ಪಟ್ನಾ : ಬಿಹಾರ್ ಚುನಾವಣೆಯ ಇತ್ತೀಚಿನ ವರದಿ ಬಂದಾಗ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಕೂಟ ಮುನ್ನಡೆ ಸಾಧಿಸಿದೆ.
ಮತ ಎಣಿಕೆಯ ಪ್ರಾರಂಭದಲ್ಲಿ ಮುನ್ನಡೆ ಸಾಧಿಸಿದ್ದ ಎನ್ ಡಿ ಎ ಮೈತ್ರಿಕೂಟಕ್ಕೆ ನಂತರ ಹಿನ್ನಡೆಯಾಗಿದೆ. ಇತ್ತೀಚಿನ ವರದಿಯ ಪ್ರಕಾರ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು, ಅರ್ ಜೆ ಡಿ ಮತ್ತು ಕಾಂಗ್ರೆಸ್ ಮಹಾಮೈತ್ರಿ ಕೂಟ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚನೆಗೆ ಬೇಕಾದ ಬಹುಮತ ಪಡೆಯುವತ್ತ ಸಾಗಿದೆ.
ಒಟ್ಟು 243 ಸ್ಥಾನಗಳಿರುವ ಬಿಹಾರ್ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 122 ಸ್ಥಾನಗಳ ಅವಶ್ಯಕತೆ ಇದೆ.
ಇತ್ತೀಚಿನ ವರದಿ ಪ್ರಕಾರ ಪ್ರಮುಖ ಪಕ್ಷಗಳ ಮುನ್ನಡೆ ಈ ಕೆಳಗಿನಂತಿದೆ.
ಬಿಜೆಪಿ + : 95
ಜೆಡಿಯು+ : 130
ಇತರೆ : 10