Untitled Document
Sign Up | Login    
ಪುಸ್ತಕ ಬಾಳಿನ ಮಿತ್ರ

ಪುಸ್ತಕ ನನ್ನಯ ಬಾಳಿನ ಮಿತ್ರ
ಅದುವೆ ಅಕ್ಷಯ ಜ್ಞಾನದ ಪಾತ್ರ

ಪುಸ್ತಕದೊಳಗಿದೆ ಹೂವಿನ ಅಂದ
ಪಕಳೆಯ ಹಾಗೆ ಪುಟಗಳು ಚಂದ

ಮುತ್ತಿನ ಮಾಲೆ ಅಕ್ಷರ ಸಾಲೇ
ಮಳೆ ಹನಿದಂತೆ ವಿಚಾರ ಧಾರೆ

ಕಡಲಲೆಯಂದದ ಕಲ್ಪನೆ ಲಹರಿ
ಸುಖ ಸಂತೋಷದ ಬೆಳಕಿನ ದಾರಿ

ಅಜ್ಜನ ಕತೆಗಳು ಗುರು ಉಪದೇಶ
ಅಮ್ಮನ ಪ್ರೀತಿಹಿತ ಕೋಶ

ಎಲ್ಲಾ ತುಂಬಿದೆ ಅಮೃತವಡಗಿದೆ
ಹೊತ್ತಿಗೆ ಒದಗುವ ಮಿತ್ರನೆ ಹೊತ್ತಿಗೆ

By : ವನರಾಗ ಶರ್ಮಾ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited