Untitled Document
Sign Up | Login    
ಅನಂತದೆಡೆಗೆ ಪಯಣ

ಬದುಕೊಂದು ಹೋರಾಟ ಜೀವಿಗಳ ಗುದ್ದಾಟ
ಕಾಲಚಕ್ರದಲ್ಲಿ ಮೇಲೇರಲೇ ಬೇಕು, ಕೆಳಗಿಳಿಯಲೇ ಬೇಕು
ಬದುಕೆಂಬ ಬಂಡಿಯನು ಏರಿದ ಮೇಲೆ
ಜೀವನ ಪಥದಲಿ ಪಯಣಿಸಲೇ ಬೇಕು
ಗುರಿಯ ಮುಟ್ಟುವ ಛಲದಲ್ಲಿ
ಬಂಡಿ ಓಡಿಸಲೇ ಬೇಕು
ಜೀವನ ಪಥವು ಏರುಪೇರಾದ ಹಾದಿ
ಅಲ್ಲಿ ಕಲ್ಲೆಷ್ಟೋ, ಮುಳ್ಳೆಷ್ಟೋ
ತೊಡಕನು ಸರಿಸಿ ಮುಂದೆ ಸಾಗಲೇಬೇಕು

ಈ ದೀರ್ಘ ದಾರಿಯಲಿ ನೂರೆಂಟು ಕವಲುಗಳು
ತಪ್ಪು ಆಯ್ಕೆಯಾದರೆ ಪಯಣಿಗನ ದಿಕ್ಕೇ ಬದಲು
ಮಸುಕಾದ ಹಾದಿಯಲಿ ಗುರಿಮಾತ್ರ ಕಾಣದು
ದಾರಿ ತೋರಿಸಲು ಗುರುವಿಲ್ಲ, ಅರಿವಿಲ್ಲ
ಹಿಂದಿರುಗಿ ನೋಡಲಉ ಕಾಣುವ ಮಾಸಿದ ಮೈಲುಗಲ್ಲು
ಅಲ್ಲಲ್ಲಿ ಎಡವಿ ಬಿದ್ದ ಗುರುತುಗಳು
ಉಲಿದ ಪಯಣಕೆ ಈ ಅನುಭವಗಳೇ ಗುರುವು

ಬದುಕೆಂಬ ಪಥದಲ್ಲಿ ಎಷ್ಟೊಂದು ನೆಂಟರು
ಸಂಸಾರ ಬಂಡಿಯಲಿ ಪಯಣಿಗನು ಒಂಟಿಗ
ಇಂದಿರುವ ಸಾಥಿಗಳು ಇಷ್ಟಕ್ಕೇ ಸೀಮಿತ
ಗುರಿಯ ಮುಟ್ಟುವವರೆಗೂ ನೆನಪೊಂದೆ ಶಾಶ್ವತ

ಬಂಡಿಯ ಹೊಯ್ದಾಟದಲ್ಲಿ ಆಯಾಸ ದಣಿವಿಲ್ಲ
ಕುಂಟುತ್ತ ತೆವಲುತ್ತ ಯಾತ್ರೆ ಮುಗಿಸಲೇ ಬೇಕು

ಅಯ್ಯೋ..! ಇದು ಬಾಳ ಮುಂಜಾವು
ಬೆಳಕು ಇರುವುದು ಇನ್ನೂ ಮುಂದೆ
ಬೆಳಕನ್ನು ಮುಟ್ಟಲೇ ಬೇಕು
ಹೊಸ ಯಾತ್ರೆಗೆ ಅಣಿಯಾಗಲು

By : ವರದರಾಜ್‌ ಜಿ. ಭಟ್‌

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited