Untitled Document
Sign Up | Login    
ಬಂತೊ ಬಂತೊ ಮೆಟ್ರೋ ರೈಲು !

ಮೆಟ್ಟಿತೊ ಮೆಟ್ಟಿತೊ ಬೆಂಗಳೂರನ್ನು
ಮೆಟ್ರೋ ರೈಲು ಬಲು ಭರದಿ
ಮೆಟ್ಟಿರೊ ಎಲ್ಲರೂ ಹತ್ತು ಕುಳಿತು
ಸುತ್ತಿರೊ ನಗರವ ಸಡಗರದಿ

ಎಷ್ಟೊ ಕಾಲದ ಕನಸಿನ ಕೂಸು
ಅದು ನನಸಾಯಿತು ತಾನಿಂದು
'ರೋಡ್ ಜಾಮ್'ನಲ್ಲಿ ನಿಲ್ಲುವ ಕಷ್ಟ
ತಪ್ಪಿತು ಕೊಂಚ ಟ್ರೇನ್ ಬಂದು

ದರವೂ ಅಗ್ಗ ಚಲಿಪುದು ಬೇಗ
ಬರುವುದು ವೇಳೆಗೆ ಸರಿಯಾಗಿ
ಬೆಂಗಳೂರನ್ನು ಸುತ್ತುತ್ತ ಜನರ
ಒಯ್ಯುವುದೀಗ ಸೇಫಾಗಿ

ಕನ್ನಡ ನಾಡಿನ ರಾಜಧಾನಿಗೆ
ಹೊಸ ಸುಖಯಾನ ಬಂತೀಗ
ಬೆಂಗಳೂರ್ ನಗರಕೆ ಎಂಥ ಮೆರಗು !
ಬನ್ನಿರಿ ನೋಡಲು ವೈಭೋಗ !!

ಆಫೀಸ್ ತಲುಪಿರಿ ಮನೆಯನು ಮುಟ್ಟಿರಿ
ಸಮಯಕೆ - ಇನ್ನು ಬಿಡಿ ಚಿಂತೆ
ಮಕ್ಕಳಿಗಂತೂ ರಜೆದಿನ ಬಂದರೆ
'ರೈಲು ವಿಹಾರ'ದ ಖುಷಿ ಅಂತೆ!

By : ವನರಾಗ ಶರ್ಮಾ 

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited