Untitled Document
Sign Up | Login    
ಹೂವಿನ ವಾಸನೆ ಕಾಸಿನ ಝಣ ಝಣ

ಘಮ ಘಮ ವಾಸನೆ ಮೈಸೂರು ಮಲ್ಲಿಗೆ
ಬೇಕೆ ಬೇಕೆ ತಕ್ಕೊಳ್ಳಿ
ಕೂಗುತ ಬಂದನು ಟೋಪೀವಾಲ
ಹೂವಿನ ಗಾಡಿಯ ತಾ ತಳ್ಳಿ

ಆಟದ ಬಯಲಿಗೆ ಆಡಲು ಹೊರಟ
ಬಾಲುವು ಅದನು ನೋಡಿ
ಮಲ್ಲಿಗೆಯನ್ನು ಮೆಲ್ಲಗೆ ಎತ್ತಿ
ವಾಸನೆ ಸವಿದನು ಮೂಸಿ

ಹಾಗೇ ಮುಂದಕೆ ಹೋಗುತ್ತಿರಲು
ಕರೆದನು ಕೂಗಿ ಹೂಗಾರ
ವಾಸನೆ ಸವಿದೆ ಕಾಸನು ನೀಡೈ
ಎಂದನು ಮಾಡಿ ತಕರಾರ

ಬಾಲುವು ಮರಳಿ ಬಂದನು ಬಳಿಗೆ
ಕಿಸೆಯಾ ಝಣ ಝಣ ರೊಕ್ಕವನು
ಬಡಿಯುತ ಸದ್ದನು ಮಾಡುತ ನುಡಿದನು
ಕೇಳೈ ರೊಕ್ಕದ ಶಬ್ದವನು

ಸವಿದಿಹ ವಾಸನೆಗಾಯಿತು ರೊಕ್ಕದ
ಝಣ ಝಣ ಶಬ್ದವ ನೀ ಕೇಳು
ಲೆಕ್ಖವು ಚುಕ್ತಾ ಆಯಿತು ಅಲ್ಲಿಗೆ
ಎನ್ನುತ ನಡೆದನು ಭಲೆ! ಬಾಲು!!

By : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited