ ಜೆಡಿಯು ನಾಯಕ ಶರದ್ ಯಾದವ್ ಅವರನ್ನು ಕೇಂದ್ರ ಮಾನವ ಮತ್ತು ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿರಿಯ ರಾಜಕಾರಣಿಯಾಗಿರುವ ಶರದ್ ಯಾದವ್ ಅವರು ಮಹಿಳೆಯರ...

ಭೂಸ್ವಾಧೀನ ಕಾಯ್ದೆ ವಿರುದ್ಧ ನಿತೀಶ್‌ ಕುಮಾರ್ ಉಪವಾಸ ಧರಣಿ

ಕೇಂದ್ರ ಎನ್‌.ಡಿ.ಎ ಸರ್ಕಾರದ ಭೂಸ್ವಾಧೀನ ಕಾಯ್ದೆ ಮಸೂದೆ ವಿರೋಧಿಸಿ ಸಂಯುಕ್ತ ಜನತಾದಳ (ಜೆಡಿಯು) ಕಾರ್ಯಕರ್ತರು ಬಿಹಾರದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಒಂದು ದಿನ ಉಪವಾಸ ಧರಣಿ ನಡೆಸಿದ್ದಾರೆ. ಜೆಡಿಯುದ ಎಲ್ಲ ಶಾಸಕರು, ಕಾರ್ಯಕರ್ತರು, ಸಂಸದರು ಕೂಡ 12...

ಜೆಡಿಯುನ 7 ಸಚಿವರ ಅಮಾನತು

ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಬಿಹಾರ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರಿಗೆ ನಿಷ್ಠೆ ಹೊಂದಿದ್ದ 7 ಮಂದಿ ಸಚಿವರನ್ನು ಜೆಡಿಯು ಅಮಾನತು ಮಾಡಿದೆ. ಫೆ.20ರಂದು ವಿಧಾನಸಭೆಯಲ್ಲಿ ಬಹುಮತ ಸಬೀತು ಪಡಿಸಬೇಕಾಗಿದ್ದು, ಅದಕ್ಕೂ ಮುನ್ನ ಮಾಂಝಿ ಬೆಂಬಲಿಗರ ಬಲವನ್ನು ಕುಗ್ಗಿಸಲು ನಿತೀಶ್‌ ಕುಮಾರ್...

ಜೆಡಿಯುನಲ್ಲಿ ಒಡಕುಂಟುಮಾಡಲು ಬಿಜೆಪಿ ಯತ್ನ: ನಿತೀಶ್ ಕುಮಾರ್

ಕೇಂದ್ರ ಬಿಜೆಪಿ ಸರ್ಕಾರ ಜೆಡಿಯು ಪಕ್ಷದಲ್ಲಿ ಒಡಕನ್ನುಂಟು ಮಾಡಿ ಬಿಹಾರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಜೆಡಿಯು ನಾಯಕ ನಿತೀಶ್ ಕುಮಾರ್ ಆರೋಪಿಸಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಭೇಟಿಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಸರ್ಕಾರ ರಚಿಸಲು 130...

ಜೆಡಿಯು ಶಾಸಕಾಂಗ ಪಕ್ಷದ ನಾಯಕನಾಗಿ ನಿತೀಶ್ ಆಯ್ಕೆ ಅಸಂವಿಧಾನಿಕ: ಕೋರ್ಟ್

'ಜೆಡಿಯು' ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವ...

ಜೆಡಿಯು ನಾಯಕರಿಂದ ರಾಜ್ಯಪಾಲರ ಭೇಟಿ: ಮಾಂಝಿಯಿಂದ ಪ್ರಧಾನಿ ಜತೆ ಚರ್ಚೆ

ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಜೆಡಿಯು ಶಾಸಕರು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಹಾರ ಸಿಎಂ ಜಿತನ್‌ ರಾಂ ಮಾಂಝಿ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಿರುವ ಜೆಡಿಯು, ನಿತೀಶ್ ಕುಮಾರ್ ಅವರನ್ನು ಶಾಸಕಾಂಗ...

ಜೆಡಿಯು ನಾಯಕರ ತಂತ್ರಕ್ಕೆ ಮಾಂಝಿ ಪ್ರತಿತಂತ್ರ: ಬಿಹಾರ ವಿಧಾನಸಭೆ ವಿಸರ್ಜನೆ ಸಾಧ್ಯತೆ

ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವನೆ ಹೊಂದಿರುವ ಬಿಹಾರದಲ್ಲಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಜೆಡಿಯು ನಾಯಕರು ದೆಹಲಿ ಚುನಾವಣೆ ಫಲಿತಾಂಶದ ಬಳಿಕ ನಿತೀಶ್ ಕುಮಾರ್ ಅವರನ್ನು ಬಿಹಾರದ ಮುಖ್ಯಮಂತ್ರಿ ಮಾಡುವ ಚಿಂತನೆಯಲ್ಲಿದ್ದರೆ, ಸಿ.ಎಂ ಪದವಿ ಬಿಟ್ಟುಕೊಡಲು ಸಿದ್ಧರಿಲ್ಲದ ಹಾಲಿ ಮುಖ್ಯಮಂತ್ರಿ ಜಿತನ್ ರಾಮ್...

ಸಿ.ಎಂ ಸ್ಥಾನದಿಂದ ಪದಚ್ಯುತಿಗೊಳಿಸುವ ಸಾಧ್ಯತೆ ತಳ್ಳಿಹಾಕಿದ ಜಿತನ್ ರಾಮ್ ಮಾಂಝಿ

ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಗಳ ವರದಿಗಳನ್ನು ತಳ್ಳಿಹಾಕಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ತಯಾರಿ ಬಗ್ಗೆ ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್...

ಮರುಮತಾಂತರದ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ: ಕಾಂಗ್ರೆಸ್

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ನಡೆದ ಮರುಮತಾಂತರದ ವಿಷಯದ ಬಗ್ಗೆ ಸಂಸತ್ ನಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಗದ್ದಲ ಮುಂದುವರೆಸಿವೆ. ಮರುಮತಾಂತರದ ಬಗ್ಗೆ ಕೋಲಾಹಲ ಸೃಷ್ಠಿಸಿರುವ ಸಂಸತ್ ಸದಸ್ಯರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ....

ಆರ್ ಜೆ ಡಿ-ಜೆಡಿಯು ವಿಲೀನ ಸಾಧ್ಯತೆ

ಎರಡು ದಶಕಗಳ ವೈರತ್ವ ಮರೆತು ಒಂದಾಗಿರುವ ಆರ್‌ ಜೆ ಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಹಾಗೂ ಜೆಡಿಯುನ ನಿತೀಶ್‌ ಕುಮಾರ್‌ ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ಪಕ್ಷಗಳನ್ನು ವಿಲೀನಗೊಳಿಸುವ ಸಾಧ್ಯತೆ ಇದೆ. ಹರ್ಯಾಣ, ಮಹಾರಾಷ್ಟ್ರ ಚುನಾವಣೆ...

ಕಾಂಗ್ರೆಸ್ ನೊಂದಿಗೆ ಅಂತರ ಕಾಯ್ದುಕೊಳ್ಳಲು ಜೆಡಿಯುಗೆ ನಿತೀಶ್ ಕುಮಾರ್ ಸೂಚನೆ

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ನೊಂದಿಗೆ ಕೈಜೋಡಿಸಿದ್ದ ಜೆಡಿಯು ಈಗ ಕಾಂಗ್ರೆಸ್ ವಿರುದ್ಧವೇ ತಿರುಗಿ ಬಿದ್ದಿದೆ. ಬಿಹಾರದ ಪ್ರಥಮ ಮುಖ್ಯಮಂತ್ರಿ ಕೃಷ್ಣ ಸಿಂಗ್ ಅವರ 127ನೇ ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಬಿಹಾರ ಮಾಜಿ ಸಿ.ಎಂ...

ಎಸ್.ಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಪ್ರತ್ಯಕ್ಷ

'ಸಮಾಜವಾದಿ ಪಕ್ಷ'(ಎಸ್.ಪಿ)ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ಅಚ್ಚರಿ ಮೂಡಿಸಿದ್ದಾರೆ. ಅ.8ರಂದು ಉದ್ಘಾಟನೆಗೊಂಡ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಎಸ್.ಪಿ ಪರಮೋಚ್ಛ ನಾಯಕ ಮುಲಾಯಂ ಸಿಂಗ್ ಯಾದವ್ ಅವರೊಂದಿಗೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ವೇದಿಕೆ...

ಬಿಹಾರದಲ್ಲಿ ನಿತೀಶ್-ಲಾಲೂ ಮೈತ್ರಿಕೂಟಕ್ಕೆ ಮನಸೋತ ಮತದಾರ

ಶತೃವಿನ ಶತೃ ಮಿತ್ರ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದ್ದು ಆರ್.ಜೆ.ಡಿ, ಜೆಡಿಯು, ಕಾಂಗ್ರೆಸ್ ಪಕ್ಷದ ಮೈತ್ರಿಗೆ ಬಿಹಾರದ ಮತದಾರ ಮನಸೋತಿದ್ದಾನೆ. ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಜೆಡಿಯು, ಆರ್.ಜೆ.ಡಿ, ಕಾಂಗ್ರೆಸ್ ಮೈತ್ರಿಕೂಟ 6 ಕ್ಷೇತ್ರಗಳನ್ನು ಪಡೆದಿದೆ....

ಉಪಚುನಾವಣೆ: ಆರ್.ಜೆ.ಡಿ-ಜೆಡಿಯು 2ನೇ ಸಮಾವೇಶ

20 ವರ್ಷಗಳ ನಂತರ ಮೈತ್ರಿ ಮಾಡಿಕೊಂಡಿರುವ ಆರ್.ಜೆ.ಡಿ-ಜೆಡಿಯು ಬಿಹಾರದಲ್ಲಿ ಆ.17ರಂದು 2ನೇ ಸಮಾವೇಶ ಹಮ್ಮಿಕೊಂಡಿದೆ. ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್, ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗೆ ಪ್ರಚಾರ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited