Untitled Document
Sign Up | Login    
ಹೀಗೊಂದು ಲವ್ ಸ್ಟೋರಿ

ಕಾಲೇಜ್‌ ಹತ್ರ ನಡ್ಕೊಂಡು ಬರ್ತಾ ಇದ್ದೆ
ರೋಡ್‌ ಕ್ರಾಸ್‌ ಮಾಡುವಾಗ ಅವಳನ್ನ ನೊಡ್ದೆ
ಗಾಡಿಗಳ ಮಧ್ಯ ಅವಳು ಸರಿಯಾಗಿ ಕಾಣಿಸ್ಲೇ ಇಲ್ಲ
ನನ್ನ ಡವ್‌ನ ನಾನ್ ಪಟಾಯ್ಸೋಕೆ ಆಗ್ಲೇ ಇಲ್ಲ...

ಕ್ಲಾಸ್‌ ನಲ್ಲಿ ಲೆಕ್ಚರ್‌ ಬೋರ್‌ ಆಗ್ತಾ ಇತ್ತು
ನೋಟ್ಸ್‌ ನಲ್ಲಿ ಪೇಜು, ಪೆನ್‌ನಲ್ಲಿ ಇಂಕು ಖಾಲಿ ಆಗ್ತಾ ಇತ್ತು
ಹಾಳಾದ್‌ ಟೀಚರ್‌ ನಿದ್ದೆ ಮಾಡೋಕ್‌ ಬಿಡ್ಲೇ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

ಒಂದಷ್ಟ್‌ ಮೀಟಿಂಗು ಬೇಜ್ಜಾನ್‌ ಟಾಕಿಂಗು
ಬೈಕಲ್ಲಿ ರೋಮಿಂಗು, ಮಾಲ್‌ನಲ್ಲಿ ಡೇಟಿಂಗು
ಡ್ಯಾಡಿ ಪಾಕೆಟ್‌ಮನಿ ರೈಸ್‌ ಮಾಡ್ಲೇ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

ಅವರಪ್ಪಂಗೆ ವಿಷಯ ಗೊತ್ತಾಯ್ತು
ಗ್ಯಾಪಲ್ಲಿ ನನ್‌ ಪ್ಯಾಂಟ್‌ ಒದ್ದೆ ಆಗೋಯ್ತು
ಭಾವಿ ಮಾವನ ಡಿಮಾಂಡ್‌ ಲಿಸ್ಟ್‌ ಮುಗಿಲೇ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

ಹೆಂಗೋ ಒಂದಷ್ಟ್‌ ಕಾಸ್‌ ಮಾಡ್ತೀನಿ ಅಂದೆ
ನೈಟ್‌ ಅಂಡ್‌ ಡೇ ಹರ್ಕೊಂಡ್‌ ಕೆಲ್ಸನೂ ಮಾಡ್ದೆ
ಕಾಸ್‌ ನ ಡಬಲ್‌ ಮಾಡೋ ದಾರಿ ಸಿಗಲೇ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

ಅವರಪ್ಪಂಗೆ ಲಕ್ಷ ದುಡಿಯೋ ಗಂಡ್‌ ಸಿಕ್ದ
ನಿನ್‌ ಲವ್‌ ಸ್ಟೋರಿ ಮುಗೀತು ಅಂತ ನಂಗ್‌ ಹೇಳ್ದಾ
ಅವರ ಮನೆ ನಾಯಿ ಕೂಗೋದು ನಿಲ್ಸ್ಲೇ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

ಐ ಆಮ್‌ ಸಾರಿ ಬೈ ಬೈ ಅಂತ ಹೇಳಿ ಹೊಂಟೇ ಹೋದ್ಲು
ರೋಡ್‌ ಕಾರ್ನರ್‌ನಲ್ಲಿ ಬಾರ್‌ ಇದೆ ನೋಡ್ಕೊ ಅಂದ್ಲು
ಬೀರ್‌ ಕುಡಿದ ಮೇಲೆ ಬಿಲ್‌ ಕಟ್ಟೋಕೆ ಕಾಸ್ ಇಲ್ಲ
ನನ್‌ ಡವ್‌ನ ನಾನ್‌ ಪಟಾಯ್ಸೋಕೆ ಆಗ್ಲೇ ಇಲ್ಲ

By : ಭರತ್ ಎಸ್.

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited