Untitled Document
Sign Up | Login    
ಜಗದ ಜೊತೆಗಿನ ಗುದ್ದಾಟ

ನನಗೆ ಅರಿವಿಲ್ಲದೆ ಇಳಿದು ಬಿಟ್ಟಿದ್ದೆ
ಜಗದೊಳಗಿನ ಗುದ್ದಾಟಕ್ಕೆ
ಅದು ಪೂರ್ವ ಸಿದ್ದತೆಯೂ ಇಲ್ಲದೆ
ಬದುಕಿನ ಸಮರಕ್ಕೆ
ಎದುರಲ್ಲಿ ಯಾರೆಂದು ತಿಳಿಯದೆ ಬಂದೆ
ವೈರಿಗಳ ಎದುರಿಸಲು ಪಣತೊಟ್ಟು ನಿಂತೆ
ರಣರಂಗದ ಉದ್ದಗಲದ ಮಾಹಿತಿಯೇ ಇಲ್ಲ
ಯುದ್ಧಾಸ್ತ್ರಗಳ ಪ್ರಯೋಗದ ಅರಿವು ನನಗಿಲ್ಲ
ಕಲಿಕೆಯೂ ಇಲ್ಲ, ಹೋರಾಟವೂ ಇಲ್ಲ
ಗುದ್ದಾಡಿ ಒದ್ದಾಡಿ ಕೊನೆಗೂ ಗೆದ್ದೆ
ಗೆದ್ದೆ ಎಂದು ಬೀಗುತ್ತಿದ್ದಾಗಲೇ ಎದುರಾಯ್ತು ಮತ್ತೊಂದು ಕಾದಾಟ
ಬದುಕಿನ ಕೊನೆಯವರೆಗೂ ಮುಗಿದಿಲ್ಲ ಹೋರಾಟ

By : ವರದರಾಜ ಜಿ.ಭಟ್‌

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited